Yakshagana Kalaranga

ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾಪೋಷಕ್ ಸಹಾಯಧನ ವಿತರಣೆ.

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಈ ವರ್ಷದಿಂದ ಯಕ್ಷನಿಧಿಯ ಸದಸ್ಯ ಕಲಾವಿದರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಆರಂಭಿಸಿದ್ದು, 24.09.2023ರಂದು ಆರ್ಥಿಕ ನೆರವಾಗಿ 48 ಕಲಾವಿದರ 54 ಮಕ್ಕಳಿಗೆ ರೂಪಾಯಿ 5,24,000/- ಸಹಾಯಧನವನ್ನು ವಿತರಿಸಿತು. ಕಲಾರಂಗದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿ ಮಾತನಾಡಿದ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕಲಾವಿದರು ಸಮಾಜದ ಆಸ್ತಿ, ಅವರ ಯೋಗಕ್ಷೇಮ ನೋಡಿಕೊಳ್ಳುವುದು ಸಮಾಜದ ಹೊಣೆ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಾರಂಗ ಕಳೆದ 23 ವರ್ಷಗಳಿಂದ ಮಾಡುತ್ತಾ ಬಂದ ಕೆಲಸ ಸಮಾಜಕ್ಕೆ ದೊಡ್ಡ ಸಂದೇಶ, ಕಲಾವಿದರು ಹೆಚ್ಚು ಅಧ್ಯಯನಶೀಲರಾದಾಗ ಅವರ ಕೊಡುಗೆ ಇನ್ನೂ ಹೆಚ್ಚು ಅರ್ಥಪೂರ್ಣಗುತ್ತದೆ ಎಂದು ಹೇಳಿದರು. ಅಭ್ಯಾಗತರಾಗಿ ಭಾಗವಹಿಸಿದ್ದ ಸಂಸ್ಥೆಯ ಮಹಾದಾನಿ, ಅಭಿಮಾನಿ ಮಂಟಪ ಡಾ. ಪಿ. ಮನೋಹರ ಉಪಾಧ್ಯರು ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಸಮಾಜದ ಋಣ ಇದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಅದನ್ನು ತೀರಿಸಬೇಕಾದ ಕರ್ತವ್ಯಕ್ಕೆ ಬದ್ಧರಾಗಬೇಕು. ಸಾಂಘಿಕವಾಗಿ ಈ ಕೆಲಸವನ್ನು ಯಕ್ಷಗಾನ ಕಲಾರಂಗ ಹಲವು ವರ್ಷಗಳಿಂದ ವೃತದಂತೆ ನಡೆಸಿಕೊಂಡು ಬಂದಿದೆ ಎಂದು ಹೇಳಿದರು. ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ ಮತ್ತು ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ವಿಲಾಸಿನಿ ಬಿ. ಶೆಣೈ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾರ್ಯದರ್ಶಿ ಮುರಲಿ ಕಡೆಕಾರ್ ಇದರ ಭಾಗಶಃ ಮೊತ್ತವನ್ನು ಹೊರನಾಡಿನ ಧರ್ಮಕರ್ತೃ ಡಾ. ಬಿ. ಭೀಮೇಶ್ವರ ಜೋಶಿಯವರು ನೀಡಿದ್ದನ್ನು ಸ್ಮರಿಸಿಕೊಂಡರು. ನಾರಾಯಣ ಎಂ. ಹೆಗಡೆ ವಂದಿಸಿದರು. ವಿದ್ಯಾಪ್ರಸಾದ್ ನಿರೂಪಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!