Yakshagana Kalaranga

ಕಿಶೋರ ಯಕ್ಷಗಾನ ಸಂಭ್ರಮ – 2024 ಉಚ್ಚಿಲ ಉದ್ಘಾಟನೆ ಮತ್ತು ಸಮಾರೋಪ

ಡಿಸೆಂಬರ್ 20 ರಿಂದ 23ರ ತನಕ,ಎಂಟು ಪ್ರೌಢಶಾಲೆಗಳ ಕಿಶೋರ ಯಕ್ಷಗಾನ ಸಂಭ್ರಮ ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಾಳದ ವಠಾರದಲ್ಲಿ ನಡೆಯಲಿದ್ದು, ಇದರ ಉದ್ಘಾಟನೆಯನ್ನು 20-12-2024 ರಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟಿನ ಅಧ್ಯಕ್ಷರಾದ ಡಾ.ಜಿ.ಶಂಕರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ, ಕ್ಷೇತ್ರ ಆಡಳಿತ ಅಧ್ಯಕ್ಷರಾದ ಗಿರಿಧರ ಸುವರ್ಣ,ಮಹಾಜನ ಸಂಘದ ಸದಸ್ಯರಾದ ಗುಂಡು ಬಿ.ಅಮೀನ್, ಕೋಶಾಧಿಕಾರಿ ಸುಧಾಕರ ಕುಂದರ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಸ್ವಾಗತಿಸಿದರು.ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.ಅಜಿತ್ ಕುಮಾರ್ ಮತ್ತು ಕಿಶೋರ್ ಸಿ.ಉದ್ಯಾವರ ಸಹಕರಿಸಿದರು. ಸಭೆಯ ಪೂರ್ವದಲ್ಲಿ ಗಣಪತಿ ಪ್ರೌಢಶಾಲೆ, ಪಡುಬಿದ್ರಿ ಇಲ್ಲಿಯ ವಿದ್ಯಾರ್ಥಿಗಳಿಂದ,ನಿತಿನ್ ಪಡುಬಿದ್ರಿ ನಿರ್ದೇಶನದಲ್ಲಿ ತರಣಿಸೇನಾ ಕಾಳಗ ಮತ್ತು ಸಭೆಯ ಬಳಿಕ ಮಹಾದೇವಿ ಪ್ರೌಢಶಾಲೆ,ಕಾಪು ಇದರ ವಿದ್ಯಾರ್ಥಿಗಳಿಂದ ಸತೀಶ್ ಆಚಾರ್ಯ ನಿರ್ದೇಶನದಲ್ಲಿ ಅಷ್ಟಾಕ್ಷರೀ ಮಂತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡವು.

ಕಾಪು ವಿಧಾನ ಸಭಾ ವ್ಯಾಪ್ತಿಗೆ ಸೇರಿದ ಎಂಟು ಶಾಲೆಗಳ ಪ್ರದರ್ಶನ ಉಚ್ಚಿಲ ಮಹಾಲಕ್ಷ್ಮೀ ದೇವಳದ ಆಶ್ರಯದಲ್ಲಿ,ದೇವಳದ ವಠಾರದಲ್ಲಿ ನೆಡೆದಿದ್ದು ಅದರ ಸಮಾರೋಪ ಸಮಾರಂಭ 23.12.24 ರಂದು ಜರಗಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಗರ್ಮೆ ಸುರೇಶ ಶೆಟ್ಟಿಯವರು ಮಾತನಾಡಿ ಯಕ್ಷ ಶಿಕ್ಷಣ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹತ್ತ್ವದ ಪಾತ್ರ ವಹಿಸುತ್ತದೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಶಾಲೆಗಳಿಗೆ ಇದನ್ನು ವಿಸ್ತರಿಸೋಣ ಎಂದರು. ಈ ಮಹಾಭಿಯಾನದ ಯಶಸ್ಸಿಗೆ ಕಾರಣರಾದ ಕಲಾರಂಗದ ಕಾರ್ಯಕರ್ತರನ್ನು ಅಭಿನಂದಿಸಿದರು. ಮಂಗಳೂರಿನ ಖ್ಯಾತ ವೖದ್ಯ ಡಾ. ಜೆ. ಎನ್ ಭಟ್, ಗುರು ಬನ್ನಂಜೆ ಸಂಜೀವ ಸುವರ್ಣ, ನಿವೃತ್ತ ಪ್ರಾಧ್ಯಾಪಕ, ಡಾ.ಚಂದ್ರಶೇಖರ ಶೆಟ್ಟಿ, ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ, ದ. ಕ ಮೊಗವೀರ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ ಹೆಜಮಾಡಿ, ಕಲಾ ಗಂಗೋತ್ರಿಯ ಸದಾಶಿವ ಅಭ್ಯಾಗತರಾಗಿ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಪ್ರದರ್ಶನ ನೀಡಿದ ಶಾಲೆಗಳ ಐವರು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ನಾರಾಯಣ ಎಂ. ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಲಾರಂಗದ ಕಾರ್ಯಕರ್ತರಾದ ಕೆ. ಅಜಿತ್ ಕುಮಾರ, ಕಿಶೋರ.ಸಿ. ಉದ್ಯಾವರ, ನಾಗರಾಜ ಹೆಗಡೆ ಸಹಕರಿಸಿದರು. ಸಮಾರಂಭದ ಪೂರ್ವದಲ್ಲಿ ಉದ್ಯಾವರದ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ನಿರಂಜನ ಭಟ್ ನಿರ್ದೇಶನದಲ್ಲಿ ಕೃಷ್ಣಾರ್ಜುನ ಕಾಳಗ ಬಳಿಕ ಉಚ್ಚಿಲದ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನಿಶ್ವಲ್ ತೀರ್ಥಹಳ್ಳಿ ನಿರ್ದೇಶನದ ಜಾಂಬವತೀ ಕಲ್ಯಾಣ ಪ್ರಸಂಗಗಳು ಪ್ರಸ್ತುತಗೊಂಡವು

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!