Yakshagana Kalaranga

Yogesh

ಯಕ್ಷಗಾನ ಕಲಾರಂಗ ಉಡುಪಿಯ ವಿದ್ಯಾಪೋಷಕ್‍ನ 24ನೇ ಮನೆ ಹಸ್ತಾಂತರ 20-03-2022

ಉಡುಪಿ : ಯಕ್ಷಗಾನ ಕಲಾರಂಗ ಉಡುಪಿಯ ವಿದ್ಯಾಪೋಷಕ್ ಫಲಾನುಭವಿ ಅಕ್ಷಯ್ ಕುಮಾರ್ ಮತ್ತು ಅವನ ತಂದೆ ಯಕ್ಷಗಾನ ಹಿಮ್ಮೇಳವಾದಕ ಹೆರಂಜಾಲು ಬಾಲಕೃಷ್ಣ ಗಾಣಿಗ ಇವರಿಗೆ ನಾಗೂರಿನಲ್ಲಿ ನಿರ್ಮಿಸಿಕೊಟ್ಟ ಮನೆ ‘ಸಾಯಿಮಯಿ’ಯ ಹಸ್ತಾಂತರ ಕಾರ್ಯಕ್ರಮ 20-03-2022 ರಂದು ಜರಗಿತು. ಪ್ರಾಯೋಜಕರಾದ ಮಂಗಳೂರಿನ ಖ್ಯಾತ ವೈದ್ಯ ಡಾ. ಜೆ.ಎನ್.ಭಟ್, ಇವರು ಜ್ಯೋತಿಬೆಳಗಿಸಿ ಉದ್ಘಾಟಿಸಿ, ಈ ಮನೆಯಲ್ಲಿ ನೆಮ್ಮದಿಯಿಂದ ಬದುಕಿ, ದೊಡ್ಡ ಸಾಧನೆಮಾಡಿ, ಉಳಿದವರಿಗೆ ಆಸರೆಯಾಗಬೇಕೆಂದು ಅಕ್ಷಯನಿಗೆ ಕಿವಿಮಾತು ಹೇಳಿದರು. ಮುಖ್ಯ ಭ್ಯಾಗತರಾಗಿ ಆಗಮಿಸಿದ ಸಂಸ್ಥೆಯ ದಾನಿ ಪಿ.ಗೋಕುಲನಾಥ ಪ್ರಭು ಮಾತನಾಡಿ …

ಯಕ್ಷಗಾನ ಕಲಾರಂಗ ಉಡುಪಿಯ ವಿದ್ಯಾಪೋಷಕ್‍ನ 24ನೇ ಮನೆ ಹಸ್ತಾಂತರ 20-03-2022 Read More »

Kolyuru Vaibhava 2021

ಹೊಸದಾಖಲೆ ನಿರ್ಮಿಸಿದ ಕೋಳ್ಯೂರು ವೈಭವ ಡಾ. ಕೋಳ್ಯೂರು ರಾಮಚಂದ್ರ ರಾವ್ ಯಕ್ಷಗಾನರಂಗ ಕಂಡ ಅಪೂರ್ವ ಕಲಾಪ್ರತಿಭೆ. ಯಕ್ಷಗಾನ ಆಕಾಶದಲ್ಲಿ ಬೆಳಗಿದ ಹೊಳಪಿನ ತಾರೆ. ಸುಮಾರು ಆರು ದಶಕ ಯಕ್ಷಸಾಮ್ರಾಜ್ಯ ಆಳಿದ ಸಾಮ್ರಾಜ್ಞಿ. ಯೋಗ, ಯೋಗ್ಯತೆ, ಆಯುಷ್ಯ, ಆರೋಗ್ಯ ಇವೆಲ್ಲ ಏಕತ್ರ ಸೇರಿಕೊಂಡಿರುವ ಅಪರೂಪದ ಕಲಾವಿದ. ಅವರ ನವತ್ಯಬ್ದ ಸಂಭ್ರಮವನ್ನು ಉಡುಪಿಯ ಯಕ್ಷಗಾನ ಕಲಾರಂಗ, ಅವರ ಮಕ್ಕಳ ಪೂರ್ಣ ಸಹಕಾರದೊಂದಿಗೆ ವಿಶಿಷ್ಟವಾಗಿ ಆಯೋಜಿಸಿತು. ಅಕ್ಟೋಬರ್ 14ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರು ನಿರಂತರ ಒಂದು ತಿಂಗಳು …

Kolyuru Vaibhava 2021 Read More »

Kolyuru Vaibhava Udgatane

‘ಕೋಳ್ಯೂರು ವೈಭವ’ ಉದ್ಘಾಟನೆ ಯಕ್ಷಗಾನದ ಶ್ರೇಷ್ಠ ಕಲಾಸಾಧಕರಾದ ಕೋಳ್ಯೂರಿಗೆ ತೊಂಭತ್ತು ತುಂಬಿದ ಶುಭಾವಸರದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಆಯೋಜಿಸಿದ್ದ ಕೋಳ್ಯೂರು ವೈಭವದ ಉದ್ಘಾಟನಾ ಸಮಾರಂಭ 14-10-2021 ರಂದು ಶ್ರೀಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಸಂಪನ್ನಗೊಂಡಿತು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಒಂದು ತಿಂಗಳ ಪಯರ್ಂತ ನಡೆಯಲಿರುವ ಕಾರ್ಯಕ್ರಮಗಳ ಮತ್ತು ಕೋಳ್ಯೂರರ ಕುರಿತು ಸಮಗ್ರ ಪರಿಚಯ ಒಳಗೊಂಡಿರುವ ‘ಕ್ವೀನ್ ಆಫ್ ಯಕ್ಷಗಾನ’ ಜಾಲತಾಣವನ್ನು ಉದ್ಘಾಟಿಸಿದರು. ನಾವು ಎಲ್ಲವನ್ನೂ ಸರಕಾರದಿಂದ ನಿರೀಕ್ಷಿಸುವುದು ಸರಿಯಲ್ಲ. ಕಲೆ, ಕಲಾವಿದರ ಕ್ಷೇಮ ಚಿಂತನೆಯು …

Kolyuru Vaibhava Udgatane Read More »

ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ ಯಕ್ಷಗಾನ ಕಲಾರಂಗವು ಪ್ರತಿ ವರ್ಷ ಯಕ್ಷಗಾನ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಗೆ ಹಾಗೂ ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಲೇಖಕ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಅನುಕ್ರಮವಾಗಿ ಹಿರಿಯ ಅರ್ಥಧಾರಿಗಳಾದ ವಾಸುದೇವ ರಾವ್ ಸುರತ್ಕಲ್ ಹಾಗೂ ಉಮಾಕಾಂತ ಭಟ್ಟ ಕೆರೇಕೈ ಇವರಿಗೆ ನೀಡಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟಂಬರ್ 26, …

ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ Read More »

ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 21ನೇ ಮನೆ ಹಸ್ತಾಂತರ

ಉಡುಪಿ : ಮಂದಾರ್ತಿ ಮೇಳದ ಕಲಾವಿದ ಚಂದ್ರ ನಾಯ್ಕ ಹಾಗೂ ಮಕ್ಕಳಾದ ಯಕ್ಷಗಾನ ಕಲಾರಂಗದ ಉದ್ಯೋಗಿ ಸಂಗೀತಾ ಮತ್ತು ದ್ವಿತಿಯ ಪಿ.ಯು.ಸಿ ಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ ಗೀತಾ ಇವರ ಕುಟುಂಬಕ್ಕೆ, ಮೈಸೂರು ಮರ್ಕಂಟೈಲ್ ಕಂಪನಿ ಲಿ. ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಚ್. ಎಸ್. ಶೆಟ್ಟಿ ಬೆಂಗಳೂರು ಇವರ ನೆರವಿನಿಂದ ಮಂದಾರ್ತಿಯಲ್ಲಿ ನಿರ್ಮಿಸಲಾದ ನೂತನ ಮನೆ ‘ರಾಜೀವ ಸದನ’ದ ಹಸ್ತಾಂತರ ಕಾರ್ಯಕ್ರಮ ದಿನಾಂಕ 30-09-2021 ರಂದು ಸಂಪನ್ನಗೊಂಡಿತು. ಜ್ಯೋತಿ ಬೆಳಗಿಸಿ, ಮನೆಯನ್ನು ಉದ್ಘಾಟಿಸಿ ಮಾತನಾಡಿದ …

ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 21ನೇ ಮನೆ ಹಸ್ತಾಂತರ Read More »

ಯಕ್ಷಗಾನ ಕಲಾರಂಗದಿಂದ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ

ಉಡುಪಿ : ಯಕ್ಷಗಾನ ಕಲಾರಂಗದ ಆಯ್ದ 574 ವಿದ್ಯಾಪೋಷಕ ವಿದ್ಯಾರ್ಥಿಗಳಿಗೆ ‘ಗೀವ್ ಇಂಡಿಯಾ’ ಸಂಸ್ಥೆಯು ಕೊಡಮಾಡಿದ ತಲಾ ರೂ. 1000/- ಮೌಲ್ಯದ ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮ ಸೆಪ್ಟಂಬರ್ 11 ಹಾಗೂ 12, 2021 ರಂದು ಸಂಪನ್ನಗೊಂಡಿತು. ಸೆಪ್ಟಂಬರ್ 11 ರಂದು ಸಂಸ್ಥೆಯ ಕಛೇರಿಯಲ್ಲಿ ವಿದ್ಯಾಪೋಷಕ್ ದಾನಿಗಳಾದ ಎ. ಮುರಾರಿ ರಾವ್ ಹಾಗೂ ಚಂದ್ರಕಲಾ ರಾವ್ ದಂಪತಿಗಳು ಸಾಂಕೇತಿಕವಾಗಿ ಕಿಟ್ ವಿತರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ.ಭಟ್, ಕೋಶಾಧಿಕಾರಿ ಪ್ರೊ. ಸದಾಶಿವ ರಾವ್, ಜತೆಕಾರ್ಯದರ್ಶಿಗಳಾದ …

ಯಕ್ಷಗಾನ ಕಲಾರಂಗದಿಂದ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ Read More »

ಯಕ್ಷಗಾನ ಕಲಾರಂಗಕ್ಕೆ ಶ್ರೀ ಆನಂದ ಸಾಗರ ಭೇಟಿ

ಉಡುಪಿ : ಕರ್ನಾಟಕ ಸರಕಾರದಿಂದ ಕ್ಯಾಬಿನೆಟ್ ಸ್ಥಾನವನ್ನು ಹೊಂದಿದ ಕರ್ನಾಟಕ ಸಾವಯವ ಕೃಷಿ ಮೆಷಿನ್‍ನ ಅಧ್ಯಕ್ಷರಾದ ಶ್ರೀ ಆನಂದ ಆ.ಶ್ರೀ, ಸಾಗರ ಇವರು ಇಂದು (16-09-2021) ಯಕ್ಷಗಾನ ಕಲಾರಂಗದ ಕಚೇರಿಗೆ ಭೇಟಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಯಕ್ಷಗಾನ ಕಲಾರಂಗದ ಕಾರ್ಯಚಟುವಟಿಕೆಗಳು, ಜತೆಗೆ ನಿಟ್ಟೂರು ಪ್ರೌಢಶಾಲೆ ‘ನಿಟ್ಟೂರು ಸ್ವರ್ಣ’ ಮತ್ತು ಕೇದಾರೋತ್ಥಾನ ಟ್ರಸ್ಟ್ ಹೇಗೆ ಹಡಿಲು ಭೂಮಿಯಲ್ಲಿ ಸಾವಯವ ಬೇಸಾಯವನ್ನು ಮಾಡುತ್ತಿದೆ ಎಂಬುದನ್ನು ವಿವರಿಸಿದರು. ನಿಟ್ಟೂರು ಪ್ರೌಢಶಾಲೆ ಹಾಗೂ ಕೆ. ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ …

ಯಕ್ಷಗಾನ ಕಲಾರಂಗಕ್ಕೆ ಶ್ರೀ ಆನಂದ ಸಾಗರ ಭೇಟಿ Read More »

ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿ ದೀಪಕ್ ಕಾಮತ್ ರಿಂದ ಆರ್ಥಿಕ ನೆರವು

ಬೆಂಗಳೂರಿನಲ್ಲಿ ಸಿಂಜಿನ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿ ದೀಪಕ್ ಕಾಮತ್,ಹಿರಿಯಡ್ಕ (course completed 2014) ಅಗಸ್ಟ್ 14ರಂದು ಕಚೇರಿಗೆ ಆಗಮಿಸಿ ರೂ 30000 ದೇಣಿಗೆಯನ್ನು ನೀಡಿದನು. ವಿದ್ಯಾಪೋಷಕ್ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುರಳಿ ಕಡೆಕಾರ್ ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ಸದಸ್ಯರಾದ ಎಚ್. ಎನ್. ವೆಂಕಟೇಶ್ ಉಪಸ್ಥಿತರಿದ್ದರು. ಈತ ಪ್ರತಿವರ್ಷ ಸಂಸ್ಥೆ ಗೆ ದೇಣಿಗೆ ನೀಡುತ್ತಾ ಬಂದಿರುವುದು ಕೃತಜ್ಞತಾಭಾವದ ದ್ಯೋತಕವಾಗಿದೆ.

We're currently hard at work gathering information and crafting content to bring you the best experience. Stay tuned for exciting updates!