ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‍ನ, ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ, ಬ್ರಹ್ಮಾವರ ತಾಲೂಕಿನ ಚೇರ್ಕಾಡಿಯ ಸೃಷ್ಟಿ ಇವಳಿಗೆ ಉಜ್ವಲ್ ಡೆವಲಪರ್ಸ್ ನ ಮಾಲಕರಾದ ಪಿ. ಪುರುಷೋತ್ತಮ ಶೆಟ್ಟಿಯವರು ತಮ್ಮ ಮಾತೃಶ್ರೀಯವರ ನೆನಪಿನಲ್ಲಿ ನಿರ್ಮಿಸಿದ ನೂತನ ಮನೆ ‘ಭಾಗೀರಥೀ ನಿಲಯ’ 20.04.2024ರಂದು ಉದ್ಘಾಟನೆಗೊಂಡಿತು. ಪಿ. ಪುರುಷೋತ್ತಮ ಶೆಟ್ಟಿಯವರು ಜ್ಯೋತಿ ಬೆಳಗಿಸಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಪುರುಷೋತ್ತಮ ಶೆಟ್ಟಿಯವರ ಪತ್ನಿ ಅಮೃತಾ ಪಿ. ಶೆಟ್ಟಿ, ಪುತ್ರರಾದ ಉಜ್ವಲ್, ಅಜಯ್ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್, ಸಂಸ್ಥೆಯ ದಾನಿ ಯು. ವಿಶ್ವನಾಥ ಶೆಣೈ, ಪ್ರವೀಣ್ ಹೆಗ್ಡೆ, ರಿಚ್ಮಂಡ್ ಕ್ಲೇರ್, ಮೀನಾಲಕ್ಷಣಿ ಅಡ್ಯಂತಾಯ, ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಚೇರ್ಕಾಡಿ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ನಾಯಕ, ಪರ್ಕಳ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆನಂದ ನಾಯ್ಕ್, ಮಲ್ಲಿಕಾರ್ಜುನ ಸ್ವಾಮಿ, ಸದಸ್ಯರುಗಳಾದ ಬಿ. ಭುವನಪ್ರಸಾದ್ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ, ಅನಂತರಾಜ್ ಉಪಾಧ್ಯ, ಎಚ್. ಎನ್. ವೆಂಕಟೇಶ, ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ರಾಜೇಶ್ ನಾವಡ, ರಾಮದಾಸ್ ನಾಯಕ್, ಭಾಗವತರಾದ ಸದಾಶಿವ ಅಮೀನ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ನಾಳೆ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆಗೊಳ್ಳುತ್ತಿದ್ದು, ಅದರ ಪೂರ್ವದಲ್ಲಿ ಇಂದು ಬಡ ಕುಟುಂಬಕ್ಕೆ ಆಶ್ರಯ ಕಲ್ಪಿಸುತ್ತಿರುವುದು ಸಂಸ್ಥೆಯ ಕಾರ್ಯಕರ್ತರಿಗೆ ಧನ್ಯತೆಯನ್ನು ಉಂಟುಮಾಡಿದೆ. ಇದೊಂದು ಅರ್ಥಪೂರ್ಣ ಹಾಗೂ ಔಚಿತ್ಯ ಪೂರ್ಣ ಕಾರ್ಯವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿದ 52ನೇಯ ಮನೆಯಾಗಿದೆ.