Yakshagana Kalaranga

Past Events

ಯಕ್ಷಗಾನ ಕಲಾರಂಗದ 78ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಚೈತ್ರಾ (ಶ್ರೀಮತಿ ಲಕ್ಷ್ಮಿ ಮತ್ತು ಶ್ರೀ ಜಯಂತ ಇವರ ಪುತ್ರಿ) ಇವಳಿಗೆ ಬೈಂದೂರು ತಾಲೂಕಿನ ತೆಗ್ಗರ್ಸೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕರಾದ ಜಪಾನ್‍ನ ಹರಿಕೃಷ್ಣ ಭಟ್ ಅವರು ತಮ್ಮ ತಂದೆ-ತಾಯಂದಿರಾದ ವಾಸುದೇವ ಭಟ್ ಮತ್ತು ರುಕ್ಮಿಣಿ ಭಟ್ ಇವರ ಸವಿನೆನಪಿನಲ್ಲಿ, 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ರುಕ್ಮಿಣೀವಾಸುದೇವ’ ವನ್ನು 16.07.2025 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತನ್ನ ಬಾಲ್ಯದ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡರು. […]

ಯಕ್ಷಗಾನ ಕಲಾರಂಗದ 78ನೆಯ ಮನೆ ಹಸ್ತಾಂತರ Read More »

ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರಧಾನ ಸಮಾರಂಭ’ ಮತ್ತು ಯಕ್ಷಗಾನ ಮಾರ್ಗದರ್ಶಿ ಶಿಬಿರ ಸಮಾರೋಪ

4.7.2025 ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶತಾವಧಾನಿ ಡಾ.ಆರ್. ಗಣೇಶರಿಗೆ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ವಿದ್ವಾಂಸರಿಗೆ ನೀಡಲಾಗುವ, 60000 ರೂ. ನಗದನ್ನೊಳಗೊಂಡ “ಯಕ್ಷಗಾನ ಕಲಾರಂಗ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಲಕ್ಷ್ಮೀಶ ತೋಳ್ಪಾಡಿ ವಹಿಸಿದ್ದು,ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಿದರು.ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು.ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪವನ್ನು ಇದೇ ಸಂದರ್ಭದಲ್ಲಿ ನೆರವೇರಿಸಲ್ಪಟ್ಟಿತು. ಪವನ್ ಕಿರಣ್ಕೆರೆ,

ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರಧಾನ ಸಮಾರಂಭ’ ಮತ್ತು ಯಕ್ಷಗಾನ ಮಾರ್ಗದರ್ಶಿ ಶಿಬಿರ ಸಮಾರೋಪ Read More »

ಯಕ್ಷಗಾನ ಕಲಾರಂಗದ 77ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪೂರ್ವಿಕಾಳಿಗೆ (ಶ್ರೀಮತಿ ಚಂದ್ರಾವತಿ ಮತ್ತು ಶ್ರೀ ಮಾದೇವ ಖಾರ್ವಿ ಇವರ ಪುತ್ರಿ) ಬೈಂದೂರು ತಾಲೂಕಿನ ಮರವಂತೆಯಲ್ಲಿ ಬೆಂಗಳೂರಿನ ಶ್ರೀಮತಿ ಗೀತಾ ಎಲ್. ಎನ್. ಶೆಟ್ಟಿಯವರು ತಮ್ಮ ತಂದೆ-ತಾಯಿಯವರಾದ ಬಿ. ಎಲ್. ಎನ್. ರೈ ಮತ್ತು ಲಲಿತಾ ರೈಯವರ ಸವಿ ನೆನಪಿನಲ್ಲಿ, 6.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ಲಲಿತಾ ನಿವಾಸ’ವನ್ನು 02.07.2025 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಠಿಣ ಪರಿಶ್ರಮಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ

ಯಕ್ಷಗಾನ ಕಲಾರಂಗದ 77ನೆಯ ಮನೆ ಹಸ್ತಾಂತರ Read More »

ಯಕ್ಷಗಾನ ಕಲಾರಂಗ ವೃತ್ತಿ ಮೇಳದ ಕಲಾವಿದರಿಗಾಗಿ ಆಯೋಜಿಸಿದ ನಾಲ್ಕು ದಿನಗಳ ‘ಯಕ್ಷಗಾನ ಮಾರ್ಗದರ್ಶಿ ಶಿಬಿರ’ದ ಉದ್ಘಾಟನಾ ಸಮಾರಂಭ-2025

ಕಲಾಭಿವ್ಯಕ್ತಿಯಲ್ಲಿ ಔಚಿತ್ಯ ಪ್ರಜ್ಞೆ ಬಹಳ ಮುಖ್ಯ – ಶ್ರೀ ಹರಿನಾರಾಯಣದಾಸ ಅಸ್ರಣ್ಣ. ಭರತ ನಾಟ್ಯಶಾಸ್ತ್ರದಲ್ಲಿ ಹೇಳಿದ ಆಂಗಿಕ, ವಾಚಿಕ, ಸಾತ್ವಿಕ, ಆಹಾರ್ಯ ಈ ನಾಲ್ಕು ಅಂಗಗಳನ್ನು ಹೊಂದಿರುವ ಯಕ್ಷಗಾನ ಒಂದು ಪರಿಪೂರ್ಣ ಕಲಾಪ್ರಕಾರ. ಇದರ ಸ್ಪಷ್ಟವಾದ ತಿಳುವಳಿಕೆ ಯಕ್ಷಗಾನ ಕಲಾವಿದನಿಗಿರಬೇಕು. ಔಚಿತ್ಯ ಪ್ರಜ್ಞೆ ಇಲ್ಲದಿದ್ದರೆ ಅಪಸವ್ಯಗಳು ಆಗುವ ಸಾಧ್ಯತೆಯಿದೆ. ಕಲಾವಿದರಿಗೆ ಈ ಅರಿವನ್ನು ಮೂಡಿಸುವ ಕಾರ್ಯಗಾರ ಶಿಬಿರಗಳು ನಿರಂತರ ನಡೆಯುತ್ತಿರಬೇಕು ಎಂದು ಕಟೀಲು ದೇವಳದ ಆನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಅಸ್ರಣ್ಣರು ಹೇಳಿದರು. ಅವರು 01.07.2025 ರಂದು

ಯಕ್ಷಗಾನ ಕಲಾರಂಗ ವೃತ್ತಿ ಮೇಳದ ಕಲಾವಿದರಿಗಾಗಿ ಆಯೋಜಿಸಿದ ನಾಲ್ಕು ದಿನಗಳ ‘ಯಕ್ಷಗಾನ ಮಾರ್ಗದರ್ಶಿ ಶಿಬಿರ’ದ ಉದ್ಘಾಟನಾ ಸಮಾರಂಭ-2025 Read More »

ಯಕ್ಷಶಿಕ್ಷಣ ಟ್ರಸ್ಟಿನ ವಾರ್ಷಿಕ ಮಹಾಸಭೆ ಮತ್ತು ಯಕ್ಷಗಾನ ಗುರುಗಳ ಸಭೆ

ಯಕ್ಷಶಿಕ್ಷಣ ಟ್ರಸ್ಟಿನ ವಾರ್ಷಿಕ ಮಹಾಸಭೆ 25.6.2025 ರಂದು ಗೀತಾ ಮಂದಿರದಲ್ಲಿ ಪರ್ಯಾಯ ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಜರಗಿತು.ಶಾಸಕರು, ಟ್ರಸ್ಟ್ ನ ಅಧ್ಯಕ್ಷರೂ ಆದ ಯಶ್ಪಾಲ್ ಎ.ಸುವರ್ಣ ಮತ್ತು ದಿವಾನರಾದ ನಾಗರಾಜ ಆಚಾರ್ಯ ಉಪಸ್ಥಿತಿಯಲ್ಲಿ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ, ಅನುಮೋದಿಸಲಾಯಿತು.ಬಳಿಕ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಗಾನ ಗುರುಗಳ ಪ್ರಥಮ ಸಭೆ ಶಾಸಕರ ಉಪಸ್ಥಿತಿಯಲ್ಲಿ ಜರುಗಿತು.ಉಡುಪಿ,ಕಾಪು, ಕುಂದಾಪುರ,ಬೈಂದೂರು ವಿಧಾನಸಭಾ ಕ್ಷೇತ್ರಗಳ 92 ಪ್ರೌಢಶಾಲೆಗಳಿಗೆ 40 ಗುರುಗಳನ್ನು ಯಕ್ಷಗಾನ ಕಲಿಸಲು ನಿಯುಕ್ತಿಗೊಳಿಸಲಾಯಿತು.ಯಕ್ಷಶಿಕ್ಷಣ

ಯಕ್ಷಶಿಕ್ಷಣ ಟ್ರಸ್ಟಿನ ವಾರ್ಷಿಕ ಮಹಾಸಭೆ ಮತ್ತು ಯಕ್ಷಗಾನ ಗುರುಗಳ ಸಭೆ Read More »

ವಿದ್ಯಾಪೋಷಕ್ 76 ನೆಯ ಮನೆ ಹಸ್ತಾಂತರ.

ದ್ವಿತೀಯ ಪಿಯುಸಿ ವಿದ್ಯಾಪೋಷಕ್ ವಿದ್ಯಾರ್ಥಿನಿ ಸುಶ್ಮಿತಾ (ಶ್ರೀಮತಿ ಸವಿತಾ ಮತ್ತು ದಿ. ಸುಧಾಕರ ಶೆಟ್ಟಿ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಮೂಡುಮುಂದದ ಮೋರ್ಟುವಿನಲ್ಲಿ ತಮ್ಮ ಮೂವತ್ತನೇ ವರ್ಷದ ವಿವಾಹ ಮಹೋತ್ಸವದ ಸವಿನೆನಪಿಗಾಗಿ,6.50 ಲಕ್ಷ ರೂಪಾಯಿ ವೆಚ್ಚದಲ್ಲಿ”ಇಂಡಿ ವಿಲೇಜ್”ನ ಸಂಸ್ಥಾಪಕರಾದ ಶ್ರೀ ಶ್ರೀಕಾಂತ್ ಕೆ. ಅರಿಮಣಿತ್ತಾಯ ಮತ್ತು ಶ್ರೀಮತಿ ಭಾರತಿ ಶ್ರಿಕಾಂತ್ ದಂಪತಿಗಳು ನಿರ್ಮಿಸಿಕೊಟ್ಟ ‘ವಜ್ರಮ್’ ಮನೆಯನ್ನು ಅರಿಮಣಿತ್ತಾಯ ದಂಪತಿಗಳು 14.06.2025 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.-ಬಳಿಕ ಮಾತನಾಡಿದ ಶ್ರೀಕಾಂತರು ತನ್ನ ಅಜ್ಜ, ತಂದೆ,ತಾಯಿ,ಗುರುಗಳು ತನಗೆ ಪ್ರೇರಕರಾಗಿದ್ದು,ಮುಂದಿನ

ವಿದ್ಯಾಪೋಷಕ್ 76 ನೆಯ ಮನೆ ಹಸ್ತಾಂತರ. Read More »

ಯಕ್ಷಗಾನ ಕಲಾರಂಗದ 75 ನೆಯ ಮನೆ ಹಸ್ತಾಂತರ.

ಸಂಸ್ಥೆಯು ಕುಂದಾಪುರ ತಾಲೂಕಿನ ಹಟ್ಟಿಕುದ್ರುವಿನಲ್ಲಿ ನೀಲಾವರ ಮೇಳದ ಭಾಗವತ ತಿಮ್ಮಪ್ಪ ದೇವಾಡಿಗರಿಗೆ ಸುಮಾರು ಎಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ತನ್ನ ತೀರ್ಥರೂಪರ ಸ್ಮರಣಾರ್ಥ ನಿರ್ಮಿಸಿಕೊಟ್ಟ ಮನೆ ‘ಶ್ರೀ ಮುರಳಿ’ ಯನ್ನು 02.06.2025 ರಂದು ಉಡುಪಿ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಸಂಸ್ಥೆಯ ಅಧ್ಯಕ್ಷರಾದ ಯೋಗೀಶ್ಚಂದ್ರಾಧರ ಉದ್ಘಾಟಿಸಿ, ಯಕ್ಷಗಾನ ಕಲಾರಂಗದ ನಿಸ್ಪೃಹ ಸಾಮಾಜಿಕ ಸೇವೆ, ಪಾರದರ್ಶಕ ವ್ಯವಹಾರ ಎಲ್ಲರನ್ನೂ ಸಂಸ್ಥೆಯತ್ತ ಆಕರ್ಷಿಸಿದೆ. ಈ ಸಂಸ್ಥೆಗೆ ನೀಡಿದ ಪ್ರತಿಯೊಂದು ರೂಪಾಯಿಯೂ ಸದ್ವಿನಿಯೋಗವಾಗುತ್ತದೆ. ಇಂತಹ

ಯಕ್ಷಗಾನ ಕಲಾರಂಗದ 75 ನೆಯ ಮನೆ ಹಸ್ತಾಂತರ. Read More »

ವಿದ್ಯಾಪೋಷಕ್ 74 ನೆಯ ಮನೆ ಹಸ್ತಾಂತರ.

ವಿದ್ಯಾಪೋಷಕ್ ದ್ವಿತೀಯ ಪಿ.ಯು ವಿದ್ಯಾರ್ಥಿನಿ ನವ್ಯಾ (ಶ್ರೀಮತಿ ಮಮತಾ ಮತ್ತು ದಿ ನಾಗರಾಜ ಮೊಗವೀರ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಕುಂಭಾಶಿಯ ಕೊರವಡಿಯಲ್ಲಿ ಕಮಲಾಕ್ಷಿ ಮತ್ತು ಬೈಕಾಡಿ ಶಂಕರನಾರಾಯಣ ರಾಯರ ಸ್ಮರಣೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ‘ಕಮಲ ಶಂಕರ ನಿಲಯ’ ಮನೆಯನ್ನು ಶ್ರೀ ಬೈಕಾಡಿ ಶ್ರೀನಿವಾಸ ರಾವ್ ದಂಪತಿಗಳು 01. 06. 2025 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ತನ್ನ ಮಾತಾ ಪಿತೃಗಳ ನೆನಪಿನ ಈಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲೆಂದು ಹಾರೈಸಿದರು.

ವಿದ್ಯಾಪೋಷಕ್ 74 ನೆಯ ಮನೆ ಹಸ್ತಾಂತರ. Read More »

ಯಕ್ಷಗಾನ ಕಲಾರಂಗ – ಕಲಾವಿದರ ಸಮಾವೇಶ 2025

ಪ್ರತಿವರ್ಷ ಕಲಾರಂಗ ಮೇ 31ರಂದು ನಡೆಸುವ ಕಲಾವಿದರ ಸಮಾವೇಶಕ್ಕೆ ಈವರ್ಷ ಸುವರ್ಣದ ಮೆರಗು. ಶ್ರೀಕೃಷ್ಣಮಠ ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ದಿನಪೂರ್ತಿ ಕಾರ್ಯಕ್ರಮವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನ ಗೊಂಡಿತು. ಅಪರಾಹ್ನದವರೆಗಿನ ಕಲಾಪಗಳು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಜರಗಿತು. ಬೆಳಿಗ್ಗೆ 10.00 ಗಂಟೆಗೆ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಗೋಪಾಲ. ಸಿ. ಬಂಗೇರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ನಮೃತ ಸ್ವಾಗತಿಸಿದರು. ಕಲಾರಂಗದ ಅಧ್ಯಕ್ಷ

ಯಕ್ಷಗಾನ ಕಲಾರಂಗ – ಕಲಾವಿದರ ಸಮಾವೇಶ 2025 Read More »

We're currently hard at work gathering information and crafting content to bring you the best experience. Stay tuned for exciting updates!