ವಿದ್ಯಾಪೋಷಕ್ ವಿದ್ಯಾರ್ಥಿನಿಯ ಮನೆಗೆ ಶಿಲಾನ್ಯಾಸ.
ವಿದ್ಯಾಪೋಷಕ್ ವಿದ್ಯಾರ್ಥಿನಿ ಸೌಜನ್ಯಾ (ತೃತೀಯ ಇಂಜಿನೀಯರ್) ಇವಳಿಗೆ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದಲ್ಲಿ ನಿರ್ಮಿಸಲಿರುವ ಮನೆಗೆ 28-10-2024 ರಂದು ಶಿರ್ವದ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿಯವರು ಶಿಲಾನ್ಯಾಸಗೈದರು. ಇಂದು ಕೊಲ್ಲಬೆಟ್ಟು ರವೀಂದ್ರ ಶೆಟ್ಟಿಯವರಿಗೆ 60ನೇ ಹುಟ್ಟುಹಬ್ಬ ಹಾಗೂ ವಿವಾಹದ 30ನೇ ವರ್ಷವಾಗಿದ್ದು, ಇದನ್ನು ಓರ್ವ ಪ್ರತಿಭಾನ್ವಿತ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಗೆ ಮನೆ ನಿರ್ಮಿಸಿಕೊಟ್ಟು ಅರ್ಥಪೂರ್ಣವಾಗಿ ಆಚರಿಸಲು ಸಂಕಲ್ಪಿಸಿದ್ದು, ಇನ್ನೆರಡು ತಿಂಗಳಲ್ಲಿ ಈ ಮನೆಯನ್ನು ಪೂರ್ಣಗೊಳಿಸಲಾಗುವುದು ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ತಿಳಿಸಿದರು. […]
ವಿದ್ಯಾಪೋಷಕ್ ವಿದ್ಯಾರ್ಥಿನಿಯ ಮನೆಗೆ ಶಿಲಾನ್ಯಾಸ. Read More »