ಯಕ್ಷಶಿಕ್ಷಣ – 2024 ಉದ್ಘಾಟನೆ.
ನಮ್ಮ ಮೂರನೇ ಪರ್ಯಾಯದಲ್ಲಿ ಆರಂಭಗೊಂಡ ಯಕ್ಷಶಿಕ್ಷಣ ಅಭಿಯಾನ, ಕಳೆದ 16 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಾ, ಪ್ರಕೃತ ನಾಲ್ಕು ವಿಧಾನಸಭಾ ಕ್ಷೇತ್ರಗಳ 92 ಪ್ರೌಢಶಾಲೆಗಳಿಗೆ ವಿಸ್ತರಣೆಗೊಂಡಿರುವುದು ಅತ್ಯಂತ ಸ್ತುತ್ಯರ್ಹ. ಯಕ್ಷಗಾನದಿಂದ ವ್ಯಕ್ತಿಯ ಪರಿಪೂರ್ಣ ವಿಕಸನ ಸಾಧ್ಯ. ಅಂತಹ ಅಪೂರ್ವ ಕಲೆಯನ್ನು ಪ್ರೌಢ ವಿದ್ಯಾರ್ಥಿಗಳಿಗೆ ಕಲಿಸುವುದು ಅತ್ಯಂತ ಪ್ರಶಂಸನೀಯ ಕಾರ್ಯ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಯಕ್ಷಶಿಕ್ಷಣ-2024ರ ಅಭಿಯಾನವನ್ನು 11.07.2024ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟಿಸುತ್ತಾ ನುಡಿದರು. ಉಡುಪಿ ಶಾಸಕರೂ, ಯಕ್ಷಶಿಕ್ಷಣ ಅಧ್ಯಕ್ಷರೂ …