ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಮನೆ ಹಸ್ತಾಂತರ
ಯಕ್ಷಗಾನ ಕಲಾರಂಗದ ಅಂಗಸಂಸ್ಥೆಯ ವಿದ್ಯಾಪೋಷಕ ವಿದ್ಯಾರ್ಥಿನಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಬೈಕಾಡಿಯ ಸುಲೋಚನಾ ಮತ್ತು ಕೃಷ್ಣಮೂರ್ತಿ ಆಚಾರ್ಯರ ಸುಪುತ್ರಿ ನವ್ಯಾಳಿಗೆ ನಿರ್ಮಿಸಿದ ನೂತನ ಮನೆ ‘ಪುಷ್ಪಾನಂದ’ ಇದರ ಉದ್ಘಾಟನೆಯನ್ನು ಉಡುಪಿ ಶಾಸಕರೂ, ಮನೆಯ ಪ್ರಾಯೋಜಕರೂ ಆದ ಶ್ರೀ ಯಶ್ಪಾಲ್ ಎ. ಸುವರ್ಣರು 25.08.2023 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅವರ ಮಾತಾಪಿತರಾದ ಪುಷ್ಪಾವತಿ ಸುವರ್ಣ ಮತ್ತು ಆನಂದ ಎನ್. ಪುತ್ರನ್ ನೆನಪಿನಲ್ಲಿ ನಿರ್ಮಿಸಿದ ಮನೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಯಕ್ಷಗಾನ ಕಲಾರಂಗವು ವಿಶ್ವಾಸಾರ್ಹತೆಗೆ ಇನ್ನೊಂದು ಹೆಸರಾಗಿದೆ. ಕಲೆ, …