ಯಕ್ಷಗಾನ ಕಲಾರಂಗದ 64ನೇ ಮನೆಯ ಉದ್ಘಾಟನೆ.
05-02-2025 ರಂದು ಕಾರ್ಕಳ ತಾಲೂಕಿನ ಶಿವತಿಕೆರೆಯ ಹಿರಿಯಂಗಡಿಯಲ್ಲಿ ವಿದ್ಯಾಪೋಷಕ್ ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಂದರ್ಶಿನಿ ಇವಳಿಗೆ ಉಡುಪಿಯ ನಿವೃತ್ತ ಬ್ಯಾಂಕ್ ಉದ್ಯೋಗಿಗಳಾದ ಸದಾನಂದ ಪಿ.ಶೆಣೈ – ಸಹನಾ ಎಸ್. ಶೆಣೈ ಅವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ 64ನೇ ಮನೆ ” ಸಹನಾ ಸದನ”ವನ್ನು ಸದಾನಂದ ಪಿ .ಶೆಣೈ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಕಲಾರಂಗ ದಾನಿಗಳು ನೀಡಿದ ಒಂದು ರೂಪಾಯಿಯೂ ಪೋಲಾಗದಂತೆ ಫಲಾನುಭವಿಗಳಿಗೆ ತಲಪಿಸುತ್ತದೆ. ಈ ಸಂಸ್ಥೆಗೆ ದಾನ ನೀಡಿ ಆನಂದ ಅನುಭವಿಸಿದ್ದೇನೆ ಎಂದರು. ಅಧ್ಯಕ್ಷ ಸ್ಥಾನವಹಿಸಿದ …