ನಿಟ್ಟೂರು ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಬೇತಿ ಆರಂಭ
11.07.2023ರಂದು ನಿಟ್ಟೂರು ಪ್ರೌಢಶಾಲೆಯಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಯಕ್ಷಗಾನ ತರಬೇತಿ ಆರಂಭಗೊಂಡಿತು. ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್, ಮುಖ್ಯ ಶಿಕ್ಷಕಿ ಅನಸೂಯ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲೆಯ ಯಕ್ಷಗಾನದಲ್ಲಿ ವೇಷಧಾರಿಯಾಗಿದ್ದ ಹಳೆ ವಿದ್ಯಾರ್ಥಿ ನಿಶ್ವಲ್ ತೀರ್ಥಳ್ಳಿ ಯಕ್ಷ ಗುರುವಾಗಿ ಪಾಲ್ಗೊಳ್ಳುತ್ತಿರುವುದು ಟ್ರಸ್ಟಿಗೆ ಧನ್ಯತೆಯ ವಿಷಯವಾಗಿದೆ.ಈತ ಎರಡು ಶಾಲೆಗಳಲ್ಲಿ ಗುರುವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಯಕ್ಷಗಾನ ಕೇಂದ್ರದಲ್ಲಿದ್ದುಕೊಂಡು ಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯನಾಗಿ ಯಕ್ಷಗಾನವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿರುತ್ತಾನೆ.
ನಿಟ್ಟೂರು ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಬೇತಿ ಆರಂಭ Read More »








