Yakshagana Kalaranga

Past Events

ವಿದ್ಯಾಪೋಷಕ ವಿದ್ಯಾರ್ಥಿಗಳಿಗೆ ವಿನಮ್ರ ಸಹಾಧನ ವಿತರಣಾ ಸಮಾರಂಭ – 2023

ಪ್ರಾಮಾಣಿತೆ, ಸನ್ನಡತೆ, ವಿನಯಶೀಲತೆಯುಳ್ಳ ವಿದ್ಯಾರ್ಥಿ ಸಮಾಜಕ್ಕೆ ಆಸ್ತಿಯಾಗುತ್ತಾನೆ. ವಿದ್ಯಾರ್ಥಿಗಳು ಅನುಕರಣೆಯನ್ನಲ್ಲ ಅನುಸರಣೆಯನ್ನು ರೂಢಿಸಿಕೊಳ್ಳಬೇಕು ಎಂದು ಅಕ್ಟೋಬರ್ 1, 2023 ಭಾನುವಾರ ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಜರಗಿದ 18ನೆಯ ವರ್ಷದ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಶ್ರೀ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನುಡಿದರು. ಅಂಬಲಪಾಡಿ ದೇವಳದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ್, ಆನೆಗುಡ್ಡೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶ್ರೀರಮಣ ಉಪಾಧ್ಯ, ಡಾ. ಶರತ್ …

ವಿದ್ಯಾಪೋಷಕ ವಿದ್ಯಾರ್ಥಿಗಳಿಗೆ ವಿನಮ್ರ ಸಹಾಧನ ವಿತರಣಾ ಸಮಾರಂಭ – 2023 Read More »

ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾಪೋಷಕ್ ಸಹಾಯಧನ ವಿತರಣೆ.

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಈ ವರ್ಷದಿಂದ ಯಕ್ಷನಿಧಿಯ ಸದಸ್ಯ ಕಲಾವಿದರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಆರಂಭಿಸಿದ್ದು, 24.09.2023ರಂದು ಆರ್ಥಿಕ ನೆರವಾಗಿ 48 ಕಲಾವಿದರ 54 ಮಕ್ಕಳಿಗೆ ರೂಪಾಯಿ 5,24,000/- ಸಹಾಯಧನವನ್ನು ವಿತರಿಸಿತು. ಕಲಾರಂಗದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿ ಮಾತನಾಡಿದ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕಲಾವಿದರು ಸಮಾಜದ ಆಸ್ತಿ, ಅವರ ಯೋಗಕ್ಷೇಮ ನೋಡಿಕೊಳ್ಳುವುದು ಸಮಾಜದ ಹೊಣೆ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಾರಂಗ ಕಳೆದ 23 ವರ್ಷಗಳಿಂದ ಮಾಡುತ್ತಾ ಬಂದ …

ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾಪೋಷಕ್ ಸಹಾಯಧನ ವಿತರಣೆ. Read More »

ಕಲಾಂತರಂಗ 2022-23 ಬಿಡುಗಡೆ.

ಯಕ್ಷಗಾನ ಕಲಾರಂಗದ ವಾರ್ಷಿಕ ಸಂಚಿಕೆ ‘ಕಲಾಂತರಂಗ – 2022-23’ನ್ನು 16.09.2023 ರಂದು ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅದಮಾರು ಮಠದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆ ಯಕ್ಷನಿಧಿ, ವಿದ್ಯಾಪೋಷಕ್ ಮತ್ತು ಯಕ್ಷಶಿಕ್ಷಣದ ಕುರಿತು ಮಾಡುತ್ತಿರುವ ಒಂದು ವರ್ಷದ ಮಾಹಿತಿಯನ್ನು ಒಳಗೊಂಡಿರುವ ಈ ಹೊತ್ತಗೆಯನ್ನು ಅನಾವರಣಗೊಳಿಸಿ, ಒಂದೇ ಮನಸ್ಸಿನಿಂದ ನೀವೆಲ್ಲಾ ಒಟ್ಟಾಗಿ ಮಾಡುವ ಕೆಲಸ ಸಮಾಜಕ್ಕೆ ತುಂಬಾ ಉಪಯುಕ್ತವಾಗಿದೆ. ಸಂಸ್ಥೆ ಇನ್ನಷ್ಟು ಉತ್ಕರ್ಷೆಯನ್ನು ಸಾಧಿಸಲಿ ಎಂದು ಆಶೀರ್ವದಿಸಿದರು. ಆರಂಭದಲ್ಲಿ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷರಾದ ಎಸ್. ವಿ. …

ಕಲಾಂತರಂಗ 2022-23 ಬಿಡುಗಡೆ. Read More »

ಕುತ್ಯಾರು ಸೂರ್ಯಚೈತನ್ಯ ಪ್ರೌಢಶಾಲೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ

ಯಕ್ಷ ಶಿಕ್ಷಣ ಟ್ರಸ್ಟ್( ರಿ)ಉಡುಪಿ ಈ ವರ್ಷ ಕಾಪು ವಿಧಾನ ಸಭಾ ಕ್ಷೇತ್ತದ 15 ಪ್ರೌಢ ಶಾಲೆಗಳಲ್ಲಿ ಯಕ್ಷ ಶಿಕ್ಷಣ ಆರಂಭಿಸಿದ್ದು ಕುತ್ಯಾರು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ತರಗತಿ ಉದ್ಘಾಟನೆ ಸಪ್ಟಂಬರ್ 2, 2023ರಂದು ಜರಗಿತು. ಜ್ಯೋತಿ ಬೆಳಗಿಸಿ ಶುಭ ಕೋರಿದ ಶಾಸಕ ಗುರ್ಮೆ ಸುರೇಶ ಶೆಟ್ಟಿ ಉಡುಪಿಯ ಯಕ್ಷಗಾನ ಕಲಾರಂಗ ಯಕ್ಷ ಶಿಕ್ಷಣವೂ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಜತೆ ಕಾರ್ಯದರ್ಶಿ ನಾರಾಯಣ ಎಂ. …

ಕುತ್ಯಾರು ಸೂರ್ಯಚೈತನ್ಯ ಪ್ರೌಢಶಾಲೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ Read More »

ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ ವಿದ್ಯಾರ್ಥಿನಿ, ದ್ವಿತೀಯ ಪಿ.ಯು.ಸಿ.ಯಲ್ಲಿ ಓದುತ್ತಿರುವ ರಂಗನಕೆರೆಯ ಜಯಂತಿ ಕೃಷ್ಣ ಬಂಗೇರ ಸುಪುತ್ರಿ ನಿಶ್ಮಿತಾಳಿಗೆ ನಿರ್ಮಿಸಿದ ನೂತನ ಮನೆ ‘ಸಾವಿತ್ರಿ ರಾಮಚಂದ್ರ ಸದನ’ ಇದರ ಉದ್ಘಾಟನೆಯನ್ನು ಮನೆಯ ಪ್ರಾಯೋಜಕರಾದ ಡಾ. ಎಂ. ಆರ್ ಹೆಗಡೆ ಮತ್ತು ಕಮಲಾ ಹೆಗಡೆ ದಂಪತಿಗಳು ಇಂದು (28.08.2023) ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅವರ ಮಾತಾಪಿತರಾದ ಸಾವಿತ್ರಿ ಆರ್ ಹೆಗಡೆ ಮತ್ತು ರಾಮಚಂದ್ರ ಹೆಗಡೆ ನೆನಪಿನಲ್ಲಿ ನಿರ್ಮಿಸಿದ ಮನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪೇಜಾವರ ಶ್ರೀಗಳ ಮಾತಿನಿಂದ ಪ್ರೇರಣೆಗೊಂಡು, …

ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಮನೆ ಹಸ್ತಾಂತರ Read More »

ವಿದ್ಯಾಪೋಷಕ್ ಶೈಕ್ಷಣಿಕ ಸಮಾವೇಶ

ಉಡುಪಿ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಚಕ್ ನ ಇಂಜಿನಿಯರ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಶೈಕ್ಷಣಿಕ ಸಮಾವೇಶ ಆಗಸ್ಟ್ 27, 2023 ಭಾನುವಾರ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಂಗಣದಲ್ಲಿ ಜರಗಿತು. ಖ್ಯಾತ ಅಂಕಣಕಾರ, ಲೇಖಕ ಡಾ. ಬಿ ಭಾಸ್ಕರ್ ರಾವ್, ಡಾ. ಎಂ. ಆರ್. ಹೆಗಡೆ, ರಘುರಾಜ್ ರಾವ್, ಪ್ರವೀಣ್ ವಿ. ಗುಡಿ, ಡಾ. ಯು. ಸಿ. ನಿರಂಜನ್, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾತುಗಳನ್ನಾಡಿದರು.ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಉಪಾಧ್ಯಕ್ಷ ಎಸ್. ವಿ. ಭಟ್, ಜೊತೆ …

ವಿದ್ಯಾಪೋಷಕ್ ಶೈಕ್ಷಣಿಕ ಸಮಾವೇಶ Read More »

ಕಳತ್ತೂರು ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಯಕ್ಷಶಿಕ್ಷಣ ಆರಂಭ.

ಮೊರಾರ್ಜಿ ದೇಸಾಯಿ ವಸತಿಶಾಲೆ ಕಳತ್ತೂರಿನಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ಆಶಯದಂತೆ ಯಕ್ಷಶಿಕ್ಷಣ ಟ್ರಸ್ಟ್ (ರಿ.), ಉಡುಪಿ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ನಡೆಸಲ್ಪಡುವ ಯಕ್ಷಗಾನ ತರಗತಿಯನ್ನು 25.08.2023 ರಂದು ಉದ್ಘಾಟಿಸಲಾಯಿತು. ಯಕ್ಷಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಶಾಲೆಯ ಪ್ರಾಂಶುಪಾಲರಾದ ಉಮಾಕಾಂತ ಗೌಡ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಯಕ್ಷಗಾನ ಗುರು ಸತೀಶ್ ಆಚಾರ್ ಉಪಸ್ಥಿತರಿದ್ದರು. …

ಕಳತ್ತೂರು ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಯಕ್ಷಶಿಕ್ಷಣ ಆರಂಭ. Read More »

ಕಳತ್ತೂರು ಪಿ.ಕೆ.ಎಸ್ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಆರಂಭ.

ಪಿ.ಕೆ.ಎಸ್ ಪ್ರೌಢಶಾಲೆ ಕಳತ್ತೂರಿನಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ಆಶಯದಂತೆ ಯಕ್ಷಶಿಕ್ಷಣ ಟ್ರಸ್ಟ್ (ರಿ.), ಉಡುಪಿ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ನೀಡುವ ಯಕ್ಷಗಾನ ತರಗತಿಯನ್ನು 25.08.2023ರಂದು ಉದ್ಘಾಟಿಸಲಾಯಿತು. ಶಾಲೆಯ ಸಂಚಾಲಕ ಶಿವರಾಮ ಶೆಟ್ಟಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಯಕ್ಷಶಿಕ್ಷಣ ಟ್ರಸ್ಟ್ ಗ್ರಾಮೀಣ ಪ್ರದೇಶದ ಶಾಲೆಗೆ ಈ ಸೌಲಭ್ಯ ಕಲ್ಪಿಸಿದಕ್ಕಾಗಿ ಅಭಿನಂದಿಸಿದರು. ಯಕ್ಷಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, …

ಕಳತ್ತೂರು ಪಿ.ಕೆ.ಎಸ್ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಆರಂಭ. Read More »

We're currently hard at work gathering information and crafting content to bring you the best experience. Stay tuned for exciting updates!