ವಿದ್ಯಾಪೋಷಕ್ ಸನಿವಾಸ ಶಿಬಿರ ಉದ್ಘಾಟನೆ.
ಯಕ್ಷಗಾನ ಕಲಾರಂಗದ ಪ್ರಥಮ ಪಿ.ಯು.ಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳ ಐದು ದಿನಗಳ ಸನಿವಾಸ ಶಿಬಿರ ಮೇ 8, 2024ರಂದು ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‍ಮೆಂಟ್, ಟ್ರೈನಿಂಗ್ & ರಿಸರ್ಚ್ ಸೆಂಟರ್‍ನಲ್ಲಿ ಆರಂಭಗೊಂಡಿತು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳರು ಜ್ಯೋತಿ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ, ಕಳೆದ 12 ವರ್ಷಗಳಿಂದ ಅಂಬಲಪಾಡಿ ದೇವಳದಲ್ಲಿ ನಡೆಸುತ್ತಾ ಬಂದ ಅತ್ಯಂತ ಉಪಯುಕ್ತವಾದ ಶೈಕ್ಷಣಿಕ ಶಿಬಿರವು ಈ ಬಾರಿ ಸಂಸ್ಥೆಯ ಸ್ವಂತ ಕಟ್ಟಡದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸಾರ್ವಜನಿಕರ …