ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ 52ನೇ ಮನೆ ಹಸ್ತಾಂತರ
ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‍ನ, ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ, ಬ್ರಹ್ಮಾವರ ತಾಲೂಕಿನ ಚೇರ್ಕಾಡಿಯ ಸೃಷ್ಟಿ ಇವಳಿಗೆ ಉಜ್ವಲ್ ಡೆವಲಪರ್ಸ್ ನ ಮಾಲಕರಾದ ಪಿ. ಪುರುಷೋತ್ತಮ ಶೆಟ್ಟಿಯವರು ತಮ್ಮ ಮಾತೃಶ್ರೀಯವರ ನೆನಪಿನಲ್ಲಿ ನಿರ್ಮಿಸಿದ ನೂತನ ಮನೆ ‘ಭಾಗೀರಥೀ ನಿಲಯ’ 20.04.2024ರಂದು ಉದ್ಘಾಟನೆಗೊಂಡಿತು. ಪಿ. ಪುರುಷೋತ್ತಮ ಶೆಟ್ಟಿಯವರು ಜ್ಯೋತಿ ಬೆಳಗಿಸಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಪುರುಷೋತ್ತಮ ಶೆಟ್ಟಿಯವರ ಪತ್ನಿ ಅಮೃತಾ ಪಿ. ಶೆಟ್ಟಿ, ಪುತ್ರರಾದ ಉಜ್ವಲ್, ಅಜಯ್ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್, ಸಂಸ್ಥೆಯ ದಾನಿ ಯು. ವಿಶ್ವನಾಥ ಶೆಣೈ, …