



05.7.2026: ಯಕ್ಷಗಾನ ಕಲಾರಂಗದ ಐ.ವೈ.ಸಿ.ಸಭಾಂಗಣದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ‘ಶ್ರೀಮತಿ ಪರಿಣಯ’ ಯಕ್ಷಗಾನ ಸೊಗಸಾಗಿ ಪ್ರಸ್ತುತಗೊಂಡಿತು. ಸೋದೆ ಮಠಾಧೀಶರಾದ ಶ್ರೀ.ಶ್ರೀ.ವಿಶ್ವವಲ್ಲಭ ತೀರ್ಥ ಶ್ರೀಪಾದರು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.






12.7.2026 : ಯಕ್ಷಗಾನ ಕಲಾರಂಗದಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರಿಂದ ‘ಪವನಸುತ ಪಾಂಚಾಲೆ’, ಯಕ್ಷಗಾನ ಅತ್ಯಂತ ಸೊಗಸಾಗಿ ಪ್ರದರ್ಶನಗೊಂಡಿತು. ಅದಮಾರು ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಯಕ್ಷಗಾನವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.