ಪ್ರಶಸ್ತಿ ಪ್ರದಾನ ಸಮಾರಂಭ-2019 (17-11-2019)
ಸಮಾರಂಭದ ಕೆಲವು ತುಣುಕುಗಳು
ಸಮಾರಂಭದ ಕೆಲವು ತುಣುಕುಗಳು
Yakshagana Kalaranga Prashasti will be given to 17 artists on 17th November 2019.
ನಮ್ಮ ಸಂಸ್ಥೆ ಕಳೆದ 44 ವರ್ಷಗಳಿಂದ ಕಲೆ-ಕಲಾವಿದರಿಗಾಗಿ ಶ್ರಮಿಸುತ್ತಾ, ಮುಖ್ಯವಾಗಿ ಕಲಾವಿದರ ಏಳ್ಗೆಗಾಗಿ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಾ ಬಂದಿದೆ. ಇವುಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು. ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಸಾಧಕ ಕಲಾವಿದರಿಗೆ, ಕಲಾಸಂಸ್ಥೆಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 17, 2019 ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರುಗಲಿದ್ದು ಆ ದಿನ 17 ಮಂದಿ ಕಲಾವಿದರಿಗೆ ರೂ 20,000/- ನಗದು ಪುರಸ್ಕಾರದೊಂದಿಗೆ …
ಕಿಶೋರ ಯಕ್ಷ ಸಂಭ್ರಮ – 25 ನವೆಂಬರ್ ನಿಂದ 28 ಡಿಸೆಂಬರ್ ವರೆಗೆ.
ಯಕ್ಷಶಿಕ್ಷಣ ಟ್ರಸ್ಟ್ನ ಆರಂಭದಿOದಲೂ ಪ್ರತೀ ವರ್ಷ ಎರಡ ರಿಂದ ಮೂರು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ನೃತ್ಯಾಭ್ಯಾಸ ಕಲಿಸಿ, ನಿರ್ದೇಶನ ನೀಡುತ್ತಾ ಬಂದ ಯಕ್ಷಗಾನ ಕಾಲಾರಂಗದ ಶಿಬಿರದಲ್ಲಿ ಪಾಲುಗೊಂಡು ಯಕ್ಷಗಾನ ನೃತ್ಯಾಭ್ಯಾಸಗೈದ ಶ್ರೀ ಬಿ. ಕೇಶವರಾವ್ ಇವರಿಗೆ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಟ್ರಸ್ಟ್ ವತಿಯಿಂದ ಯಕ್ಷಶಿಕ್ಷಣ ಗುರುಗಳ ಸಮ್ಮುಖದಲ್ಲಿ ಶಾಲು ಹೊದಿಸಿ ಅಭಿನಂದಿಸಲಾಯಿತು
ಯಕ್ಷಗಾನ ಕಲಾರಂಗ ನವೆಂಬರ್ 2 ರಂದು ಉದ್ಯಾವರದಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿಗೆ ಸುಮಾರು 5ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಯ ಉದ್ಘಾಟನೆಯನ್ನು ಬೆಂಗಳೂರಿನ ಟೆಕ್ಸೆಲ್ ಅಟೋಮೋಶನ್ ಪ್ರೆ ಲಿ. ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಹರೀಶ್ ರಾಯಸ್‌ರವರು ನೆರವೇರಿಸಿದರು. ಆರಂಭದಲ್ಲಿ ಸ್ವಾಗತಿಸಿದ ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಇದು ಸಂಸ್ಥೆಯ 17ನೇ ಮನೆಯಾಗಿದ್ದು, ಹರೀಶ್ ರಾಯಸ್‌ರವರನ್ನು ಅಭಿನಂದಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾರ್ಯದರ್ಶಿ ಮುರಲಿ ಕಡೆಕಾರ್ ಹರೀಶ್ ರಾಯಸ್ ರವರು ಕಳೆದ ಐದು ವರ್ಷಗಳಿಂದ ವಿದ್ಯಾಪೋಷಕ್‌ಗೆ ದೊಡ್ಡ ಮೊತ್ತದ ಆರ್ಥಿಕ …