ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿ, ಪ್ರಥಮ ಪಿ.ಯು.ಸಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ, ಬ್ರಹ್ಮಾವರ ತಾಲೂಕಿನ ನಿಂಜೂರುಬೆಟ್ಟಿನ ಜಯಲಕ್ಷ್ಮೀ ಇವಳಿಗೆ ಪಿ. ಉಪೇಂದ್ರ ನಾಯಕ್ ಇವರ ಸ್ಮರಣಾರ್ಥ ಯು. ಎಸ್. ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಪ್ರಾಯೋಜಕತ್ದಲ್ಲಿ ನಿರ್ಮಿಸಿದ ‘ಉಪೇಂದ್ರ ನಿಲಯ’ ಮನೆ 03.04.2024ರಂದು ಉದ್ಘಾಟನೆಗೊಂಡಿತು. ಜ್ಯೋತಿ ಬೆಳಗಿಸಿ ಶುಭಕೋರಿದ ಯು. ಎಸ್.ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‍ನ ವಿಶ್ವಸ್ಥರಾದ ಪಿ. ಸುರೇಶ್ ನಾಯಕ್ ತಮ್ಮ ಅಜ್ಜ ಉಪೇಂದ್ರ ನಾಯಕ್ ರ ಜನಪರ ಕಾಳಜಿಯನ್ನು ಸ್ಮರಿಸಿಕೊಂಡರು. ಶುಭಾಶಂಸನೆಗೈದ ಹಾದಿಗಲ್ಲು ಅಭಯಲಕ್ಷ್ಮೀ ನರಸಿಂಹ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ಸಮಾಜದ ಕಷ್ಟಕ್ಕೆ ಸ್ಪಂದಿಸುವುದೆ ನಿಜವಾದ ಸೇವೆ. ಪಾಂಗಳ ನಾಯಕ ಕುಟುಂಬದ ಪಿ. ರಬೀಂದ್ರ ನಾಯಕರೊಂದಿಗಿನ ತನ್ನ ಒಡನಾಟವನ್ನು ನೆನಪಿಸಿಕೊಂಡು, ಇದು ಆ ಮಹಾ ಚೇತನಕ್ಕೆ ಅತ್ಯಂತ ತಪ್ತಿ ನೀಡಿದೆ. ನಿಸ್ಪೃಹ ಕಾರ್ಯಕರ್ತರಿಂದ ಕೂಡಿದ ಯಕ್ಷಗಾನ ಕಲಾರಂಗ ಮಾದರಿ ಸಂಸ್ಥೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಕೆ. ಬಾಲಕೃಷ್ಣ ಹೆಗ್ಡೆ ಅಭ್ಯಾಗತರಾಗಿ ಭಾಗವಹಿಸಿದ್ದರು. ವಿನ್ಸೆಂಟ್ ಲುಯಿಸ್, ಜಾನೆಟ್ ಲುಯಿಸ್, ಸಂಸ್ಥೆಯ ದಾನಿಗಳಾದ ಯು. ವಿಶ್ವನಾಥ ಶೆಣೈ, ಯು. ಶ್ರೀಧರ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರುಗಳಾದ ಅನಂತರಾಜ್ ಉಪಾಧ್ಯ, ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಕೃಷ್ಣಮೂರ್ತಿ ಭಟ್, ಅಜಿತ್ ಕುಮಾರ್, ಎಚ್. ಎನ್. ವೆಂಕಟೇಶ್, ಗಣೇಶ್ ಬ್ರಹ್ಮಾವರ, ಸುದರ್ಶನ ಬಾಯರಿ ಹಾಗೂ ಕೆ. ಎಸ್. ಶ್ರೀನಿವಾಸ್ ನಾಯಕ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಸಂಸ್ಥೆಯು 49 ವರ್ಷ ಪೂರೈಸಿ 50ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸಂದರ್ಭದಲ್ಲಿ ಈ ಮನೆ ಹಸ್ತಾಂತರ ಸಮಾರಂಭವು ಸಂಸ್ಥೆಯ ಸುವರ್ಣ ವರ್ಷದ ಮೊದಲ ಕಾರ್ಯಕ್ರಮವಾಗಿದೆ. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿದ 51ನೇಯ ಮನೆಯಾಗಿದೆ.