ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿಯರಾದ ಪ್ರಥಮ ಬಿ. ಕಾಂ. ನ ಸಂಗೀತಾ ಹಾಗೂ ದ್ವಿತೀಯ ಪಿ.ಯು.ಸಿಯ ಸುಪ್ರೀತಾ ಇವರಿಗೆ ಬ್ರಹ್ಮಾವರ ತಾಲೂಕಿನ ಜಾನುವಾರುಕಟ್ಟೆಯಲ್ಲಿ ಶಾರದಾ ಮತ್ತು ಪಾಂಡೇಶ್ವರ ರಾಮರಾಯರ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳ ಪ್ರಾಯೋಜಕತ್ವದಲ್ಲಿ ರೂ.7ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ಶಾರದಾರಾಮ 26.10.2024ರಂದು ಶಾರದಾ ಕಾರಂತರ 50ನೇ ಪುಣ್ಯತಿಥಿಯ ದಿನ ಉದ್ಘಾಟನೆಗೊಂಡಿತು. ಶಾರದಾ ರಾಮ ಕಾರಂತರ ಮಕ್ಕಳಾದ ಪಿ. ಗೋವಿಂದರಾಜ ಕಾರಂತ, ಪಿ. ವಾಸುದೇವ ಕಾರಂತ, ಜಯಲಕ್ಷ್ಮೀ ಉಪಾಧ್ಯ, ಸೀತಾಲಕ್ಷ್ಮೀ ಜಿ.ರಾವ್
ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಶಾರದಾರಾಮ ಕುಟುಂಬದ ಮೂರು ತಲೆಮಾರಿನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ಕಲಾರಂಗದ ಕೆಲಸದ ವೖಖರಿ ಬೆರಗು ಹುಟ್ಟಿಸುತ್ತದೆ ಎಂದರು. ಅಭ್ಯಾಗತರಾದ ಎ.ಎಸ್.ಎನ್ ಹೆಬ್ಬಾರ ಈ ಸಂದರ್ಭದಲ್ಲಿ ಮಾತನಾಡುತ್ತಾ ರಾಮರಾಯರು ಉಡುಪಿಯ ಬೋರ್ಡ್ ಹೈಸ್ಕೂಲ್ ಮತ್ತು ಕೋಟೇಶ್ವರದ ಬೋರ್ಡ್ ಹೈಸ್ಕೂಲ್ ಗಳಲ್ಲಿ ಓರ್ವ ಆದರ್ಶ ಶಿಕ್ಷಕನಾಗಿ ಸಮಾಜದ ಮನ್ನಣೆಗೆ ಭಾಜನರಾಗಿದ್ದರು.ಅವರ ಪತ್ನಿ ಶಾರದಮ್ಮ 6 ಗಂಡು 6 ಹೆಣ್ಣು ಮಕ್ಕಳನ್ನು ಸಲಹಿ,ಶಿಕ್ಷಣವನ್ನು ನೀಡಿ ಕುಟುಂಬ ವತ್ಸಲೆಯಾಗಿ ಬಾಳಿದವರು ಎನ್ನುತ್ತಾ ಅವರೀರ್ವರ ಸಾತ್ವಿಕ ವ್ಯಕ್ತಿತ್ವವನ್ನು ಪರಿಚಯಿಸಿದರು. ವಾಸುದೇವ ಕಾರಂತರು ಸಂಸ್ಥೆಯ ಸಮಾಜಪರ ಅಗಾಧ ಕೆಲಸ ನಮ್ಮ ಇಡೀ ಕುಟುಂಬಕ್ಕೆ ತೃಪ್ತಿ ತಂದಿದೆ ನಿಮ್ಮೊಂದಿಗೆ ನಾವಿದ್ದೇವೆ ಎಂದರು. ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ. ಭಟ್, ಪಿ.ಕಿಶನ್.ಹೆಗ್ಡೆ, ವಿ. ಜಿ. ಶೆಟ್ಟಿ, ಬಿಲ್ಲಾಡಿ ಪಂಚಾಯತ ಮಾಜಿ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಸಂಸ್ಥೆಯ ಕಾರ್ಯಕರ್ತರಾದ ಯು.ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಸೀತಾರಾಮ ಭಟ್, ಭುವನಪ್ರಸಾದ್ ಹೆಗ್ಡೆ, ವಿಜಯ ಕುಮಾರ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಪಿ.ಕೃಷ್ಣಮೂರ್ತಿ ಭಟ್, ಸಂತೋಷ ಕುಮಾರ್ ಶೆಟ್ಟಿ, ಕೆ.ಅಜಿತ್ ಕುಮಾರ್, ಅಶೋಕ ಎಂ., ಡಾ. ರಾಜೇಶ್ ನಾವಡ, ಗಣಪತಿ ಭಟ್, ನಾಗರಾಜ ಹೆಗಡೆ, ವಿನೋದಾ ಎಂ. ಕಡೆಕಾರ್, ನರಸಿಂಹಮೂರ್ತಿ, ಕಿಶೋರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಮ್. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿದ 57 ನೆಯ ಮನೆಯಾಗಿದೆ.