

















ವಿದ್ಯಾಪೋಷಕ್‍ನ ಐದು ದಿನಗಳ ಜೀವನ ವಿದ್ಯಾ ಸನಿವಾಸ ಶಿಬಿರ ಸಮಾರೋಪ ಸಮಾರಂಭ.
ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರಗಿದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳ ಐದು ದಿನಗಳ ಶೈಕ್ಷಣಿಕ ಸನಿವಾಸ ಶಿಬಿರ ‘ಜೀವನ ವಿದ್ಯಾ’ದ ಸಮಾರೋಪ ಸಮಾರಂಭ ಮಾರ್ಚ್ 3, ಸೋಮವಾರ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಪಿ. ವಿ. ಭಂಡಾರಿಯವರು ಮಾತನಾಡಿ,ಶ್ರದ್ಧೆಯಿಂದ ಕಲಿಕೆ ಮುಂದುವರಿಸಿ.ನಿಮ್ಮ ಹಿಂದೆ ವಿದ್ಯಾಪೋಷಕ್ ಇದೆ.ಧೈರ್ಯದಿಂದ ಜೀವನವನ್ನು ಎದುರಿಸಿ. ಪಲಾಯನವಾದಿಗಳಾಗ ಬೇಡಿ. ಎಂದು ಕರೆಕೊಟ್ಟರು. ವೇದಿಕೆಯಲ್ಲಿ ಉದ್ಯಮಿ ಶ್ರೀಕಾಂತ ಅರಿಮಣಿತ್ತಾಯ, ಬೆಂಗಳೂರಿನ ವೆಂಕಟೇಶ ಮತ್ತು ಶ್ರೀಮತಿ ನಂದಾ ವೆಂಕಟೇಶ, ಗಾಂಧಿ ಆಸ್ಪತ್ರೆಯ ಡಾ.ಹರಿಶ್ಚಂದ್ರ,ಉಡುಪಿ ನಗರಸಭೆ ಸದಸ್ಯ ಗಿರೀಶ್ ಅಂಚನ್, ಮಂಗಳೂರಿನ ವಸಂತ ಆಚಾರ್ಯ, ದಿನೇಶ ಪುತ್ರನ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಶಿಬಿರದ ನಿರ್ದೇಶಕರಾದ ಮಂಗಳೂರಿನ ಪ್ರೋಟೊ ಅಪ್ ಸ್ಕಿಲ್‍ನ ಗುರುದತ್ತ ಬಂಟ್ವಾಳಕರ್, ಸಹನಾ ಕಿಣಿ ಹಾಗೂ ಬಳಗದವರನ್ನು ಗೌರವಿಸಲಾಯಿತು. ಹತ್ತು ಜನ ವಿದ್ಯಾರ್ಥಿಗಳು ಶಿಬಿರದ ತಮ್ಮ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಸುಬ್ರಹ್ಮಣ್ಯ ಬೈಪಡಿತ್ತಾಯ ಮತ್ತು ಯು. ಶ್ರೀಧರ ಅವರು ನೀಡಿದ ಪುಸ್ತಕಗಳನ್ನು ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಐದು ದಿನದ ಶಿಬಿರದಲ್ಲಿ ಮೇಜರ್ ಸಿ.ಎಸ್. ಆನಂದ,ಬನ್ನಾಡಿ ನಾರಾಯಣ ಆಚಾರ್ಯ, ಅಲೆವೂರು ಹರಿಕೃಷ್ಣ ಭಟ್ ಡಾ ಸುದರ್ಶನ ಮೂರ್ತಿ,ಸಿ.ಎ.ಗಿರಿಧರ್ ಕಾಮತ್,ಡಾ.ನಿವೇದಿತಾ, ನಿರಾಲಿ ವೋರಾ,ಡಾ.ರಾಜೇಶ್ವರಿ ಭಟ್,ಸುಧಾ ಅಡುಕುಳ,ಡಾ.ರಂಜಿತ್ ಕುಮಾರ್,ಡಾ.ಕುಮಾರ ನಾಯಕ್, ಡಾ.ಪ್ರಸನ್ನ ಆಚಾರ್ಯ, ಮುರಳೀಧರ ರಾವ್,ಯಶ್ ವೋರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ,ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಪ್ರಸಾದ್ ವಂದಿಸಿದರು. ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ,ಅಶೋಕ ಎಂ. ಸಹಕರಿಸಿದರು. ಶಿಬಿರದಲ್ಲಿ ಉಡುಪಿ ಜಿಲ್ಲೆಯ 230 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದ ನಾಲ್ಕನೇ ದಿನ ರಾತ್ರಿ ನಡೆಸಿದ ಕ್ಯಾಂಪ್ ಫೈರ್ ಮತ್ತು ಮರು ದಿನ ಪೂರ್ವಾಹ್ನ ನಡೆಸಿದ ಸ್ವಚ್ಛತಾ ಅಭಿಯಾನ ವಿದ್ಯಾರ್ಥಿಗಳಿಗೆ ವಿಶೇಷ ಸ್ಫೂರ್ತಿ ನೀಡಿತು