Yakshagana Kalaranga

Past Events

ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಮನೆ ಹಸ್ತಾಂತರ

ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಬೀಜಾಡಿಯ ಸಾನಿಕಾಳ (ಶ್ರೀಮತಿ ಶ್ಯಾಮಲಾ ಮತ್ತು ಶ್ರೀ ನಾಗೇಶ್‍ರವರ ಪುತ್ರಿ) ತೀರಾ ದುಸ್ಥಿತಿಯಲ್ಲಿದ್ದ ಮನೆಯನ್ನು ಪುನರ್‍ನವೀಕರಿಸಿ ಜೂನ್ 08, 2023ರಂದು ಹಸ್ತಾಂತರಿಸಲಾಯಿತು. ಸಂಸ್ಥೆಯ ಸದಸ್ಯರೂ, ಮೆಟ್‍ರೈಸ್ ರೂಫಿಂಗ್ ಸ್ಟ್ರಕ್ಚರ್ ಪುತ್ತೂರು ಇದರ ಮಾಲಕರಾದ ಶ್ರೀ ಪ್ರಸಾದ್ ರಾವ್, ಪುತ್ತೂರು ಇವರು ಶ್ರೀ ಆನಂದ್ ಸಿ. ಕುಂದರ್ ಇವರ 75ರ ಸಂಭ್ರಮದ ಶುಭಾವಸರದಲ್ಲಿ ಕೃತಜ್ಞತಾಪೂರ್ವಕವಾಗಿ ರೂಪಿಸಿದ ಮನೆಯನ್ನು ಕೋಟ ಮಣೂರಿನ ಗೀತಾನಂದ ಫೌಂಡೇಶನ್‍ನ ಅಧ್ಯಕ್ಷರು, ದಾನಿಗಳೂ ಆದ ಶ್ರೀ …

ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಮನೆ ಹಸ್ತಾಂತರ Read More »

ವಿದ್ಯಾಪೋಷಕ್‍ನ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಬಿರ.

ಇಂದು (04.06.2023) ಅಂಬಲಪಾಡಿ ದೇವಳದ ಶ್ರೀ ಭವಾನಿ ಮಂಟಪದಲ್ಲಿ ವಿದ್ಯಾಪೋಷಕ್‍ನ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಸಮಾಲೋಚನಾ ಶಿಬಿರ ಜರಗಿತು. ದೇವಳದ ಧರ್ಮದರ್ಶಿಗಳಾದ ಡಾ. ನಿ. ಬೀ.ವಿಜಯ ಬಲ್ಲಾಳರು ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ, ಪೂರ್ಣಪ್ರಜ್ಞಾ ಕಾಲೇಜಿನ ಉಪನ್ಯಾಸಕಿಯೂ ಆದ ಸುಪರ್ಣಾ ವಿದ್ಯಾಪೋಷಕ್ ಸಹಕಾರದಿಂದ ತಾನು ಮಾಡಿದ ಸಾಧನೆಯನ್ನು ಹಂಚಿಕೊಂಡಳು. ಸಿಎ ಮಾಡುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ ಕವನಾ ಸಿಎ ಕಲಿಕೆಯ ಕುರಿತು ತನ್ನ ಅನುಭವವನ್ನು ತಿಳಿಸಿದಳು. ಈ ಸಂದರ್ಭದಲ್ಲಿ ಉದ್ಯಮಿ ರವಿ …

ವಿದ್ಯಾಪೋಷಕ್‍ನ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಬಿರ. Read More »

ಕಲಾವಿದರ ಸಮಾವೇಶ -2023

ಉಡುಪಿಯ ಯಕ್ಷಗಾನ ಕಲಾರಂಗ ಕಳೆದ 23ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಯಕ್ಷನಿಧಿ ಕಲಾವಿದರ 2023ರ ಸಮಾವೇಶವು ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಜೂನ್, 1 ರಂದು ಸಂಪನ್ನಗೊಂಡಿತು. ಸಮಾವೇಶವನ್ನು ಖ್ಯಾತ ಕಥಕ್ ಕಲಾವಿದೆ ವಿದುಷಿ ಮಧು ನಟರಾಜ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅದಮಾರು ಎಜುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಡಾ. ಎ. ಪಿ. ಭಟ್, ಕಲಾವಿದರಾದ ಆರ್ಗೋಡು ಮೋಹನದಾಸ್ ಶೆಣೈ, ಕೊಂಡದಕುಳಿ ರಾಮಚಂದ್ರ ಹೆಗಡೆ, ಸರಪಾಡಿ ಅಶೋಕ್ ಶೆಟ್ಟಿ, ಕೆ. ಸದಾಶಿವರ್ ರಾವ್ ಉಪಸ್ಥಿತರಿದ್ದರು. ಉದ್ಘಾಟನೆಯ ಬಳಿಕ ವಿದುಷಿ ಮಧು ನಟರಾಜ …

ಕಲಾವಿದರ ಸಮಾವೇಶ -2023 Read More »

ವೃತ್ತಿನಿರತ ಯಕ್ಷಗಾನ ಕಲಾವಿದರ 25ನೇ ವರ್ಷದ ಸಮಾವೇಶ.

ಯಕ್ಷಗಾನ ಕಲಾರಂಗ (ರಿ.) ಉಡುಪಿ, ವೃತ್ತಿ ಕಲಾವಿದರ ಕ್ಷೇಮ ಚಿಂತನೆಗೆ ರೂಪಿಸಿದ ಅಂಗಸಂಸ್ಥೆ ಯಕ್ಷನಿಧಿಯ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಪ್ರತೀವರ್ಷ ಕಲಾವಿದರ ಸಮಾವೇಶವನ್ನು ನಡೆಸಿಕೊಂಡು ಬಂದಿದೆ. ಯಕ್ಷನಿಧಿಯ 25ನೇ ವರ್ಷದ ಸಮಾವೇಶ ಜೂನ್ 1, 2023 ಗುರುವಾರ ದಿನಪೂರ್ತಿ ಕಾರ್ಯಕ್ರಮವಾಗಿ ಉಡುಪಿ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಜರಗಲಿದೆ. ಪೂರ್ವಾಹ್ನ 10.00 ಘಂಟೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆಯವರ ಆಧ್ಯಕ್ಷತೆಯಲ್ಲಿ ಖ್ಯಾತ ನೃತ್ಯ ಕಲಾವಿದೆ ವಿದುಷಿ ಮಧು ನಟರಾಜ್ ಸಮಾವೇಶವನ್ನು ಉದ್ಘಾಟಿಸಲಿರುವರು. …

ವೃತ್ತಿನಿರತ ಯಕ್ಷಗಾನ ಕಲಾವಿದರ 25ನೇ ವರ್ಷದ ಸಮಾವೇಶ. Read More »

ಯಕ್ಷಗಾನ ಕಲಾರಂಗ ತಾಳಮದ್ದಲೆ ಸಪ್ತಾಹ ಸಮಾರೋಪ

ಯಕ್ಷಗಾನ ಕಲಾರಂಗ ಆಯೋಜಿಸಿದ ತಾಳಮದ್ದಲೆ ಸಪ್ತಾಹದ ಸಮಾರೋಪ 27-05-2023ರಂದು ಶಿರ್ವದಲ್ಲಿ ಜರಗಿತು.ಈ ಸಂದರ್ಭದಲ್ಲಿ ಶ್ರೀ ಶ್ರೀಕರ ಭಟ್ ಇವರಿಗೆ ಮಟ್ಟಿ ಮುರಲೀಧರ ರಾವ್ ಪ್ರಶಸ್ತಿಯನ್ನು ಹಾಗೂ ಪಂಡಿತ ಪೆರ್ಲ ಕೃಷ್ಣ ಭಟ್ ಪ್ರಶಸ್ತಿಯನ್ನು ಡಾ.ಪಾದೇಕಲ್ಲು ವಿಷ್ಣು ಭಟ್ ರಿಗೆ ಪ್ರದಾನ ಮಾಡಲಾಯಿತು.ಪ್ರಶಸ್ತಿಯು ಇಪ್ಪತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ.ಇದೇ ಸಂದರ್ಭದಲ್ಲಿ ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.ಕಾಪು ವಿಧಾನಸಭಾ ಕ್ಷೇತ್ರದ ಕೆಲವು ಶಾಲೆಗಳಲ್ಲಾದರೂ ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ …

ಯಕ್ಷಗಾನ ಕಲಾರಂಗ ತಾಳಮದ್ದಲೆ ಸಪ್ತಾಹ ಸಮಾರೋಪ Read More »

ಮಲ್ಪೆ ಬಾಲಕರ ಶ್ರೀರಾಮ ಭಜನಾ ಮಂದಿರದಲ್ಲಿ ತಾಳಮದ್ದಲೆಗೆ ಚಾಲನೆ.

ತಾಳಮದ್ದಲೆ ಸಪ್ತಾಹದ ಅಂಗವಾಗಿ 2 ದಿನ ಮಲ್ಪೆಯ ಬಾಲಕರ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಲಿರುವ ತಾಳಮದ್ದಲೆಗಳನ್ನು ಉದ್ಯಮಿ ಸದಾನಂದ ಸಾಲಿಯಾನ್ ಅವರು 25-05-2023ರಂದು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಾಲಕರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಲಕ್ಷ್ಮಣ ವಿ. ಕರ್ಕೇರಾ ಇವರಿಗೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀರಾಮ ಭಜನಾ ಮಂದಿರದ ನಿಕಟಪೂರ್ವ ಅಧ್ಯಕ್ಷ ಕರುಣಾಕರ ಮಲ್ಪೆ ಹಾಗೂ ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ. ಭಟ್, ಜತೆ ಕಾರ್ಯದರ್ಶಿಗಳಾದ …

ಮಲ್ಪೆ ಬಾಲಕರ ಶ್ರೀರಾಮ ಭಜನಾ ಮಂದಿರದಲ್ಲಿ ತಾಳಮದ್ದಲೆಗೆ ಚಾಲನೆ. Read More »

ಬನ್ನಂಜೆ ಶಿವಗಿರಿ ಸಭಾಭವನದಲ್ಲಿ ತಾಳಮದ್ದಲೆಗೆ ಚಾಲನೆ.

ತಾಳಮದ್ದಲೆ ಸಪ್ತಾಹದ ಅಂಗವಾಗಿ 3ನೇ ದಿನ ಬನ್ನಂಜೆ ಶ್ರೀ ಶಿವಗಿರಿ ಸಭಾಭವನದಲ್ಲಿ ಹರ್ಷ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಸೂರ್ಯಪ್ರಕಾಶ್ ಅವರು 23-05-2023ರಂದು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬನ್ನಂಜೆ ಬಿಲ್ಲವರ ಸೇವಾ ಸಂಘದ ಕಾರ್ಯದರ್ಶಿ ಆನಂದ ಪೂಜಾರಿ ಹಾಗೂ ಕಲಾರಂಗದ ಉಪಾಧ್ಯಕರುಗಳಾದ ಎಸ್. ವಿ. ಭಟ್, ಕಿಶನ್ ಹೆಗ್ಡೆ, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ, ಕಾರ್ಯದರ್ಶಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು. ಗಣೇಶ್ ಬ್ರಹ್ಮಾರ ಕಾರ್ಯಕ್ರಮ ನಿರೂಪಿಸಿದರು. ನಂತರ ತಾಳಮದ್ದಲೆ …

ಬನ್ನಂಜೆ ಶಿವಗಿರಿ ಸಭಾಭವನದಲ್ಲಿ ತಾಳಮದ್ದಲೆಗೆ ಚಾಲನೆ. Read More »

We're currently hard at work gathering information and crafting content to bring you the best experience. Stay tuned for exciting updates!