ಒಂದೇ ದಿನ ವಿದ್ಯಾಪೋಷಕ್ನ ಎರಡು ಮನೆಗಳ ಹಸ್ತಾಂತರ .
ಉಡುಪಿ : ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ಇಬ್ಬರು ಫಲಾನುಭವಿ ವಿದ್ಯಾರ್ಥಿಗಳಿಗೆ ತೆಂಕುತಿಟ್ಟಿನ ಖ್ಯಾತ ಸ್ತ್ರೀವೇಷಧಾರಿಯಾಗಿದ್ದ ಕಡಂದೇಲು ಪುರುಷೋತ್ತಮ ಭಟ್ ಇವರ ಮಗನಾದ ಬೆಂಗಳೂರಿನ ಕೆ. ಸದಾಶಿವ ಭಟ್ ಪ್ರಾಯೋಜಕತ್ವದ ಎರಡು ಮನೆಗಳ ಉದ್ಘಾಟನೆ 30.01.2024 ರಂದು ನೆರವೇರಿತು.ದ್ವಿತೀಯ ಪಿ.ಯು.ಸಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ, ಗುಜ್ಜಾಡಿಯ ಅಂಕಿತಾ ಹಾಗೂ ಪ್ರಥಮ ಪಿ.ಯು.ಸಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ, ಕೊಡೇರಿಯ ಶಿವರಾಜ್ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾಗಿದ್ದು, ಇವರಿಗೆ ಸಂಸ್ಥೆ ನಿರ್ಮಿಸಿ ಕೊಟ್ಟ ಮನೆಗಳಾಗಿವೆ. ಮನೆಗಳ ಪ್ರಾಯೋಜಕರಾದ ಕೆ. ಸದಾಶಿವ ಭಟ್ ಅವರು ಎರಡೂ ಮನೆಗಳ ಉದ್ಘಾಟನೆಯನ್ನು ಮಾಡಿ …