Yakshagana Kalaranga

ಯಕ್ಷಗಾನ ಕಲಾರಂಗದ 87ನೆಯ ಮನೆ ಹಸ್ತಾಂತರ.

ಯಕ್ಷಗಾನ ಕಲಾರಂಗ ವಿದ್ಯಾ ಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಂಕಿತಾ (ಶ್ರೀಮತಿ ಅಮಿತಾ ಮತ್ತು ಶ್ರೀ ನಾರಾಯಣ ಮೊಗವೀರ ಇವರ ಪುತ್ರಿ) ಇವಳಿಗೆ ಬ್ರಹ್ಮಾವರ ತಾಲೂಕಿನ ನಾಲ್ಕೂರಿನಲ್ಲಿ ಮಂದಾರ್ತಿಯ ನಿವೃತ್ತ ಉಪನ್ಯಾಸಕಾರದ ಶ್ರೀ ಸೂರ್ಯನಾರಾಯಣ ಅಡಿಗ ಮತ್ತು ಶ್ರೀಮತಿ ಗಿರಿಜಾ ಸೂರ್ಯನಾರಾಯಣ ಅಡಿಗ ಇವರು ತಮ್ಮ ವಿವಾಹದ ಸುವರ್ಣ ವರ್ಷಾಚರಣೆಯ ಸವಿನೆನಪಿನಲ್ಲಿ, 6,50,000/- ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಶ್ರೀದೇವಿ ಕೃಪಾ’ ವನ್ನು 11.02.2026ರಂದು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಚ್. ಧನಂಜಯ ಶೆಟ್ಟಿಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಶಾಸಕ ಯಶ್‍ಪಾಲ್ ಸುವರ್ಣರು ಯಕ್ಷಗಾನ ಕಲಾರಂಗ ಯಾವ ಆಡಂಬರವಿಲ್ಲದೆ ಪ್ರಾಮಾಣಿಕತೆ ಮತ್ತು ನಿರಂತರ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದ ಪ್ರೀತಿ ವಿಶ್ವಾಸ ಗಳಿಸಿದೆ. ಅಡಿಗರು ತಮ್ಮ ವಿವಾಹದ ಸುವರ್ಣೋತ್ಸವವನ್ನು ಬಡ ವಿದ್ಯಾರ್ಥಿನಿಗೆ ಮನೆ ನಿರ್ಮಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು. ವೈಕುಂಠ ಹೇರ್ಳೆಯವರು ತಮ್ಮ ಮಾವ ಸೂರ್ಯನಾರಾಯಣ ಅಡಿಗರ ದಾನಗುಣ, ಪರೋಪಕಾರ ಮನೋಭಾವವನ್ನು ವಿವರಿಸಿದರು. ಪ್ರಾಯೋಜಕ ಸೂರ್ಯನಾರಾಯಣ ಅಡಿಗರು ಮಾತನಾಡಿ ಇಂತಹ ಒಂದು ಸಂಕಲ್ಪ ಮಾಡಲು ನನ್ನ ಪತ್ನಿ ಪ್ರೇರಕಶಕ್ತಿಯಾದಳು. ಇದು ನನ್ನ ಬದುಕಿನ ಅತ್ಯಂತ ಸಂತಸದ ಕ್ಷಣ. ಇಂತಹ ಒಂದು ಅವಕಾಶ ಕಲ್ಪಿಸಿದ ಯಕ್ಷಗಾನ ಕಲಾರಂಗಕ್ಕೆ ಕೃತಜ್ಞನಾಗಿದ್ದೇನೆ. ಅಂಕಿತಾಳ ಕುಟುಂಬದೊಂದಿಗೆ ನಾವಿದ್ದೇವೆ ಎಂದರು. ನೇತಾಜಿ ಸೇವಾ ವೇದಿಕೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಹೆಗ್ಡೆ ಮಾರಾಳಿ, ಪ್ರತಾಪ್ ಹೆಗ್ಡೆ ಮಾರಾಳಿ, ಶೇಡಿಕೊಡ್ಲು ವಿಠಲ ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ಶೋಭಾ ಕೆ. ಪೂಜಾರಿ,ಅಶೋಕ್ ಭಟ್,ಅಡಿಗರ ಪುತ್ರಿ ವಾಣಿ ವಿ.ಹೇರ್ಳೆ ಅಭ್ಯಾಗತರಾಗಿ ಆಗಮಿಸಿದ್ದರು.ಡಾ. ಭಾರ್ಗವಿ ಆರ್.ಐತಾಳ್,ಎಂ.ಗಣೇಶ ಅಡಿಗ, ದೇವಕಿ ಜಿ.ಅಡಿಗ, ವಾರಿಜಾ ಆರ್.ಅಡಿಗ, ಕಾತ್ಯಾಯಿನಿ ಜೆ. ಅಡಿಗ,ವಿಶ್ವೇಶ್ವರ ಅಡಿಗ,ಕೆ.ಅಣ್ಣಾಜಿ ರಾವ್,ರಾಜು ಕುಲಾಲ್,ನಾಲ್ಕೂರು ಶಾಲಾ ಮುಖ್ಯೋಪಾದ್ಯಾಯ ಕೃಷ್ಣ ನಾಯ್ಕ್,ಯಕ್ಷಗುರು ಮಹೇಶ್ ಮಂದಾರ್ತಿ ಉಪಸ್ಥಿತರಿದ್ದರು. ಸಂಸ್ಥೆಯ , ಪದಾಧಿಕಾರಿಗಳಾದ ಪ್ರೊ.ಕೆ.ಸದಾಶಿವ ರಾವ್, ವಿದ್ಯಾಪ್ರಸಾದ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ,ವಿಜಯ ಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ,ಅಶೋಕ್ ಎಂ., ಕೃಷ್ಣಮೂರ್ತಿ ಭಟ್,ಎಚ್.ಸುಜಯೀಂದ್ರ ಹಂದೆ, ಗಣೇಶ ಬ್ರಹ್ಮಾವರ, ಸುದರ್ಶನ ಬಾಯರಿ,ಸುಜಯ್ ಶೆಟ್ಟಿ,ಕೆ.ಯೋಗೀಶ್ ಪೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!