ಹಕ್ಲಾಡಿ ಶ್ರೀ ಕೆ.ಎಸ್.ಎಸ್ ಸರಕಾರಿ ಪ್ರೌಢಶಾಲಾ ವಠಾರದಲ್ಲಿ ಡಿಸೆಂಬರ್ 26 ಮತ್ತು 27 ರಂದು ನಾಲ್ಕು ಪ್ರೌಢಶಾಲೆಗಳ ಕಿಶೋರ ಯಕ್ಷಗಾನ ಸಂಭ್ರಮ ನಡೆಯಲಿದ್ದು, ಇದರ ಉದ್ಘಾಟನೆಯನ್ನು 26.12.2024 ರಂದು ಹಿರಿಯ ಪ್ರಸಂಗಕರ್ತರಾದ ಶ್ರೀ ಕಂದಾವರ ರಘುರಾಮ ಶೆಟ್ಟಿಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬೈಂದೂರು ಶಾಸಕರಾದ ಶ್ರೀ ಗುರುರಾಜ ಗಂಟಿಹೊಳೆಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಕ್ಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಭಾಷ್ ಶೆಟ್ಟಿ ಹೊಳ್ಮಗೆ, ಹಕ್ಲಾಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂಗೀತ ಸಂತೋಷ ಮೊಗವೀರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಬಗ್ವಾಡಿ ನಿವೃತ್ತ ಶ್ರೇಣಿ ಮುಖ್ಯೋಪಾಧ್ಯಾಯ ರಾಜೀವ ಶೆಟ್ಟಿ, ತಲ್ಲೂರು ಸರಕಾರಿ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಅಸ್ಲಾಂ, ಬೈಂದೂರು ಯಕ್ಷ ಗುರುಕುಲ ಸಂಚಾಲಕ ಸುನೀಲ್ ಹೊಲಾಡು, ಹಕ್ಲಾಡಿ ಚನ್ನಕೇಶವ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಕಿಶೋರಕುಮಾರ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ ಎಸ್. ಸ್ವಾಗತಿಸಿದರು.ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಎಚ್. ಎನ್. ಶೃಂಗೇಶ್ವರ, ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು. ಸಭೆಯ ಬಳಿಕ ಸರಕಾರಿ ಪ್ರೌಢಶಾಲೆ, ತಲ್ಲೂರು ಇಲ್ಲಿಯ ವಿದ್ಯಾರ್ಥಿಗಳಿಂದ, ಪ್ರಭಾಕರ್ ಆಚಾರ್ ನಿರ್ದೇಶನದಲ್ಲಿ ಭೀಷ್ಮ ವಿಜಯ ಮತ್ತು ಸರಕಾರಿ ಪ್ರೌಢಶಾಲೆ, ಹಕ್ಲಾಡಿ ಇದರ ವಿದ್ಯಾರ್ಥಿಗಳಿಂದ ಪ್ರದೀಪ ಶೆಟ್ಟಿ ನಾರ್ಕಳಿ ನಿರ್ದೇಶನದಲ್ಲಿ ಹಿರಣ್ಯಾಕ್ಷವಧೆ ಭಕ್ತಪ್ರಹ್ಲಾದ ಯಕ್ಷಗಾನ ಪ್ರದರ್ಶನಗೊಂಡವು.