ಯಕ್ಷಗಾನ ಕಲಾರಂಗದ ವತಿಯಿಂದ 34ನೇ ಮನೆ ಹಸ್ತಾಂತರ – 2022
ಹೆಗ್ಗುಂಜೆ ಗ್ರಾಮದ ಯಕ್ಷಗಾನ ಮದ್ದಲೆವಾದಕ ನೀರ್ಜೆಡ್ಡು ವಿಜಯ ನಾಯ್ಕ್ (ಮಡಾಮಕ್ಕಿ ಮೇಳ) ಇವರಿಗೆ ಮಣಿಪಾಲದ ಡಾ. ಸತೀಶ್ ಕಾಮತ್ ಮತ್ತು ಶೀಲಾ ಕಾಮತ್ ಕುಟುಂಬಿಕರು, ಉಡುಪಿಯ ಗುರುಸ್ಮೃತಿ ಟ್ರಸ್ಟ್ ಹಾಗೂ ಗೋಕುಲ್ ಕಾಮತ್ ಇವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ‘ಕುಸುಮ್ ವಿಹಾರ್’ ಇದರ ಉದ್ಘಾಟನೆಯನ್ನು ಕಾಸರಗೋಡಿನ ಶ್ರೀ ಎನ್. ರಾಮದಾಸ್ ಕಾಮತ್ (ನಿವೃತ್ತ ಮುಖ್ಯಶಿಕ್ಷಕರು) ಇವರು ದಿನಾಂಕ 22-10-2022ರಂದು ನೆರವೇರಿಸಿದರು. ಗುರುಸ್ಮೃತಿ ಟ್ರಸ್ಟ್ ನ ವರಿಷ್ಠರಾದ ಡಾ. ದೀಪಕ್ ಪ್ರಭು ಮಾತನಾಡಿ ತಮ್ಮ ಮಾವ, ಶತಾಯುಷಿ …
ಯಕ್ಷಗಾನ ಕಲಾರಂಗದ ವತಿಯಿಂದ 34ನೇ ಮನೆ ಹಸ್ತಾಂತರ – 2022 Read More »
ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣಾ ಸಮಾರಂಭ – 2022
ಬಂಡೆಯನ್ನು ಶಿಖರದ ಎತ್ತರಕ್ಕೆ ಕೊಂಡೊಯ್ಯಲು ಸಾಕಷ್ಟು ಪ್ರಯತ್ನಪಡಬೇಕು. ಆದರೆ ಅಲ್ಲಿಂದ ಉರುಳಿಸಿದರೆ ಯಾವುದೇ ಪ್ರಯತ್ನವಿಲ್ಲದೆ ಕೆಳಗೆ ಬೀಳುತ್ತದೆ. ನಮ್ಮ ವ್ಯಕ್ತಿತ್ವವೂ ಹಾಗೆ, ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳಲು ನಿರಂತರ ಸಾಧನೆ ಬೇಕು. ವ್ಯಕ್ತಿತ್ವ ಪತನಗೊಳ್ಳಲು ಒಂದೇ ಒಂದು ತಪ್ಪು ಸಾಕಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಚ್ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು ಎಂದು ಅಕ್ಟೋಬರ್ 09ರಂದು ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ಜರಗಿದ 18ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಶ್ರೀ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು …
ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 33ನೇ ಮನೆ ಹಸ್ತಾಂತರ – 2022
ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ವಿದ್ಯಾರ್ಥಿನಿ ರಶ್ಮಿತಾ ಇವಳಿಗೆ ಜನ್ಸಾಲೆಯಲ್ಲಿ ಡಾ. ರಾಜಾ ವಿಜಯಕುಮಾರ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಮನೆಯ ಪ್ರವೇಶೋತ್ಸವ ದಿನಾಂಕ 01-08-2022 ರಂದು ಜರಗಿತು. ಡಾ. ರಾಜಾ ವಿಜಯಕುಮಾರ್ ಮತ್ತು ಶ್ರೀಮತಿ ರಜನಿ ಭಾರತೀ ಮಂಗಲಂ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಗತರಾಗಿ ಭಾಗವಹಿಸಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ಶ್ರೀ ಎಚ್. ಎಸ್. ಶೆಟ್ಟಿ ಇವರು ಯಕ್ಷಗಾನ ಕಲಾರಂಗ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸರಕಾರೇತರ ಸಂಘಟನೆಯೆಂದು ಶ್ಲಾಘಿಸಿದರು. ಡಾ. ವಿಜಯಕುಮಾರ್ ಅವರು ವೈದ್ಯಕೀಯ …
ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 33ನೇ ಮನೆ ಹಸ್ತಾಂತರ – 2022 Read More »
ಯಕ್ಷಗಾನ ಕಲಾರಂಗದ 47ನೇ ವಾರ್ಷಿಕ ಮಹಾಸಭೆ – 2022
ಉಡುಪಿಯ ಸಾಂಸ್ಕೃತಿಕ ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗದ 47ನೇ ವಾರ್ಷಿಕ ಮಹಾಸಭೆಯು ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ಜುಲೈ 09, 2022 ರಂದು ಎಂ. ಗಂಗಾಧರ ರಾವ್‍ರ ಅಧ್ಯಕ್ಷತೆಯಲ್ಲಿ ಜರಗಿತು. ಮಹಾಸಭೆಯ ಕಲಾಪಗಳಾದ ಗತ ಮಹಾಸಭೆಯ ವರದಿ, ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರ ಮಂಡನೆ, ಲೆಕ್ಕಪರಿಶೋಧಕರ ನೇಮಕದ ಅನಂತರ ಕಾರ್ಯಕಾರೀ ಸಮಿತಿ ಮತ್ತು ಸಲಹಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಆರಂಭದಲ್ಲಿ ವರದಿ ವರ್ಷದಲ್ಲಿ ಅಗಲಿದ ಸಂಸ್ಥೆಯ ಸದಸ್ಯರು ಹಾಗೂ ಕಲಾವಿದರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಪಾಧ್ಯಕ್ಷರಾದ …
ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 32ನೇ ಮನೆ ಹಸ್ತಾಂತರ – 2022
ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿಯಾದ ಪಳ್ಳಿ ನಿಂಜೂರಿನ ಶ್ರೀಮತಿ ಕುಸುಮಾ ಹಾಗೂ ಶ್ರೀ ಗೋಪಾಲ ಆಚಾರ್ಯ ಇವರ ಪುತ್ರಿ ದೀಕ್ಷಾ (ದ್ವಿತೀಯ ಪಿ.ಯು.ಸಿ) ಇವಳಿಗೆ ಉಡುಪಿಯ ಅರುಣ್ ಕುಮಾರ್ ಅವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ‘ಶ್ರೀದೇವಿ ನಿಲಯ’ವನ್ನು ಶ್ರೀಮತಿ ಶ್ರೀದೇವಿ ಅರುಣ್ ಕುಮಾರ್ ಮತ್ತು ಶ್ರೀ ಅರುಣ್ ಕುಮಾರ್ ಅವರು 07-07-2022 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಕಲಾರಂಗದಂತಹ ಸಂಸ್ಥೆಯೊಂದಿಗೆ ನಿಕಟ ಬಾಂಧವ್ಯ ನನಗೆ ತುಂಬಾ ಸಂತೋಷ ನೀಡಿದೆ. ಈ ಮನೆಯಲ್ಲಿ ಎಲ್ಲರೂ ಸುಖ ಸಂತೋಷದಿಂದ …
ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 32ನೇ ಮನೆ ಹಸ್ತಾಂತರ – 2022 Read More »
ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 31ನೇ ಮನೆ ಹಸ್ತಾಂತರ – 2022
ಯಕ್ಷಗಾನ ಕಲಾರಂಗ ನಿರ್ಮಿಸಿದ 31ನೇ ಮನೆಯ ಉದ್ಘಾಟನಾ ಸಮಾರಂಭ 19-06-2022ರಂದು ಹಿರಿಯಡ್ಕ ಸಮೀಪದ ಕೊಂಡಾಡಿಯಲ್ಲಿ ಜರಗಿತು. ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿಯರಾದ ರಕ್ಷಿತಾ ಪೂಜಾರಿ ಹಾಗೂ ಧನ್ಯ ಪೂಜಾರಿ ಇವರಿಗೆ ಪೇಜಾವರ ಮಠ ಮತ್ತು ಗುರುರಾಜ ಅಮೀನ್‍ರ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಮನೆ ‘ಶ್ರೀಗುರುಕೃಪಾ’ವನ್ನು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ತಮ್ಮ ಅನುಗ್ರಹ ಸಂದೇಶದಲ್ಲಿ ಸ್ವಾಮೀಜಿ ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಾಮಾಜಿಕ ಕಾಳಜಿಯ ಕಾರ್ಯಕ್ರಮವನ್ನು ಮೆಚ್ಚಿಕೊಂಡು ಪ್ರಜಾರಾಜ್ಯದಲ್ಲಿ ರಾಮರಾಜ್ಯ ನಿರ್ಮಾಣವಾಗಲು ಆರ್ಥಿಕವಾಗಿ ಸಬಲರಾದ …
ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 31ನೇ ಮನೆ ಹಸ್ತಾಂತರ – 2022 Read More »
ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 30ನೇ ಮನೆ ಹಸ್ತಾಂತರ – 2022
ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿಯಾದ ಪಾದೂರಿನ ಮಲ್ಲಿಕಾ ಶೆಟ್ಟಿ (ದ್ವಿತೀಯ ಪಿ.ಯು.ಸಿ) ಹಾಗೂ ನರ್ಸಿಂಗ್ ವಿದ್ಯಾರ್ಥಿನಿ ರಕ್ಷಿತಾ ಶೆಟ್ಟಿ ಇವರಿಗೆ ಮಂಗಳೂರಿನ ಉದ್ಯಮಿ ಶ್ರೀ ಪಿ. ಗೋಕುಲನಾಥ ಪ್ರಭುರವರು ತಮ್ಮ ಮಾತೃಶ್ರೀ ಶ್ರೀಮತಿ ಪದ್ಮಾವತಿ ವೆಂಕಟ್ರಾಯ ಪ್ರಭು ಅವರ ಜನ್ಮಶತಾಬ್ದದ ಶುಭಾವಸರದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ‘ಪದ್ಮಾವತಿ’ಯನ್ನು ಶ್ರೀಮತಿ ನಿವೇದಿತಾ ಜಿ. ಪ್ರಭು ಮತ್ತು ಶ್ರೀ ಪಿ. ಗೋಕುಲನಾಥ ಪ್ರಭು ಅವರು 16-06-2022 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಕಲಾರಂಗದಂತಹ ಸಂಸ್ಥೆಯೊಂದಿಗೆ ನಿಕಟ ಬಾಂಧವ್ಯ ನನಗೆ ತುಂಬಾ …
ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 30ನೇ ಮನೆ ಹಸ್ತಾಂತರ – 2022 Read More »