Yakshagana Kalaranga

Yakshagana Kalaranga

ವಿದ್ಯಾಪೋಷಕ್ ಪ್ರಥಮ ಪಿಯು ವಿದ್ಯಾರ್ಥಿಗಳ ಶಿಬಿರ ಉದ್ಘಾಟನೆ.

ಉಡುಪಿಯ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗಾಗಿ ಐದು ದಿನಗಳ ‘ಜೀವನ ವಿದ್ಯಾ’ ಸನಿವಾಸ ಶಿಬಿರವನ್ನು ಕಳೆದ 16 ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಈ ಬಾರಿಯ ಶಿಬಿರವನ್ನು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಇಂದು 24.02.2026 ರಂದು ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು. ಗೀತಾಲೇಖನ ಬರೆದು ಒಪ್ಪಿಸಿದವರಿಗೆ ಪ್ರಮಾಣ ಪತ್ರ ವಿತರಿಸಿ ತಮ್ಮ ಅನುಗ್ರಹ ಸಂದೇಶದಲ್ಲಿ ಇಂತಹ ಶಿಬಿರ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಭಗವದ್ಗೀತೆ […]

ವಿದ್ಯಾಪೋಷಕ್ ಪ್ರಥಮ ಪಿಯು ವಿದ್ಯಾರ್ಥಿಗಳ ಶಿಬಿರ ಉದ್ಘಾಟನೆ. Read More »

ಯಕ್ಷಗಾನ ಕಲಾರಂಗದ 89ನೆಯ ಮನೆ ಹಸ್ತಾಂತರ.

ಕಳೆದ ಏಳು ವರ್ಷಗಳಿಂದ ಶ್ರೀವಾಣಿ ಪ್ರೌಢಶಾಲೆ, ನಡೂರು ಇಲ್ಲಿ ಕನ್ನಡ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಸುರೇಂದ್ರ ನಾಯ್ಕ್ (ಎಂ.ಎ, ಬಿಎಡ್) ಇವರಿಗೆ ಕುಂದಾಪುರ ತಾಲೂಕಿನ ಕೊಡ್ಲಾಡಿಯಲ್ಲಿ ನಿರ್ಮಿಸಿದ ನೂತನ ಮನೆ ‘ಶ್ರೀ ಬ್ರಹ್ಮಲಿಂಗೇಶ್ವರ’ವನ್ನು 23.02.2026 ರಂದು ಪ್ರಾಯೋಜಕರಾದ ಬೆಂಗಳೂರಿನ ಎಸ್. ವೆಂಕಟೇಶ್-ನಂದಾ ವೆಂಕಟೇಶ್ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್ ರವರು, ಯಕ್ಷಗಾನ ಕಲಾರಂಗದ ಸಮಾಜಪರ ಕೆಲಸಗಳು ಅನ್ಯರ ಊಹೆಗೂ ನಿಲುಕದು. ಇಂತಹ ಕಾರ್ಯಗಳನ್ನು ಮಾಡುತ್ತಾ ಅದರಲ್ಲಿ ಎಷ್ಟು ಪರಿಣತರಾಗಿದ್ದಾರೆಂದರೆ

ಯಕ್ಷಗಾನ ಕಲಾರಂಗದ 89ನೆಯ ಮನೆ ಹಸ್ತಾಂತರ. Read More »

ಯಕ್ಷಗಾನ ಕಲಾರಂಗದ 88ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾ ಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿ ಸ್ವಸ್ತಿಕ್ ಎಸ್. ನಾಯ್ಕ್ (ಶ್ರೀಮತಿ ಚಿಕ್ಕಮ್ಮ ಮತ್ತು ಶ್ರೀ ಶಂಕರ ನಾಯ್ಕ್ ಇವರ ಪುತ್ರ, ಎಸ್. ಎಸ್. ಎಲ್. ಸಿ. ಯಲ್ಲಿ 97% ಅಂಕ) ಇವನಿಗೆ ಬೈಂದೂರು ತಾಲೂಕಿನ ಜಡ್ಕಲ್ ಬಳಿ ಸೆಲ್ಕೋಡ್‍ನಲ್ಲಿ ಶಿರ್ವದ ನಿವೃತ್ತ ಉಪನ್ಯಾಸಕಿ ಶಾರದಾ ಎಂ. ಇವರು ತಮ್ಮ ಪತಿ ಕೃಷ್ಣಮೂರ್ತಿ ಕೆ. ಇವರ ಸ್ಮರಣೆಯಲ್ಲಿ, 7,00,000/- ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಛಂದೋಗತಿ’ಯನ್ನು 14.02.2026ರಂದು ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ

ಯಕ್ಷಗಾನ ಕಲಾರಂಗದ 88ನೆಯ ಮನೆ ಹಸ್ತಾಂತರ Read More »

ಯಕ್ಷಗಾನ ಕಲಾರಂಗದ 87ನೆಯ ಮನೆ ಹಸ್ತಾಂತರ.

ಯಕ್ಷಗಾನ ಕಲಾರಂಗ ವಿದ್ಯಾ ಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಂಕಿತಾ (ಶ್ರೀಮತಿ ಅಮಿತಾ ಮತ್ತು ಶ್ರೀ ನಾರಾಯಣ ಮೊಗವೀರ ಇವರ ಪುತ್ರಿ) ಇವಳಿಗೆ ಬ್ರಹ್ಮಾವರ ತಾಲೂಕಿನ ನಾಲ್ಕೂರಿನಲ್ಲಿ ಮಂದಾರ್ತಿಯ ನಿವೃತ್ತ ಉಪನ್ಯಾಸಕಾರದ ಶ್ರೀ ಸೂರ್ಯನಾರಾಯಣ ಅಡಿಗ ಮತ್ತು ಶ್ರೀಮತಿ ಗಿರಿಜಾ ಸೂರ್ಯನಾರಾಯಣ ಅಡಿಗ ಇವರು ತಮ್ಮ ವಿವಾಹದ ಸುವರ್ಣ ವರ್ಷಾಚರಣೆಯ ಸವಿನೆನಪಿನಲ್ಲಿ, 6,50,000/- ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಶ್ರೀದೇವಿ ಕೃಪಾ’ ವನ್ನು 11.02.2026ರಂದು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಚ್. ಧನಂಜಯ

ಯಕ್ಷಗಾನ ಕಲಾರಂಗದ 87ನೆಯ ಮನೆ ಹಸ್ತಾಂತರ. Read More »

ವಿದ್ಯಾಪೋಷಕ್‍ ಯಕ್ಷಗಾನ ಕಲಾರಂಗದ 86ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಸರ್ಗ (ಶ್ರೀಮತಿ ರೇಷ್ಮಾ ಮತ್ತು ಶ್ರೀ ರಾಘವೇಂದ್ರ ಖಾರ್ವಿ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಕಿದಿಯೂರು ಎಸ್. ವಿ. ಎಸ್. ಟಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎ. ಭಾಸ್ಕರ ಭಟ್ ಇವರ ಪ್ರಾಯೋಜಕತ್ವದಲ್ಲಿ, 7,00,000/- ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ‘ಲಲಿತಾ ಸದನ’ ಮನೆಯನ್ನು 03.02.2026ರಂದು ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ತಮ್ಮ ಅನುಗ್ರಹ ಸಂದೇಶದಲ್ಲಿ ಯಕ್ಷಗಾನ

ವಿದ್ಯಾಪೋಷಕ್‍ ಯಕ್ಷಗಾನ ಕಲಾರಂಗದ 86ನೆಯ ಮನೆ ಹಸ್ತಾಂತರ Read More »

ಯಕ್ಷಗಾನ ಕಲಾರಂಗದ 85ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾ ಪೋಷಕ್‍ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೃಷ್ಲಾಂಜಲಿ ಆರ್. ಶೆಟ್ಟಿ (ಶ್ರೀಮತಿ ರೂಪಾ ಶೆಟ್ಟಿ ಮತ್ತು ಶ್ರೀ ರತನ್ ಶೆಟ್ಟಿ ಇವರ ಪುತ್ರಿ) ಇವಳಿಗೆ ಬ್ರಹ್ಮಾವರ ತಾಲೂಕಿನ ಎಳ್ಳಂಪಳ್ಳಿಯಲ್ಲಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಜಯ ಕುಮಾರ್ ಮುದ್ರಾಡಿ ಇವರ ಪ್ರಾಯೋಜಕತ್ವದಲ್ಲಿ, 6,50,000/- ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ‘ವಿಶ್ವಸ್ಮೈ’ ಮನೆಯನ್ನು 28.01.2026ರಂದು ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ. ಯಕ್ಷಗಾನ ಕಲೆ

ಯಕ್ಷಗಾನ ಕಲಾರಂಗದ 85ನೆಯ ಮನೆ ಹಸ್ತಾಂತರ Read More »

ಯಕ್ಷಗಾನ ಕಲಾರಂಗದ 84ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ದ್ವಿತೀಯ ವರ್ಷದಲ್ಲಿ ಅರಿವಳಿಕೆ ತರಬೇತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಚೇತನ್ ಜೋಗಿ (ಶ್ರೀಮತಿ ರತ್ನಾ ಜೋಗಿ ಮತ್ತು ಶ್ರೀ ಉದಯ ಜೋಗಿ ಇವರ ಪುತ್ರ) ಇವನಿಗೆ ಕಾಪು ತಾಲೂಕಿನ ಶಂಕರಪುರದಲ್ಲಿ ಮಹಾದಾನಿಗಳಾದ ಆದಿಉಡುಪಿಯ ಗುರುರಾಜ ಅಮೀನ್ ಇವರ ಪ್ರಾಯೋಜಕತ್ವದಲ್ಲಿ ನವೀಕರಿಸಿದ ‘ಜಯಲಕ್ಷ್ಮೀ ನಿಲಯ’ ಮನೆಯನ್ನು 26.01.2026ರಂದು ಕಾಪು ಶಾಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ನನಗೆ ಯಕ್ಷಗಾನ ಕಲಾರಂಗದ ಕಾರ್ಯಕ್ರಮಕ್ಕೆ ಬರುವುದೆಂದರೆ ಎಲ್ಲಿಲ್ಲದ ಉತ್ಸಾಹ. ಅವರಿಗಿರುವ ಸಾಮಾಜಿಕ ಬದ್ಧತೆ,

ಯಕ್ಷಗಾನ ಕಲಾರಂಗದ 84ನೆಯ ಮನೆ ಹಸ್ತಾಂತರ Read More »

ವಿದ್ಯಾಪೋಷಕ್‌ ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹರ್ಷಿತ್ (ಶ್ರೀಮತಿ ದೇವಕಿ ಮತ್ತು ಶ್ರೀ ಸುಂದರ ಪೂಜಾರಿ ಇವರ ಪುತ್ರ) ಇವನಿಗೆ ಬ್ರಹ್ಮಾವರ ತಾಲೂಕಿನ ಹಾರಾಡಿಯ ಮೂಡು ಕುಕ್ಕುಡೆಯಲ್ಲಿ, ಬೈಕಾಡಿ ಕೃಷ್ಣಯ್ಯ ಮತ್ತು ಯಶೋದಾದೇವಿ ಇವರ ಪುತ್ರ ಶ್ರೀ ಬಿ. ನರಹರಿ ಹಾಗೂ ಸಹೋದರರು ತಮ್ಮ ಮಾತೃಶ್ರೀಯವರ ಶತಾಬ್ದಿ ಸಂದರ್ಭದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಯಶೋದಾಕೃಷ್ಣ’ಇಂದು (23.06.2026) ಉದ್ಘಾಟನೆಗೊಂಡಿತು. ಜ್ಯೋತಿ ಬೆಳಗಿಸಿದ ಮಣಿಪಾಲ ಟೆಕ್ನಾಲಜೀಸ್ ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಶ್ರೀ ಗೌತಮ್

ವಿದ್ಯಾಪೋಷಕ್‌ ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ Read More »

ಯಕ್ಷಗಾನ ಕಲಾರಂಗದ 83 ನೆಯ ಮನೆ ಹಸ್ತಾಂತರ.

ಸಂಸ್ಥೆ ವಿದ್ಯಾಪೋಷಕ್ ಪ್ರಥಮ ಪಿ.ಯು. ವಿದ್ಯಾರ್ಥಿನಿ,ಉಳ್ಳೂರಿನ ತೃಪ್ತಿಗೆ (ಶ್ರೀಮತಿ ಲತಾ ಮತ್ತು ಶ್ರೀ ಕೃಷ್ಣ ಇವರ ಪುತ್ರಿ) ಶ್ರೀಮತಿ ದೀಪಾ ಮತ್ತು ಶ್ರೀ ಅರುಣ ಕುಮಾರ್ ಇವರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ‘ಶ್ರೀ ಸಿದ್ಧಿವಿನಾಯಕ’ ಮನೆಯನ್ನು 4.1.2026 ರಂದು ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ದೀಪ ಬೆಳಗಿಸಿ ಉಧ್ಘಾಟಿಸಿದರು. ಶ್ರೀ ಸಿದ್ಧಿವಿನಾಯಕ ಕ್ಯಾಶ್ಯು ಇಂಡಸ್ಟ್ರೀಸ್ ಮಾಲಕ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ ನಾನೇನು ದೊಡ್ಡ ಶ್ರೀಮಂತನಲ್ಲ. ಸಾಲದಲ್ಲೆ ಮನೆ ಕಟ್ಟಲು ಆರಂಭಿಸಿದ್ದು, ನನ್ನ ನೂತನ

ಯಕ್ಷಗಾನ ಕಲಾರಂಗದ 83 ನೆಯ ಮನೆ ಹಸ್ತಾಂತರ. Read More »

We're currently hard at work gathering information and crafting content to bring you the best experience. Stay tuned for exciting updates!