Yakshagana Kalaranga

Past Events

ವಿದ್ಯಾಪೋಷಕ್ ಒಂದು ದಿನದ ಶೈಕ್ಷಣಿಕ ಶಿಬಿರ.

ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಷಕ್ ನ ದ್ವಿತೀಯ ಪಿ.ಯು.ಸಿ.ಮುಗಿಸಿದ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಶಿಬಿರ ಇಂದು(23-5-2023) ಸಾಲಿಗ್ರಾಮ ದೇವಳದ ಜ್ಞಾನ ಮಂದಿರದಲ್ಲಿ ಜರಗಿತು. ನಿರ್ದೇಶಕರಾಗಿ ಹುಬ್ಬಳ್ಳಿಯ ಮೈ ಲೈಫ್ ಮುಖ್ಯಸ್ಥರಾದ ಪ್ರವೀಣ್ ಗುಡಿಯವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈಗಾಗಲೇ ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಡಾ.ಶ್ರುತಕೀರ್ತಿಯವರು ಮುಂದಿನ ನಡೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಸಿ.ಎ. ಮಾಡಲು ಸಂಕಲ್ಪಿಸಿದ ವಿದ್ಯಾರ್ಥಿಗಳಿಗೆ ಸಿಎ. ಪ್ರದೀಪ ಜೋಗಿಯವರು ಸೂಕ್ತ ಸಲಹೆ ನೀಡಿದರು.ಶ್ರೀ ಗುರುನರಸಿಂಹ ದೇವಳದ ಆಡಳಿತ […]

ವಿದ್ಯಾಪೋಷಕ್ ಒಂದು ದಿನದ ಶೈಕ್ಷಣಿಕ ಶಿಬಿರ. Read More »

ಅರ್ಥಧಾರಿಗಳು ಪುರಾಣದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ವಾಹಕರು – ಡಾ. ಕಬಿಯಾಡಿ ಹರಿರಾಮ ಆಚಾರ್ಯ

ಯಕ್ಷಗಾನ ಕಲಾರಂಗ ಕಳೆದ 23 ವರ್ಷಗಳಿಂದ ತಾಳಮದ್ದಲೆ ಸಪ್ತಾಹ ಆಚರಿಸುತ್ತಾ ಬಂದಿದ್ದು, ಈ ಬಾರಿಯ ತಾಳಮದ್ದಲೆ ಸಪ್ತಾಹವು ಮೇ 21, 2023ರಂದು ಸಂಜೆ 5.00 ಗಂಟೆಗೆ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಉದ್ಘಾಟನೆಗೊಂಡಿತು. ಖ್ಯಾತ ವೈದ್ಯ ಡಾ. ಕಬ್ಯಾಡಿ ಹರಿರಾಮ ಆಚಾರ್ಯರು ಸಪ್ತಾಹವನ್ನು ದೀಪ ಬೆಳಗಿಸಿ ಉದ್ಘಾಟಿಸಿ ತಾಳಮದ್ದಲೆಯ ಕುರಿತು ಮಾತನಾಡುತ್ತಾ ಮೇಲಿನ ಮಾತನ್ನು ಉಲ್ಲೇಖಿಸಿದರು. ಉಡುಪಿಯ ಮಾನ್ಯ ಶಾಸಕರಾದ ಯಶ್‍ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ

ಅರ್ಥಧಾರಿಗಳು ಪುರಾಣದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ವಾಹಕರು – ಡಾ. ಕಬಿಯಾಡಿ ಹರಿರಾಮ ಆಚಾರ್ಯ Read More »

21-05-2023ರಂದುಪರ್ಕಳದಲ್ಲಿ ತಾಳಮದ್ದಲೆ ಸಪ್ತಾಹ ಉದ್ಘಾಟನೆ.

ಯಕ್ಷಗಾನ ಕಲಾರಂಗ ಪ್ರತಿ ವರ್ಷ ತಾಳಮದ್ದಲೆ ಸಪ್ತಾಹ ಆಚರಿಸುತ್ತಾ ಬಂದಿದ್ದು, ಈ ಬಾರಿಯ ಸಪ್ತಾಹವು ಮೇ 21ರಿಂದ 27ರ ವರೆಗೆ ವಿವಿಧ ಸ್ಥಳಗಳಲ್ಲಿ ನಡೆಯಲಿದೆ. 21-05-2023 ಭಾನುವಾರ ಸಂಜೆ 5.00 ಗಂಟೆಗೆ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಡಾ. ಕಬ್ಯಾಡಿ ಹರಿರಾಮ ಆಚಾರ್ಯರು ಸಪ್ತಾಹವನ್ನು ಉದ್ಘಾಟಿಸಲಿರುವರು. ಉಡುಪಿಯ ಮಾನ್ಯ ಶಾಸಕರಾದ ಯಶ್‍ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಲಿರುವ ಸಮಾರಂಭದಲ್ಲಿ ಬಿ. ರಾಜ ಗೋಪಾಲ್ ಆಚಾರ್ಯ, ದಿಲೀಪ್‍ರಾಜ್ ಹೆಗ್ಡೆ ಹಾಗೂ ಗಣೇಶ ಪಾಟೀಲ್ ಪಾಲ್ಗೊಳ್ಳುವರು. ಸಮಾರಂಭದ ಬಳಿಕ ಸಂಜೆ 5.30ರಿಂದ 8.30ರ

21-05-2023ರಂದುಪರ್ಕಳದಲ್ಲಿ ತಾಳಮದ್ದಲೆ ಸಪ್ತಾಹ ಉದ್ಘಾಟನೆ. Read More »

ಯಕ್ಷಶಿಕ್ಷಣ ಟ್ರಸ್ಟಿನ ವತಿಯಿಂದ 50,000 ರೂಪಾಯಿಯ ಉಡುಗೊರೆ

ಯಕ್ಷಶಿಕ್ಷಣ ಟ್ರಸ್ಟ್ ನ ಗುರುಗಳೂ, ಮಂದಾರ್ತಿ ಮೇಳದ ಹಿಮ್ಮೇಳ ಕಲಾವಿದರೂ ಆದ ಮಹೇಶ್ ಕುಮಾರ್ ಇವರ ಗೃಹಪ್ರವೇಶ 06-05-2023ರಂದು ಮಂದಾರ್ತಿಯಲ್ಲಿ ಜರುಗಿದ್ದು, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ನೂತನ ಮನೆಗೆ ಭೇಟಿ ನೀಡಿ, ಯಕ್ಷಶಿಕ್ಷಣ ಟ್ರಸ್ಟಿನ ವತಿಯಿಂದ ಉಡುಗೊರೆಯಾಗಿ 50,000 ರೂಪಾಯಿಯನ್ನು ನೀಡಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಯಕ್ಷಶಿಕ್ಷಣ ಟ್ರಸ್ಟ್‍ನ ಕಾರ್ಯದರ್ಶಿ ಮುರಲಿ ಕಡೆಕಾರ್, ಸದಸ್ಯರಾದ ಎಸ್. ವಿ. ಭಟ್, ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಹಾಗೂ ಗಣೇಶ್ ಬ್ರಹ್ಮಾವರ

ಯಕ್ಷಶಿಕ್ಷಣ ಟ್ರಸ್ಟಿನ ವತಿಯಿಂದ 50,000 ರೂಪಾಯಿಯ ಉಡುಗೊರೆ Read More »

ಕಲಾವಿದರ ಕುಟುಂಬಕ್ಕೆ ಯಕ್ಷಗಾನ ಕಲಾರಂಗದಿಂದ ಸಾಂತ್ವನ ನಿಧಿ.

ಡಿಸೆಂಬರ್ 22, 2022ರಂದು ಕಟೀಲಿನ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷದ ಶಿಶುಪಾಲನ ವೇಷದಲ್ಲಿರುವಾಗಲೇ ಇಹಲೋಕ ಯಾತ್ರೆ ಮುಗಿಸಿದ ಕಲಾವಿದ, ಪ್ರಸಂಗಕರ್ತ ಗುರುವಪ್ಪ ಬಾಯಾರು ಹಾಗೂ ಇತ್ತೀಚೆಗೆ ಅಗಲಿದ ಸಸಿಹಿತ್ಲು ಮೇಳದ ಯುವ ಕಲಾವಿದ ಜಗದೀಶ ನಲ್ಕ ಇವರ ಕುಟುಂಬಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದಿಂದ ಸಾಂತ್ವನ ನಿಧಿಯಾಗಿ ಅನುಕ್ರಮವಾಗಿ ರೂ. 50,000 ಮತ್ತು ರೂ. 75,000 ನೀಡಲಾಯಿತು. ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕರ್ಣಾಟಕ ಬ್ಯಾಂಕಿನ ನಿವೃತ್ತ ಆಡಳಿತಾಧಿಕಾರಿ ಮಹಾಬಲೇಶ್ವರ ಎಂ. ಎಸ್. ಮತ್ತು ಮಾಹೆಯ

ಕಲಾವಿದರ ಕುಟುಂಬಕ್ಕೆ ಯಕ್ಷಗಾನ ಕಲಾರಂಗದಿಂದ ಸಾಂತ್ವನ ನಿಧಿ. Read More »

ಮಹಾಬಲೇಶ್ವರ ಎಂ. ಎಸ್. ಅವರಿಗೆ ಅಭಿನಂದನೆ.

‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಹಾಗೆಯೇ ಕರ್ಣಾಟಕ ಬ್ಯಾಂಕ್ ಕರಾವಳಿ ಭಾಗದ ನಮಗೆ ಅತ್ಯಂತ ಹೆಮ್ಮೆಯ ವಿತ್ತೀಯ ಸಂಸ್ಥೆಯಾಗಿದೆ. ಮಹಾಬಲೇಶ್ವರ ಎಂ. ಎಸ್. ಕರ್ಣಾಟಕ ಬ್ಯಾಂಕ್‍ಗೆ ದೊಡ್ಡ ಶಕ್ತಿಯಾಗಿದ್ದರು. ಬ್ಯಾಂಕಿನಿಂದ ನಿವೃತ್ತರಾದ ಮೇಲೆ ಅವರನ್ನು ಅಭಿನಂದಿಸುತ್ತಿರುವುದು ಅವರು ಬ್ಯಾಂಕಿನ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗೆ ನಿದರ್ಶನ. ಕರ್ಣಾಟಕ ಬ್ಯಾಂಕ್ ಸಮಾಜಸ್ನೇಹಿ, ಗ್ರಾಹಕಸ್ನೇಹಿಯಾಗಿ ವ್ಯವಹರಿಸುತ್ತಾ ಬಂದಿದೆ ಎಂದು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಯಕ್ಷಗಾನ ಕಲಾರಂಗವು 25-04-2023ರಂದು ಉಡುಪಿಯ ಪೇಜಾವರ ಮಠದ ರಾಮವಿಠಲ ಸಭಾಭವನದಲ್ಲಿ ಆಯೋಜಿಸಿದ್ದ

ಮಹಾಬಲೇಶ್ವರ ಎಂ. ಎಸ್. ಅವರಿಗೆ ಅಭಿನಂದನೆ. Read More »

ಎಂ. ಎಸ್. ಮಹಾಬಲೇಶ್ವರ ಅವರಿಗೆ ಅಭಿನಂದನಾ ಕಾರ್ಯಕ್ರಮ.

ಇತ್ತೀಚೆಗೆ ನಿವೃತ್ತರಾದ ಕರ್ನಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕರಾದ ಎಂ. ಎಸ್. ಮಹಾಬಲೇಶ್ವರ ಇವರಿಗೆ ಯಕ್ಷಗಾನ ಕಲಾರಂಗದ ವತಿಯಿಂದ ಇಂದು (25-04-2023) ಸಂಜೆ 6.00 ಗಂಟೆಗೆ ಪೇಜಾವರ ಮಠದ ಶ್ರೀ ರಾಮವಿಠಲ ಸಭಾಭವನದಲ್ಲಿ ಅಭಿನಂದನಾ ಸಮಾರಂಭ ಜರಗಲಿದೆ. ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವದಿಸಲಿದ್ದಾರೆ. ಡಾ. ಎಚ್. ಎಸ್ ಬಲ್ಲಾಳರ ಅಧ್ಯಕ್ಷತೆಯಲ್ಲಿ ಡಾ. ಜಿ. ಶಂಕರ್ ಶುಭಾಶಂಸನೆಗೈಯಲಿದ್ದಾರೆ. ಅಭ್ಯಾಗತರಾಗಿ ಹರಿಯಪ್ಪ ಕೋಟ್ಯಾನ್, ಬಿ. ರಾಜಗೋಪಾಲ್ ಹಾಗೂ ಅನ್ನಪೂರ್ಣಾ ಮಹಾಬಲೇಶ್ವರ ಎಂ. ಎಸ್. ಉಪಸ್ಥಿತರಿರುವರೆಂದು ಸಂಸ್ಥೆಯ ಅಧ್ಯಕ್ಷ

ಎಂ. ಎಸ್. ಮಹಾಬಲೇಶ್ವರ ಅವರಿಗೆ ಅಭಿನಂದನಾ ಕಾರ್ಯಕ್ರಮ. Read More »

ಶ್ರೀ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರಿಗೆ ಯಕ್ಷಗಾನ ಕಲಾರಂಗ ವತಿಯಿಂದ ಫಲ-ಕಾಣಿಕೆ ಸಮರ್ಪಣೆ.

ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪೀಠಾರೋಹಣದ “ವಿಶ್ವ ಸುವರ್ಣೋತ್ಸವ”ವನ್ನು ರಾಯಚೂರಿನ ಭಕ್ತರು ಒಂದು ವಾರ ಪರ್ಯಂತ ಸಾವಿರಾರು ಮಂದಿಯ ಸಮಕ್ಷ ಶ್ರದ್ಧಾ ಭಕ್ತಿಯಿಂದ ಏರ್ಪಡಿಸಿದರು. 19-4-2023ರಂದು ನಡೆದ ಮಂಗಲ ಮಹೋತ್ಸವ ಸಮಾರಂಭದಲ್ಲಿ ಯಕ್ಷಗಾನ ಕಲಾರಂಗದ ಪ್ರತಿನಿಧಿಗಳಾಗಿ ಮುರಲಿ ಕಡೆಕಾರ್, ನಾರಾಯಣ ಎಂ.ಹೆಗಡೆ, ಎಚ್.ಎನ್.ಶ್ರಂಗೇಶ್ವರ ಭಾಗವಹಿಸಿ ಶ್ರೀಗಳಿಗೆ ಭಕ್ತಿಪೂರ್ವಕ ಫಲ ಪುಷ್ಪ ಕಾಣಿಕೆ ಸಮರ್ಪಿಸಿ ಅನುಗ್ರಹ ಪಡೆದರು. ವಿಶ್ವಪ್ರಿಯತೀರ್ಥ ಶ್ರೀಪಾದರು ಸಂಸ್ಥೆಯನ್ನು ವಿಶೇಷವಾಗಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅವರ ಎರಡನೇ ಪರ್ಯಾಯದಲ್ಲಿ ಅವರೇ ಉದ್ಘಾಟಿಸಿದ ವಿದ್ಯಾಪೋಷಕನ್ನು ಪ್ರತೀವರ್ಷ

ಶ್ರೀ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರಿಗೆ ಯಕ್ಷಗಾನ ಕಲಾರಂಗ ವತಿಯಿಂದ ಫಲ-ಕಾಣಿಕೆ ಸಮರ್ಪಣೆ. Read More »

We're currently hard at work gathering information and crafting content to bring you the best experience. Stay tuned for exciting updates!