Yakshagana Kalaranga

ವಿದ್ಯಾಪೋಷಕ್ 74 ನೆಯ ಮನೆ ಹಸ್ತಾಂತರ.

ವಿದ್ಯಾಪೋಷಕ್ ದ್ವಿತೀಯ ಪಿ.ಯು ವಿದ್ಯಾರ್ಥಿನಿ ನವ್ಯಾ (ಶ್ರೀಮತಿ ಮಮತಾ ಮತ್ತು ದಿ ನಾಗರಾಜ ಮೊಗವೀರ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಕುಂಭಾಶಿಯ ಕೊರವಡಿಯಲ್ಲಿ ಕಮಲಾಕ್ಷಿ ಮತ್ತು ಬೈಕಾಡಿ ಶಂಕರನಾರಾಯಣ ರಾಯರ ಸ್ಮರಣೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ‘ಕಮಲ ಶಂಕರ ನಿಲಯ’ ಮನೆಯನ್ನು ಶ್ರೀ ಬೈಕಾಡಿ ಶ್ರೀನಿವಾಸ ರಾವ್ ದಂಪತಿಗಳು 01. 06. 2025 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ತನ್ನ ಮಾತಾ ಪಿತೃಗಳ ನೆನಪಿನ ಈಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲೆಂದು ಹಾರೈಸಿದರು. ತನ್ನ ಕುಟುಂಬದ ಹಿರಿಯರನ್ನು ಸ್ಮರಿಸಿ ಕೊಂಡರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು ಯಕ್ಷಗಾನ ಕಲಾರಂಗ ತನ್ನ ರಚನಾತ್ಮಕ ಕೆಲಸಗಳಿಂದಲೇ ಸಮಾಜಕ್ಕೆ ದೊಡ್ಡ ಸಂದೇಶ ಕೊಡುತ್ತಿದೆ ಎಂದರು. ಹಿರಿಯ ನ್ಯಾಯವಾದಿ ಎ. ಎಸ್. ಎನ್ ಹೆಬ್ಬಾರ್ ಕಲಾರಂಗದಂತ ಸಂಸ್ಥೆ ಸಮಾಜಕ್ಕೆ ಮಾದರಿ ಅದರ ಸದಸ್ಯನಾಗಿ ಹೆಮ್ಮೆ ಪಡುತ್ತೇನೆ ಎಂದು ಅಭಿಪ್ರಾಯ ಪಟ್ಟರು. ಶಿಕ್ಷಣತಜ್ಞ ಡಾ. ಮಹಾಬಲೇಶ್ವರ ರಾವ್ ಯಕ್ಷಗಾನ ಕಲಾರಂಗದ ವೀದ್ಯಾಪೋಷಕ್ ಮೂಲಕ ಉನ್ನತ ವಿದ್ಯೆಯಿಂದ ವಂಚಿತರಾಗಬಹುದಾದ ಪ್ರತಿಭಾವಂತ ಬಡವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜದಲ್ಲಿ ದೊಡ್ಡ ಪರಿವರ್ತನೆಗೆ ಕಾರಣರಾಗುತ್ತಿದ್ದಾರೆ ಎಂದರು.ರವಿಶಂಕರ ರಾವ್ ಬೈಕಾಡಿ ಮಾತನಾಡಿ,ಬಡ ಪ್ರತಿಭಾವಂತ ವಿದ್ಯಾರ್ಥಿನಿಗೆ ಅವಶ್ಯಕವಾಗಿದ್ದ ಮನೆ ನಿರ್ಮಿಸಿ ಕೊಡಲು ಅವಕಾಶ ಕಲ್ಪಿಸಿದ ಯಕ್ಷಗಾನ ಕಲಾರಂಗದ ಇಡೀ ತಂಡಕ್ಕೆ ನಮ್ಮ ಕುಟುಂಬ ಸದಾ ಋಣಿಯಾಗಿದೆ ಎಂದು ಧನ್ಯತೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಿರ್ಮಲಾ ಬೈಕಾಡಿ,ಡಾ.ವತ್ಸಲಾ ಬೈಕಾಡಿ, ಸಾಲಿಗ್ರಾಮ ವಾಸುದೇವ ಕಾರಂತ, ಡಾ. ಮನೋಹರ ಉಪಾಧ್ಯ, ಕಾಶೀಪತಿ ಅಲ್ಸೆ, ಮಹಾಬಲೇಶ್ವರ ಹೇರ್ಳೆ,ಸತೀಶ ಉಡುಪ, ತಮ್ಮಯ್ಯ ಹೇರ್ಳೆ ಯಕ್ಷಗಾನ ಕಲಾರಂಗದ ಎಸ್. ವಿ. ಭಟ್, ಪ್ರೊ. ಕೆ. ಸದಾಶಿವ ರಾವ್, ಯು.ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಕಿಶೋರ್ ಸಿ. ಉದ್ಯಾವರ, ಕೃಷ್ಣಮೂರ್ತಿ ಭಟ್, ಡಾ. ರಾಜೇಶ್ ನಾವುಡ, ಗಣೇಶ ಬ್ರಹ್ಮಾವರ, ಎಚ್.ಎನ್.ವೆಂಕಟೇಶ್, ಗಣಪತಿ ಭಟ್, ಜಯರಾಮ ಪಡಿಯಾರ್, ನರಸಿಂಹ ಮೂರ್ತಿ, ನರಸಿಂಹ ಮಧ್ಯಸ್ಥ,ವಿದ್ವಾನ್ ಶಾನಾಡಿ ಗೋವಿಂದ ಭಟ್ ಹಾಗೂ ಶಿಕ್ಷಕರಾದ ಗಣೇಶ್ ಕಾಂಚನ್ ಭಾಗವಹಿಸಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!