

ಉಡುಪಿಯ ಪೋಲೀಸ್ ಅಧೀಕ್ಷಕರಾಗಿದ್ದು, ತಮ್ಮ ಕರ್ತವ್ಯದಕ್ಷತೆಯಿಂದ ಉಡುಪಿ ನಾಗರಿಕರ ಹೃದಯದಲ್ಲಿ ಸ್ಥಾಯಿಯಾಗಿರುವ ಅಣ್ಣಾಮಲೈಯವರು 26.09.2026ರಂದು ಯಕ್ಷಗಾನ ಕಲಾರಂಗದ ಕಟ್ಟಡ ಮತ್ತು ಮನೆ ಹಸ್ತಾಂತರದ ವಿಡಿಯೋ ತುಣುಕು ವೀಕ್ಷಿಸಿ ಅತ್ಯಂತ ಸಂತಸ ವ್ಯಕ್ತ ಪಡಿಸಿದರು. ಸಂಸ್ಥೆಯ ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ಅಗಾಧತೆ ಮತ್ತು ಸಾಮಾಜಿಕ ಕಳಕಳಿಗೆ ಮೆಚ್ಚುಗೆ ಸೂಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಅಣ್ಣಾಮಲೈಯವರು ಉಡುಪಿ ಬಿಟ್ಟ ಮೇಲೂ ಸಂಸ್ಥೆಯನ್ನು ನಿರಂತರ ಪ್ರೋತ್ಸಾಹಿಸುತ್ತಾ ಬಂದಿರುತ್ತಾರೆ. ಈ ಸಂದರ್ಭದಲ್ಲಿ ಅಣ್ಣಾಮಲೈಯವರು ಕೆಲವರ್ಷಗಳ ಹಿಂದೆ ಹತ್ಯೆಗೀಡಾದ, ಬೈಂದೂರಿನ ಅಕ್ಷತಾ ದೇವಾಡಿಗಳ ಹೆಸರಿನಲ್ಲಿ, ಬೈಂದೂರು ಸರಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ ಪ್ರತೀ ವರ್ಷ ರೂ. 25,000/- ಸಹಾಯಧನವನ್ನು ನೀಡುತ್ತಾ ಬರುತ್ತಿರುವುದನ್ನು ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಕೃತಜ್ಞತೆಯಿಂದ ಸ್ಮರಿಸಿಕೊಂಡರು. ಸಂಸ್ಥೆಯ ವತಿಯಿಂದ ಅಧ್ಯಕ್ಷ ಎಂ. ಗಂಗಾಧರ ರಾವ್ ಅಣ್ಣಾಮಲೈ ಅವರನ್ನು ಗೌರವಿಸಿದರು.