ಯಕ್ಷನಿಧಿ

ಯಕ್ಷಗಾನ ಕಲಾವಿದರ ಕ್ಷೇಮ ಚಿಂತನೆಯ ಉದ್ದೇಶದಿಂದ ಸಂಸ್ಥೆ ಪ್ರೊ.ಬಿ.ವಿ.ಆಚಾರ್ಯರ ಸ್ಮರಣಾರ್ಥ ವಿವಿಧ ವೃತ್ತಿ ಮೇಳಗಳ ಸುಮಾರು 1200 ಯಕ್ಷಗಾನ ಕಲಾವಿದರನ್ನೊಳಗೊಂಡ ‘ ಯಕ್ಷನಿಧಿ ’ ಎಂಬ ಉಪಸಮಿತಿಯನ್ನು ಸ್ಥಾಪಿಸಿತು. ಕಲಾವಿದರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ತುರ್ತು ಆರ್ಥಿಕ ನೆರವು, ಕಲಾವಿದರು ಆಕಸ್ಮಿಕವಾಗಿ ನಿಧನ ಹೊಂದಿದಾಗ ಅವರ ಕುಟುಂಬಕ್ಕೆ ಸಾಂತ್ವನ ರೂಪದಲ್ಲಿ ಆರ್ಥಿಕ ನೆರವು, ಯಕ್ಷಗಾನ ಕಲಾವಿದರಿಗೆ ರೂ. ಒಂದು ಲಕ್ಷ ಮೊತ್ತದ ಜೀವನ್ ಆನಂದ್ ಎಲ್.ಐ.ಸಿ. ವಿಮೆ, ಕೊರೋನಾ ಸಂಕಷ್ಟ ಕಾಲದಲ್ಲಿ ಆಹಾರ ಕಿಟ್ ಹಾಗೂ ಆರ್ಥಿಕ ನೆರವು, ಕಲಾವಿದರ ಗೃಹ ನಿರ್ಮಾಣಕ್ಕೆ ಉಡುಗೊರೆ, ಆರು ಜನ ಕಲಾವಿದರಿಗೆ ಮನೆ ನಿರ್ಮಿಸಿ ಕೊಟ್ಟಿದೆ.

ಪ್ರೊ. ಬಿ. ವಿ. ಆಚಾರ್ಯ ದತ್ತಿ ‘ ಯಕ್ಷನಿಧಿ ’

ಸ್ಥಾಪನೆ: 1999

  • ಯಕ್ಷಗಾನ ಕಲಾರಂಗವು ನವೆಂಬರ್ 15, 1998 ರಂದು ಡಾ. ಬಿ.ಬಿ. ಸಂಸ್ಮರಣೆಯ ಸಂದರ್ಭದಲ್ಲಿ ಉದ್ಯಾವರ ಮಾಧವ ಆಚಾರ್ಯ ರವರಿಂದ ಪ್ರೊ. ಬಿ.ವಿ.ಆಚಾರ್ಯ ದತ್ತಿ ನಿಧಿ ಉದ್ಘಾಟನೆ ಮಾಡಿ ಯಕ್ಷಗಾನ ಕಲಾವಿದರ ಏಳಿಗೆಗೆ ಪ್ರಥಮ ಮುನ್ನುಡಿ ಬರೆಯಿತು.
  • ಫೆಬ್ರವರಿ 7, 1999 ರಂದು ಯಕ್ಷಗಾನ ವೃತ್ತಿ ಮೇಳಗಳ ಯಜಮಾನರ ಸಮಾವೇಶ ಅಂಬಲಪಾಡಿ ದೇವಳದಲ್ಲಿ ಕಲಾವಿದರ ಕ್ಷೇಮ ಚಿಂತನೆಗಾಗಿ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿತು. ಈ ಉದ್ದೇಶದಿಂದ ಮೇ 5. 1999 ರಲ್ಲಿ ಯಕ್ಷನಿಧಿ ಸ್ಥಾಪನೆ ಮಾಡಿ 10 ಮಂದಿ ತೆಂಕು – ಬಡಗುತಿಟ್ಟುಗಳ ಶ್ರೇಷ್ಠ ಕಲಾವಿದರ ಫೊಟೋಗುಚ್ಚಗಳನ್ನು ಮಾರಾಟ ಮಾಡಿ ಯಕ್ಷನಿಧಿಗೆ ಒಂದು ಲಕ್ಷ ರೂಪಾಯಿ ಧನ ಸಂಗ್ರಹ ಮಾಡುವ ಯೋಜನೆ ರೂಪಿಸಿತು.
  • ಅಕ್ಟೋಬರ್ 25,1999 ರಲ್ಲಿ ಶ್ರೀ ಪುತ್ತಿಗೆ ಮಠದ ಸಭಾಂಗಣದಲ್ಲಿ ಯಕ್ಷಗಾನ ವೃತ್ತಿ ಕಲಾವಿದರ ಪ್ರಥಮ ಸಮಾವೇಶ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್  ಇವರ ಉಪಸ್ಥಿತಿಯಲ್ಲಿ ಜರಗಿತು.
  • ಏಪ್ರಿಲ್ 25, 2000 ರಂದು 165 ಜನ ಯಕ್ಷನಿಧಿ ಸದಸ್ಯರಿಗೆ ಅಂಬಲಪಾಡಿ ಲಯನ್ಸ್ ಕ್ಲಬ್ ವತಿಯಿಂದ ಪ್ರಾಯೋಜಿಸಲ್ಪಟ್ಟ ‘ ಗುಂಪು ವಿಮೆ ’ ಉದ್ಘಾಟನೆಗೊಂಡಿತು.
  • ಜುಲೈ 7, 2000 ರಲ್ಲಿ ಜರಗಿದ ಸಂಸ್ಥೆಯ ರಜತೋತ್ಸವ ಸಂದರ್ಭದಲ್ಲಿ 25 ಮಂದಿ ಹಿರಿಯ ಕಲಾವಿದರಿಗೆ ತಲಾ ರೂ. 5000 ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
  • 1999 – 2000 ರ ಮೇಳಗಳ ತಿರುಗಾಟದ ಸಂದರ್ಭದಲ್ಲಿ ಎಲ್ಲಾ ಮೇಳಗಳನ್ನು ಸಂಸ್ಥೆಯ ಪದಾಧಿಕಾರಿಗಳು ಹಲವಾರು ಬಾರಿ ಸಂಪರ್ಕಿಸಿ ಅವರನ್ನು ಯಕ್ಷನಿಧಿಯ ಸದಸ್ಯರಾಗುವಂತೆ ವಿನಂತಿಸಿಕೊಂಡು 200ಕ್ಕೂ ಮೇಲ್ಪಟ್ಟು ವೃತ್ತಿ ಕಲಾವಿದರನ್ನು ಸದಸ್ಯರನ್ನಾಗಿ ನೊಂದಾಯಿಸಿಕೊಳ್ಳಲಾಯಿತು.
  • ಪ್ರತೀ ವರ್ಷ ಮೇ 31 ರಂದು ಕಲಾವಿದರ ಸಮಾವೇಶ ನಡೆಸಿ ಕಲಾವಿದರ ಆರೋಗ್ಯ ತಪಾಸಣೆ, ವೈದ್ಯಕೀಯ ಸೌಲಭ್ಯ, ವೃತ್ತಿ ಬದುಕಿಗೆ ಪೂರಕವಾಗುವ ಕಾರ್ಯಾಗಾರ, ಕಲಾಪ್ರದರ್ಶನ ಏರ್ಪಡಿಸಿ ಕಲಾವಿದರಿಗೆ ಉಪಯುಕ್ತವಾಗುವ ಉಡುಗೊರೆ ನೀಡುತ್ತಾ ಬಂದಿದೆ.
  • ಕಲಾವಿದರಿಗೆ ರೂ. ಒಂದು ಲಕ್ಷ ರೂಪಾಯಿ ಜೀವನ್ ಆನಂದ್ ವಿಮಾಯೋಜನೆ ರೂಪಿಸಿದ್ದು ಆರಂಭದಲ್ಲಿ ವಿಮಾಕಂತಿನ ಅರ್ಧಾಂಶ ಮೊತ್ತವನ್ನು ಸಂಸ್ಥೆ ನೀಡುತ್ತಾ ಬಂದಿದೆ.
  • ಪ್ರತೀ ವರ್ಷ ಕಲಾವಿದರಿಗೆ ಅವರ ವಿಳಾಸ ದೂರವಾಣಿ ಸಂಖ್ಯೆಯನ್ನು ಹೊಂದಿದ ಡೈರಿ ವಿತರಿಸಲಾಗುತ್ತಿದೆ.
  • ವೃತ್ತಿ ಕಲಾವಿದರಿಗೆ ಕೆನರಾ ಬಸ್ ಮಾಲಕರ ಸಂಘದಿಂದ ಶೇಕಡಾ 50 ರಿಯಾಯಿತಿ ದರದ ಬಸ್ ಪಾಸ್ ವ್ಯವಸ್ಥೆಗೊಳಿಸಿದೆ.
  • ಹೊರನಾಡು ಅನ್ನಪೂರ್ಣೇಶ್ವರಿ ದೇವಳದ ಪ್ರಾಯೋಜಕತ್ವದಲ್ಲಿ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
  • ಐವರು ಕಲಾವಿದರಿಗೆ ಮನೆ ನಿರ್ಮಿಸಲಾಗಿದೆ.
  • ವರದಿ ವರ್ಷದಲ್ಲಿ ನಲವತ್ತೊಂದು ಮಂದಿ ಹೊಸದಾಗಿ ಸದಸ್ಯತ್ವ ಪಡೆದಿರುತ್ತಾರೆ. ಪ್ರಸ್ತುತ ಒಟ್ಟು 1136 ಅಜೀವ ಸದಸ್ಯರಿದ್ದಾರೆ.
  • 2021-22 ನೇ ಸಾಲಿನಲ್ಲಿ ತುರ್ತು ವೈದ್ಯಕೀಯ ನೆರವಾಗಿ 21 ಕಲಾವಿದರಿಗೆ ರೂ. 4, 45,250. ನೀಡಿರುತ್ತೇವೆ.
  • 2021-22 ನೇ ಸಾಲಿನಲ್ಲಿ ನಿಧನ ಹೊಂದಿದ 4 ಮಂದಿ ಕಲಾವಿದರ ಕುಟುಂಬಕ್ಕೆ ಸಾಂತ್ವನದ ನೆರವು ರೂ. 2,00,000/- ವಿತರಿಸಿದ್ದೇವೆ.
  • 05.2022 ರಂದು ಜರಗಿದ ಕಲಾವಿದರ ಸಮಾವೇಶದಲ್ಲಿ 700 ಕಲಾವಿದರಿಗೆ ತಲಾ 500 ರೂಪಾಯಿ ಮೌಲ್ಯದ ಉಡುಗೊರೆ ನೀಡಿರುತ್ತೇವೆ.
  • ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ವೃತ್ತಿನಿರತ 409 ಮಂದಿ ಅಶಕ್ತ ಕಲಾವಿದರಿಗೆ ತಲಾ 2,500/- ರೂಪಾಯಿಯಂತೆ ಒಟ್ಟು ರೂಪಾಯಿ 10, 22,500/- ಅವರ ಖಾತೆಗೆ ನೇರ ವರ್ಗಾವಣೆ ಮಾಡಿರುತ್ತೇವೆ.

ಗೌಪ್ಯತಾ ನೀತಿ | ನಿಯಮ ಮತ್ತು ಷರತ್ತುಗಳು

ಕೃತಿ ಸ್ವಾಮ್ಯ ಇ-2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿದೆ | ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ  

We're currently hard at work gathering information and crafting content to bring you the best experience. Stay tuned for exciting updates!