ಯಕ್ಷಗಾನ ಗುರುಗಳ ಸಮಾಲೋಚನಾ ಸಭೆ
ಯಕ್ಷಶಿಕ್ಷಣ ಟ್ರಸ್ಟ್( ರಿ) ಉಡುಪಿ ಕಳೆದ 17 ವರ್ಷಗಳಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದು, ಈ ವರ್ಷ ಶಾಸಕರಾದ ಗುರುರಾಜ ಗಂಟಿಹೊಳೆಯವರ ಅಪೇಕ್ಷೆಯಂತೆ ಬೈಂದೂರು ವಿಧಾನಸಭಾ ವ್ಯಾಪ್ತಿಯ 11 ಶಾಲೆಗಳು ಸೇರಿ ಒಟ್ಟೂ 91 ಶಾಲೆಗಳಲ್ಲಿ ಯಕ್ಷಶಿಕ್ಷಣ ನಡೆಸಲು ಯೋಜಿಸಿದೆ. ಈ ಪ್ರಯುಕ್ತ ಯಕ್ಷಗಾನ ಗುರುಗಳ ಸಮಾಲೋಚನಾ ಸಭೆ ಇಂದು(12.6.24) ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದ ಹೊರಾಂಗಣದಲ್ಲಿ ಜರಗಿತು.ಉಡುಪಿ ಕ್ಷೇತ್ರದ ಶಾಸಕ,ಟ್ರಸ್ಟ್ ನ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮಾತನಾಡಿ,ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯನಿರ್ವಹಣೆಯಲ್ಲಿ ಕಲಾರಂಗದ …