ಯಕ್ಷಗಾನ ಕಲಾರಂಗದ 60ನೇ ಮನೆ ಹಸ್ತಾಂತರ.
ಸುವರ್ಣ ವರ್ಷವನ್ನು ಆಚರಿಸುತ್ತಿರುವ, ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾ ಪೋಷಕ್‍ನ ದ್ವಿತೀಯ ಪಿ.ಯು.ಸಿ.ಯ ವಿದ್ಯಾರ್ಥಿನಿ ಪ್ರಮಿತಾ ಇವಳಿಗೆ ಕುಂದಾಪುರ ತಾಲೂಕಿನ ಮೂಡುಮುಂದದ ಬೆಳ್ಳಾಲದಲ್ಲಿ ಶ್ರೀಮತಿ ಜಯಲಕ್ಷ್ಮೀ ಮತ್ತು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಎ.ಜಿ.ಎಂ.ಶ್ರೀ ಅಶೋಕ್ ನಾಯಕ್ ಇವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ 60ನೆಯ ಮನೆ ‘ಲಕ್ಷ್ಮೀ ಕುಟೀರ’ 17-12-2024 ರಂದು ಉದ್ಘಾಟನೆಗೊಂಡಿತು. ಅಶೋಕ್ ನಾಯಕ್ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ನಾಯಕರು, ಇಂದು ನನ್ನ ಮಡದಿಯ 68ನೇ ಜನ್ಮದಿನ. ಅಲ್ಲದೆ ತನಗೆ 70 ವರ್ಷ ಪೂರ್ತಿಗೊಂಡ …