ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ಇದರ 2024ರ ಸಾಲಿನ ಯಕ್ಷಗಾನ ಉದ್ಘಾಟನಾ ಕಾರ್ಯಕ್ರಮ
ಇಂದು ಸಂಜೆ 4:00 ಗಂಟೆಗೆ ನಮ್ಮ ಶಾಲೆಯಲ್ಲಿ ಯಕ್ಷಗಾನ ಉದ್ಘಾಟನಾ ಸಮಾರಂಭವು ನೆರವೇರಿತು. ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕುಮಾರ್, ಮುಖ್ಯ ಅತಿಥಿ ಎಂ ಎಲ್ ಸಾಮಗ, ಯಕ್ಷಗಾನ ಗುರುಗಳಾದ ನಿತ್ಯಾನಂದ ಶೆಟ್ಟಿಗಾರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಕ್ಷಗಾನ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಮಾಡಿ, ಶಾಲಾ ಮುಖ್ಯೋಪಾಧ್ಯಾಯರು ಎಲ್ಲರನ್ನು ಹೂ ನೀಡಿ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾದ ಶ್ರೀಯುತ ಎಂ ಎಲ್ ಸಾಮಗ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ,
ತಮ್ಮ ಪ್ರೇರಣಾದಾಯಕ ಮಾತುಗಳಿಂದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಯಕ್ಷಗಾನ ಗುರುಗಳಾದ ಶ್ರೀಯುತ ನಿತ್ಯಾನಂದ ಶೆಟ್ಟಿಗಾರ್ ಇವರು ತಮ್ಮ ಮೌಲ್ಯಯುತ ಮಾತುಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಿದರು. ಯಕ್ಷಗಾನ ವಿದ್ಯಾರ್ಥಿಗಳು ತಮ್ಮ ಸುಮಧುರ ಕಂಠದ ಹಾಡಿನಿಂದ ಎಲ್ಲರ ಮನ ಸೆಳೆದರು. ಸಹ ಶಿಕ್ಷಕಿ ಸಂಧ್ಯಾ ಇವರು ಸಭೆಯಲ್ಲಿರುವ ಎಲ್ಲಾ ಗಣ್ಯರಿಗೂ ವಿದ್ಯಾರ್ಥಿಗಳಿಗೂ ವಂದಿಸಿ ಯಕ್ಷಗಾನ ಕಲಾರoಗಕ್ಕೂ ತಮ್ಮ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು. ಹತ್ತನೇ ತರಗತಿಯ ದೃತಿ ಸಂತೋಷ್ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರೂಪಿಸಿದರು.