ಯಕ್ಷಗಾನ ಕಲಾರಂಗದ 55ನೆಯ ಮನೆಯ ಉದ್ಘಾಟನೆ.
ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿಗಳಾದ ಪ್ರಥಮ ಪಿ.ಯು.ಸಿ.ಯ ಶ್ರೀನಿಧಿ ಹಾಗೂ ಪ್ರಥಮ ಬಿ.ಇ.ಯ ಭೂಮಿಕಾ ಸಹೋದರಿಯರಿಗೆ ಬ್ರಹ್ಮಾವರ ತಾಲೂಕಿನ ಹೇರಾಡಿಯ ಸಂಕಾಡಿಯಲ್ಲಿ ಶ್ರೀ ಪಣಂಬೂರು ವಾಸುದೇವ ಐತಾಳ್ ಇವರು ತಮ್ಮ 60ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಪ್ರಾಯೋಜಿಸಿದ ನೂತನ ಮನೆ ‘ಕೃಪಾರಂಗ’ 12.10.2024ರಂದು ಉದ್ಘಾಟನೆಗೊಂಡಿತು. ಶ್ರೀ ಪಣಂಬೂರು ವಾಸುದೇವ ಐತಾಳ್ ಶ್ರೀಮತಿ ಮೀನಾಕ್ಷಿ ವಿ. ಐತಾಳ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರ ಸಹೋದರಿ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು. ಕಲಾರಂಗ ವಿಶ್ವಾಸಾರ್ಹತೆ ಮತ್ತು ಸಮಾಜ ಪ್ರೀತಿಯಿಂದ …