












ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಸರ್ಗ (ಶ್ರೀಮತಿ ರೇಷ್ಮಾ ಮತ್ತು ಶ್ರೀ ರಾಘವೇಂದ್ರ ಖಾರ್ವಿ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಕಿದಿಯೂರು ಎಸ್. ವಿ. ಎಸ್. ಟಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎ. ಭಾಸ್ಕರ ಭಟ್ ಇವರ ಪ್ರಾಯೋಜಕತ್ವದಲ್ಲಿ, 7,00,000/- ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ‘ಲಲಿತಾ ಸದನ’ ಮನೆಯನ್ನು 03.02.2026ರಂದು ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ತಮ್ಮ ಅನುಗ್ರಹ ಸಂದೇಶದಲ್ಲಿ ಯಕ್ಷಗಾನ ಕಲಾರಂಗ ಇಡೀ ಉಡುಪಿ ಅಭಿಮಾನ ಪಡುವ ಸಂಘಟನೆ. ಅವರ ಸಾಮಾಜಿಕ ಕಳಕಳಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಾರ್ಯಕರ್ತರು ವಹಿಸುವ ಪರಿಶ್ರಮ ಅನನ್ಯ. ಪಾರದರ್ಶಕ ವ್ಯವಹಾರದಿಂದ ಸಮಾಜದಲ್ಲಿ ಪಡೆದಿರುವ ವಿಶ್ವಾಸಾರ್ಹತೆ ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು. ಸಂಪತ್ತಿನ ಒಂದು ಭಾಗ ಸಮಾಜಕ್ಕೆ ನೀಡಬೇಕೆಂಬುದನ್ನು ಸ್ವತಃ ಆಚರಿಸಿ ತೋರಿಸುತ್ತಿದ್ದಾರೆ. ಸಂಸ್ಥೆಯ ಕಾರ್ಯಯೋಜನೆಗಳು ಹೀಗೇ ಮುಂದುವರಿಯಲೆಂದು ಸ್ವಾಮೀಜಿ ಹರಸಿದರು. ಎ. ಭಾಸ್ಕರ ಭಟ್ ಮಾತನಾಡಿ ಕಲಾರಂಗದ ಸದಸ್ಯ ಎನ್ನಲು ನನಗೆ ಹೆಮ್ಮೆಯಾಗುತ್ತದೆ. ರುಚಿಶುದ್ಧಿ ಯಕ್ಷಗಾನ ಸಂಯೋಜಿಸುತ್ತಾ ಬಂದ ಸಂಸ್ಥೆ ಈಗ ಸಮಾಜ ಮತ್ತು ಶಿಕ್ಷಣಕ್ಕಾಗಿ ಮಾಡುತ್ತಿರುವ ಕೆಲಸ ಕಂಡು ಬೆರಗಾಗಿದ್ದೇನೆ. ಮನೆ ನಿರ್ಮಿಸಿ ಕೊಡುವ ಅವಕಾಶ ಕಲ್ಪಿಸಿ ನನ್ನ ಸಂಕಲ್ಪ ಈಡೇರಿಸಿದ್ದಕ್ಕಾಗಿ ನಾನು ಸಂಸ್ಥೆಗೆ ಕೃತಜ್ಞ. ಕಾಣಿಯೂರು ಶ್ರೀಪಾದರು ಬಂದು ಉದ್ಘಾಟಿಸಿದ್ದರಿಂದ ನಾನು ಅತ್ಯಂತ ಧನ್ಯನಾಗಿದ್ದೇನೆ. ಪ್ರತೀವರ್ಷ ವಿದ್ಯಾಪೆÇೀಷಕ್ಗೆ ಒಂದು ಮೊತ್ತ ನೀಡುತ್ತೇನೆ ಎಂದರು. ವಿದ್ಯಾಸಮುದ್ರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡು ಬಿ. ಅಮಿನ್, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಕೆ. ಸೀತಾರಾಮ ಭಟ್, ಅನಂತರಾಜ ಉಪಾಧ್ಯಾಯ, ವಿಜಯ ಕುಮಾರ್ ಮುದ್ರಾಡಿ, ಜಯರಾಮ ಪಡಿಯಾರ್, ಕಿಶೋರ ಸಿ. ಉದ್ಯಾವರ, ಮಂಜುನಾಥ ಹೆಬ್ಬಾರ, ಕೃಷ್ಣಮೂರ್ತಿ ಭಟ್, ನಾಗರಾಜ ಹೆಗಡೆ, ಅಶೋಕ್. ಎಂ, ಎಚ್. ಸುಜಯೀಂದ್ರ ಹಂದೆ, ಆನಂದ ಶೆಟ್ಟಿ, ಪ್ರಭಾಕರ ಭಂಡಿ, ನಾಗಭೂಷಣ ಭಟ್ ಸಂಸ್ಥೆಯ ಹಿತೈಷಿಗಳಾದ ಮೀನಾಲಕ್ಷಣಿ ಅಡ್ಯಂತಾಯ, ತಾರಾ ಮೇಡಂ, ವಿನೋದಾ ಎಂ., ಕಿದಿಯೂರು ಪ್ರೌಢ ಶಾಲೆಯ ಪೂರ್ಣಿಮಾ ಮೇಡಂ, ಸುಲೋಚನಾ, ಸಂಪತ್, ರವಿಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
