ಕಿಶೋರ ಯಕ್ಷಗಾನ ಸಂಭ್ರಮ – 2022
ಕಿಶೋರ ಯಕ್ಷಗಾನ ಸಂಭ್ರಮ – 2022 Read More »
ಪ್ರಥಮ ಬಿ. ಕಾಂ. ಓದುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ ಭವ್ಯಶ್ರೀಯ ನೂತನ ಮನೆಯ ‘ಗೃಹ ಪ್ರವೇಶ’ವು ದಿನಾಂಕ 17-11-2022 ರಂದು ಕುಂದಾಪುರದ ನೇರಳಕಟ್ಟೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ವಿದ್ಯಾಪೋಷಕ್ ವತಿಯಿಂದ ರೂಪಾಯಿ 50,000/-ದ ಉಡುಗೊರೆ ನೀಡಿ ಪ್ರೋತ್ಸಾಹಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿಗಳಾದ ಪ್ರೊ. ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಉಪಸ್ಥಿತರಿದ್ದರು. ಕಳೆದ ವರ್ಷ ವಿದ್ಯಾಪೋಷಕ್ ‘ವಿನಮ್ರ ಸಹಾಯ ವಿತರಣಾ’ ಸಮಾರಂಭಕ್ಕೆ ಮಗಳನ್ನು ತಂದೆ(ವೆಂಕಟರಮಣ
ಫಲಾನುಭವಿ ವಿದ್ಯಾಪೋಷಕ್ ವಿದ್ಯಾರ್ಥಿನಿಯ ನೂತನ ಮನೆಗೆ ಉಡುಗೊರೆ Read More »
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಪ್ರವರ್ತಕರಾದ ಶ್ರೀ ಎಚ್. ಎಸ್. ಶೆಟ್ಟಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ವಿದ್ಯಾಪೋಷಕ್‍ನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರಾದ ಬೊಮ್ಮರಬೆಟ್ಟುವಿನ ಮಂಜುಶ್ರೀ ಹಾಗೂ ಅಲ್ತಾರಿನ ಪೂರ್ಣಿಮಾ ಇವರಿಗೆ ನಿರ್ಮಿಸಲಾದ ನೂತನ ಮನೆ ‘ರಾಜೀವ ಸದನ’ 16-11-2022ರಂದು ಉದ್ಘಾಟನೆಗೊಂಡಿತು. ಎರಡೂ ಮನೆಗಳನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಎಚ್.ಎಸ್ ಶೆಟ್ಟಿಯವರು ಸಂಸ್ಥೆಯ ಸಮಾಜಮುಖಿ ಕಾರ್ಯ ಹಾಗೂ ಪಾರದರ್ಶಕ ವ್ಯವಹಾರದಿಂದ ನಾನು ಆಕರ್ಷಿತನಾಗಿದ್ದೇನೆ.ನಿಮ್ಮ ಕಾರ್ಯಕ್ರಮಗಳಿಗೆ ನಮ್ಮ ಸೊಸೈಟಿ ಮುಂದೆಯೂ ನೆರವು ನೀಡುತ್ತದೆ ಎಂದು ಭರವಸೆ ನೀಡಿದರು. ಸೊಸೈಟಿಯ
ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 35 ಮತ್ತು 36ನೇ ಮನೆ ಹಸ್ತಾಂತರ – 2022 Read More »
ಉಡುಪಿಯ ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ನವಂಬರ್ 13ರಂದು ಜರಗಿತು. ದಿನಪೂರ್ತಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಎಂ. ಪ್ರಭಾಕರ ಜೋಶಿಯವರು ಕಲಾರಂಗ ತನ್ನ ಕಾರ್ಯಚಟುವಟಿಕೆಗಳಿಂದ ಸಾಂಸ್ಕೃತಿಕ ಸಾಮಾಜಿಕ ಸಂಘಟನೆಗೆ ಮಾದರಿಯಾಗಿದೆ ಎಂದರು. ಡಾ. ಪದ್ಮನಾಭ ಕಾಮತ್ ರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದಲ್ಲಿ ಪ್ರೊ. ಎಂ. ಎಲ್. ಸಾಮಗ, ಶ್ರೀ ಕೃಷ್ಣಪ್ರಸಾದ್ ಅಡ್ಯಂತಾಯ, ಶ್ರೀ ಕದ್ರಿ ನವನೀತ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಪೂರ್ವಾಹ್ನ ಮೊದಲ ಗೋಷ್ಠಿಯಾಗಿ ‘ಇತಿಹಾಸಕ್ಕೆ ಸಂದುಹೋದ ತೆಂಕುತಿಟ್ಟಿನ
‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭ – 2022 Read More »
ಹೆಗ್ಗುಂಜೆ ಗ್ರಾಮದ ಯಕ್ಷಗಾನ ಮದ್ದಲೆವಾದಕ ನೀರ್ಜೆಡ್ಡು ವಿಜಯ ನಾಯ್ಕ್ (ಮಡಾಮಕ್ಕಿ ಮೇಳ) ಇವರಿಗೆ ಮಣಿಪಾಲದ ಡಾ. ಸತೀಶ್ ಕಾಮತ್ ಮತ್ತು ಶೀಲಾ ಕಾಮತ್ ಕುಟುಂಬಿಕರು, ಉಡುಪಿಯ ಗುರುಸ್ಮೃತಿ ಟ್ರಸ್ಟ್ ಹಾಗೂ ಗೋಕುಲ್ ಕಾಮತ್ ಇವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ‘ಕುಸುಮ್ ವಿಹಾರ್’ ಇದರ ಉದ್ಘಾಟನೆಯನ್ನು ಕಾಸರಗೋಡಿನ ಶ್ರೀ ಎನ್. ರಾಮದಾಸ್ ಕಾಮತ್ (ನಿವೃತ್ತ ಮುಖ್ಯಶಿಕ್ಷಕರು) ಇವರು ದಿನಾಂಕ 22-10-2022ರಂದು ನೆರವೇರಿಸಿದರು. ಗುರುಸ್ಮೃತಿ ಟ್ರಸ್ಟ್ ನ ವರಿಷ್ಠರಾದ ಡಾ. ದೀಪಕ್ ಪ್ರಭು ಮಾತನಾಡಿ ತಮ್ಮ ಮಾವ, ಶತಾಯುಷಿ
ಯಕ್ಷಗಾನ ಕಲಾರಂಗದ ವತಿಯಿಂದ 34ನೇ ಮನೆ ಹಸ್ತಾಂತರ – 2022 Read More »
ಬಂಡೆಯನ್ನು ಶಿಖರದ ಎತ್ತರಕ್ಕೆ ಕೊಂಡೊಯ್ಯಲು ಸಾಕಷ್ಟು ಪ್ರಯತ್ನಪಡಬೇಕು. ಆದರೆ ಅಲ್ಲಿಂದ ಉರುಳಿಸಿದರೆ ಯಾವುದೇ ಪ್ರಯತ್ನವಿಲ್ಲದೆ ಕೆಳಗೆ ಬೀಳುತ್ತದೆ. ನಮ್ಮ ವ್ಯಕ್ತಿತ್ವವೂ ಹಾಗೆ, ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳಲು ನಿರಂತರ ಸಾಧನೆ ಬೇಕು. ವ್ಯಕ್ತಿತ್ವ ಪತನಗೊಳ್ಳಲು ಒಂದೇ ಒಂದು ತಪ್ಪು ಸಾಕಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಚ್ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು ಎಂದು ಅಕ್ಟೋಬರ್ 09ರಂದು ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ಜರಗಿದ 18ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಶ್ರೀ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು
ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣಾ ಸಮಾರಂಭ – 2022 Read More »
ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ವಿದ್ಯಾರ್ಥಿನಿ ರಶ್ಮಿತಾ ಇವಳಿಗೆ ಜನ್ಸಾಲೆಯಲ್ಲಿ ಡಾ. ರಾಜಾ ವಿಜಯಕುಮಾರ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಮನೆಯ ಪ್ರವೇಶೋತ್ಸವ ದಿನಾಂಕ 01-08-2022 ರಂದು ಜರಗಿತು. ಡಾ. ರಾಜಾ ವಿಜಯಕುಮಾರ್ ಮತ್ತು ಶ್ರೀಮತಿ ರಜನಿ ಭಾರತೀ ಮಂಗಲಂ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಗತರಾಗಿ ಭಾಗವಹಿಸಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ಶ್ರೀ ಎಚ್. ಎಸ್. ಶೆಟ್ಟಿ ಇವರು ಯಕ್ಷಗಾನ ಕಲಾರಂಗ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸರಕಾರೇತರ ಸಂಘಟನೆಯೆಂದು ಶ್ಲಾಘಿಸಿದರು. ಡಾ. ವಿಜಯಕುಮಾರ್ ಅವರು ವೈದ್ಯಕೀಯ
ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 33ನೇ ಮನೆ ಹಸ್ತಾಂತರ – 2022 Read More »