


ಯಕ್ಷಗಾನ ಕಲಾರಂಗದ 100ನೆಯ ಮನೆ ಹಸ್ತಾಂತರ.
ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾ (ಶಕುಂತಲಾ ಮತ್ತು ಶಿವ ಇವರ ಪತ್ರಿ) ಎಲ್ಲ ಫಲಾನುಭವಿಗಳ ಪ್ರಾಯೋಜಕತ್ವದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಶತಸ್ಮೃತಿ’ 28.06.2026ರಂದು ಉದ್ಘಾಟನೆಗೊಂಡಿತು. ಜ್ಯೋತಿ ಬೆಳಗಿಸಿದ ಪರ್ಯಾಯ ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯರು ಅನ್ನದಾನ ಶ್ರೇಷ್ಠದಾನ ಅದಕ್ಕಿಂತಲೂ ಉನ್ನತವಾದುದು ವಿದ್ಯಾ ದಾನ. ಅನ್ನವು ಕ್ಷಣಿಕವಾದ ತೃಪ್ತಿಯನ್ನು ಕೊಡುತ್ತದೆ. ವಿದ್ಯಾದಾನ ಅನ್ನವನ್ನು ಗಳಿಸುವ ಮಾರ್ಗ ತೋರಿಸುತ್ತದೆ. ಯಕ್ಷಗಾನ ಕಲಾರಂಗದವರು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಕಲಿಯಲು ಅನುಕೂಲವಾಗಲು ಮನೆಯನ್ನು ನಿರ್ಮಿಸಿ ಆಶ್ರಯ ದಾನ ಮಾಡುತ್ತಿದ್ದಾರೆ. ಸಂಸ್ಥೆಯ ಈ ಕಾರ್ಯ ಇತ್ಯೋಪತಿಶಯವಾಗಿ ವರ್ಧಿಸಲೆಂದು ಅಧ್ಯಕ್ಷರಿಗೆ ಶ್ರೀಕೃಷ್ಣನ ಪ್ರಸಾದ ನೀಡಿ ಹರಸಿ ಕಲಾರಂಗದೊಂದಿಗೆ ಪರ್ಯಾಯ ಶೀರೂರು ಮಠ ಸದಾ ಇರುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ ಯಕ್ಷಗಾನ ಕಲಾರಂಗದ ಕೆಲಸ ನಮಗೆಲ್ಲ ಮಾದರಿ ನಾವೂ ನಮ್ಮ ವಿಕಾಸ ಸೇವಾ ಟ್ರಸ್ಟ್ ಮೂಲಕ ಇದೇ ಕೆಲಸವನ್ನು ಮಾಡುತ್ತಿದ್ದೇವೆ. ಕಲಾರಂಗದ ಶಿಸ್ತು, ಸಮಯ ಪ್ರಜ್ಞೆ, ಕಾರ್ಯವಿಧಾನ ನನ್ನನ್ನು ಆಕರ್ಷಿಸಿದೆ ಎಂದರು. ಗಾಂಧಿ ಆಸ್ಪತ್ರೆ ಎಂ.ಡಿ.ಡಾ. ಹರಿಶ್ಚಂದ್ರ, ಬೆಂಗಳೂರು ಟೆಕ್ಸೆಲ್ ಪ್ರೈ. ಲಿ.ನ ಎಂ.ಡಿ ಹರೀಶ್ ರಾಯಸ್, ಕೆ. ಸದಾಶಿವ ಭಟ್, ವಿಲಾಸಿನಿ ಬಾಬುರಾಯ ಶೆಣೈ, ಶಿವ ಎಲೆಕ್ಟ್ರಿಕಲ್ಸ್ ನ ಶ್ರೀನಿವಾಸ ಹೆಬ್ಬಾರ್, ಡಾ.ಭಾರ್ಗವಿ ಐತಾಳ್, ಬಿಇಓ ಶ್ರೀಮತಿ ಉಮಾ, ಶ್ರೀಮತಿ ರೂಪಾ ಹರೀಶ್,ಡಾ. ರಾಮಚಂದ್ರ ಐತಾಳ್, ಯು.ಶ್ರೀಧರ್, ಉಪಸ್ಥಿತರಿದ್ದರು. ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್ ರಾವ್, ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್,ಪಿ.ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ಯು. ಅನಂತರಾಜ ಉಪಾಧ್ಯ, ವಿಜಯಕುಮಾರ್ ಮುದ್ರಾಡಿ, ಹಿರಿಯಣ್ಣ ಕಿದಿಯೂರ್, ಎಚ್. ಎನ್. ವೆಂಕಟೇಶ್, ನಟರಾಜ ಉಪಾಧ್ಯ,ಡಾ. ರಾಜೇಶ್ ನಾವುಡ,ಡಾ.ರಾಘವೇಂದ್ರ ರಾವ್, ಗಣಪತಿ ಭಟ್, ನಾಗರಾಜ ಹೆಗಡೆ, ಕಿಶೋರ್ ಸಿ. ಉದ್ಯಾವರ, ಗಣೇಶ ಬ್ರಹ್ಮಾವರ, ನಿರಂಜನ್ ಭಟ್, ಎನ್. ರಾಮ ಭಟ್, ಎಸ್. ಗಣರಾಜ ಭಟ್,ಡಾ. ಪ್ರತಿಮಾ ಆಚಾರ್ಯ, ನಾಗಭೂಷಣ ಭಟ್ ಅವಿನಾಶ ಭಟ್,ಚಂದ್ರಕಾಂತ್,ಸನಕ, ಪ್ರಸನ್ನ, ಕಲಾವಿದರಾದ ಪ್ರವೀಣ್ ಗಾಣಿಗ, ಶಿಕ್ಷಕರಾದ ಶಿವಪ್ರಸಾದ್ ಅಡಿಗ ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.