ಮಣೂರು ಪಡುಕೆರೆ ಕಿಶೋರ ಯಕ್ಷಗಾನ ಸಂಭ್ರಮ ಸಮಾರೋಪ.
ಮಣೂರು ಸರಕಾರಿ ಸಂಯುಕ್ತ ಪ್ರೌಢಶಾಲಾ ವಠಾರದಲ್ಲಿ ಜರಗಿದ ಯಕ್ಷಶಿಕ್ಷಣ ಟ್ರಸ್ಟ್ ನ ಮಣೂರು ಪರಿಸರದ ಆರು ಶಾಲೆಗಳ ಪ್ರದರ್ಶನ 01.01.2024ರಂದು ಸಮಾಪನಗೊಂಡಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ಯಕ್ಷಶಿಕ್ಷಣ ಟ್ರಸ್ಟ್ ಸಮರ್ಪಣಾ ಭಾವದಿಂದ ಈ ಕೆಲಸವನ್ನು ಮಾಡುತ್ತಿದೆ. ಯಕ್ಷಗಾನ ಕಲಾರಂಗದ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು. ಆನಂದ ಸಿ. ಕುಂದರ್ ಮಾತನಾಡಿ ಕನ್ನಡ ಉಳಿಸುವಲ್ಲಿ ಯಕ್ಷಶಿಕ್ಷಣದ ಪಾತ್ರ ಮಹತ್ತ್ವದ್ದು, ಮುಂದಿನ ಬಾರಿಯೂ ಮಣೂರಿನಲ್ಲಿ ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಅವಕಾಶ ಸಿಗಬೇಕೆಂದು …