Yakshagana Kalaranga

ಯಕ್ಷಗಾನ ಕಲಾರಂಗ (ರಿ.) ಉಡುಪಿ – 51ನೇ ವಾರ್ಷಿಕ ಮಹಾಸಭೆ

MALYADI_CLICKK
MALYADI_CLICKK
MALYADI_CLICKK

ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ 51ನೇ ವಾರ್ಷಿಕ ಮಹಾಸಭೆಯು 11.07.2026ರಂದು ಸಂಜೆ 6.00 ಗಂಟೆಗೆ ಎಂ. ಗಂಗಾಧರ ರಾವ್ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಜರುಗಿತು. ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಅಗಲಿದ ಸದಸ್ಯರಿಗೆ, ಕಲಾವಿದರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಗತ ಮಹಾಸಭೆಯ ವರದಿ ವಾಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ 2025-26ರ ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. 2026-27ನೇ ಸಾಲಿಗೆ ಸಿಎ ಅರುಣ್ ನಾಯಕರನ್ನು ಲೆಕ್ಕ ಪರಿಶೋಧಕರನ್ನಾಗಿ ನೇಮಕ ಮಾಡಲಾಯಿತು. ಈ ಎಲ್ಲಾ ಕಲಾಪಗಳು ಸದಸ್ಯರ ಸೂಚನೆ, ಅನುಮೋದನೆಗಳೊಂದಿಗೆ ಅಂಗೀಕಾರಗೊಂಡವು. 2026-27ನೇ ಸಾಲಿಗೆ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಆಹ್ವಾನಿತ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ಮಾತನಾಡಿದರು. ಅಧ್ಯಕ್ಷೀಯ ಭಾಷಣದ ನಂತರ ಜತೆಕಾರ್ಯದರ್ಶಿ ವಿದ್ಯಾಪ್ರಸಾದ ವಂದಿಸಿದರು. ಡಾ. ಪ್ರತಿಮಾ ಜೆ. ಆಚಾರ್ಯ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು

ಉಡುಪಿ : ಹಿರಿಯ ಸಾಂಸ್ಕೃತಿಕ-ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗದ 51ನೆಯ ಮಹಾಸಭೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯು ಜುಲೈ 13, 2026ರಂದು ಸಭೆ ನಡೆಸಿ ಎಂ. ಗಂಗಾಧರ ರಾವ್ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. 2026-27ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳು.
ಉಪಾಧ್ಯಕ್ಷರು : ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಕಾರ್ಯದರ್ಶಿ: ಮುರಲಿ ಕಡೆಕಾರ್, ಜೊತೆಕಾರ್ಯದರ್ಶಿಗಳು : ನಾರಾಯಣ ಎಂ. ಹೆಗಡೆ, ವಿದ್ಯಾ ಪ್ರಸಾದ್, ಕೋಶಾಧಿಕಾರಿ : ಪ್ರೊ. ಕೆ. ಸದಾಶಿವ ರಾವ್, ಸದಸ್ಯರು : ಕೆ. ಗಣೇಶ್ ರಾವ್, ಡಾ. ತಲ್ಲೂರು ಶಿವರಾಮ ಶೆಟ್ಟಿ, ಪ್ರೊ. ಎಂ. ಎಲ್. ಸಾಮಗ, ಯು. ಎಸ್. ರಾಜಗೋಪಾಲ ಆಚಾರ್ಯ, ಬಿ. ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ವಿಜಯ್ ಕುಮಾರ್ ಮುದ್ರಾಡಿ, ಎಸ್. ಗಣರಾಜ್ ಭಟ್, ಎಚ್. ಎನ್. ವೆಂಕಟೇಶ್, ಎ. ನಟರಾಜ ಉಪಾಧ್ಯ, ಅಶೋಕ್ ಎಂ, ಕೆ. ಅಜಿತ್ ಕುಮಾರ್, ದಿನೇಶ್ ಪಿ. ಪೂಜಾರಿ, ಡಾ. ರಾಜೇಶ್ ನಾವುಡ, ಮಂಜುನಾಥ ಹೆಬ್ಬಾರ್, ಸಂತೋಷ್ ಕುಮಾರ್ ಶೆಟ್ಟಿ, ಪ್ರಭಾಕರ ಭಂಡಿ ಪಿ..
ಆಹ್ವಾನಿತರು : ಯು. ವಿಶ್ವನಾಥ ಶೆಣೈ, ನಿರಂಜನ ಭಟ್, ಕೆ. ಆನಂದ ಶೆಟ್ಟಿ, ಗಣೇಶ ಬ್ರಹ್ಮಾವರ, ಕೃಷ್ಣಮೂರ್ತಿ ಭಟ್, ಡಾ. ಶೈಲಜಾ, ಕಿಶೋರ್ ಸಿ. ಉದ್ಯಾವರ, ಗಣೇಶ ರಾವ್ ಎಲ್ಲೂರು, ನಾಗರಾಜ ಹೆಗಡೆ, ಗಣಪತಿ ಭಟ್, ಹಿರಿಯಣ್ಣ ಟಿ. ಕಿದಿಯೂರು, ಎನ್. ರಾಮ ಭಟ್, ಎಚ್. ಸುಜಯೀಂದ್ರ ಹಂದೆ, ಪವನ್ ಕಿರಣ್ಕೆರೆ, ಡಾ. ಪ್ರತಿಮಾ ಜೆ. ಆಚಾರ್ಯ, ಪಿ. ಡಾ. ರಾಘವೇಂದ್ರ ರಾವ್, ಮಂಜುನಾಥ, ಸುದರ್ಶನ ಬಾಯರಿ, ವಿಶ್ವನಾಥ, ಉಮೇಶ್ ಭಟ್, ರಾಜೇಶ್ ಪಣಿಯಾಡಿ, ಆರ್. ವಸಂತ.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!