Yakshagana Kalaranga

Yakshagana Kalaranga

ಯಕ್ಷ ಕಲಾತಪಸ್ವಿ ಕುಂಬ್ಳೆ ಸುಂದರ ರಾಯರಿಗೆ ಶ್ರದ್ಧಾಂಜಲಿ

ಆರು ದಶಕಗಳ ಕಾಲ ತಮ್ಮ ಮಾತಿನ ಮೋಡಿಯಿಂದ ಯಕ್ಷರಂಗವನ್ನು ಆಳಿದ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾಯರಿಗೆ ನಾಗರಿಕ ಶ್ರದ್ಧಾಂಜಲಿ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ 01-12-2022ರಂದು ಜರಗಿತು. ಪ್ರಸಂಗಕರ್ತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಡಿ.ಎಸ್ ಶ್ರೀಧರ್ ಅವರು ಕುಂಬಳೆಯವರ ಮಾತಿನ ಪ್ರೌಢಿಮೆಯನ್ನು ಯಕ್ಷಗಾನ ಬಯಲಾಟ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ ಪಾರ್ತಿಸುಬ್ಬ ಪ್ರಶಸ್ತಿಯ ಸ್ಥಾಪನೆ, ಹಿಂದೆ ಇದ್ದ ಪ್ರಶಸ್ತಿಯ ಸಂಖ್ಯೆ ಮತ್ತು ಮೊತ್ತವನ್ನು ವೃದ್ಧಿಸುವಲ್ಲಿ ಅವರು ಮಾಡಿದ ಪ್ರಯತ್ನ, ಯಕ್ಷೋಪಾಸಕರು ಪುಸ್ತಕ …

ಯಕ್ಷ ಕಲಾತಪಸ್ವಿ ಕುಂಬ್ಳೆ ಸುಂದರ ರಾಯರಿಗೆ ಶ್ರದ್ಧಾಂಜಲಿ Read More »

ಕಿಶೋರ ಯಕ್ಷಗಾನ ಸಂಭ್ರಮ – 2022ರ – 4ನೇ ದಿನದ ಪ್ರದರ್ಶನ

ಕಿಶೋರ ಯಕ್ಷಗಾನ ಸಂಭ್ರಮ-2022ರ 4ನೇ ದಿನದ ಪ್ರದರ್ಶನವಾಗಿ ನಿನ್ನೆ (30-11-2022) ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ  ಮಣಿಪಾಲ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ (ನಿ: ಶಾಂತಾರಾಮ ಆಚಾರ್ಯ) ಹಾಗೂ ಕಿದಿಯೂರು ಎಸ್.ವಿ.ಎಸ್.ಟಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ರುಕ್ಮಾವತಿ ಕಲ್ಯಾಣ (ನಿ: ನಿತ್ಯಾನಂದ ಶೆಟ್ಟಿಗಾರ್) ಯಕ್ಷಗಾನ ಪ್ರದರ್ಶನಗೊಂಡಿತು.

ಕಿಶೋರ ಯಕ್ಷಗಾನ ಸಂಭ್ರಮ – 2022ರ – ಮೂರನೇ ದಿನದ ಪ್ರದರ್ಶನ

29-11-2022 ರಂದು ಕಿಶೋರ ಯಕ್ಷಗಾನ ಸಂಭ್ರಮ-2022ರ ಮೂರನೇ ದಿನದ ಪ್ರದರ್ಶನವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ  ಸರಕಾರಿ ಪ್ರೌಢ ಶಾಲೆ ಹನುಮಂತನಗರ ವಿದ್ಯಾರ್ಥಿಗಳಿಂದ ಭಕ್ತ ಸುಧನ್ವ (ನಿ: ಸದಾನಂದ ಐತಾಳ್) ಹಾಗೂ ಸೈಂಟ್ ಸಿಸಿಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಪಾಂಚಜನ್ಯ (ನಿ: ಕೀರ್ತನಾ ಉದ್ಯಾವರ) ಪ್ರದರ್ಶನಗೊಂಡಿತು.

ಕಿಶೋರ ಯಕ್ಷಗಾನ ಸಂಭ್ರಮ – 2022ರ – ಎರಡನೇ ದಿನದ ಪ್ರದರ್ಶನ

28-11-2022 ರಂದು ಕಿಶೋರ ಯಕ್ಷಗಾನ ಸಂಭ್ರಮ-2022ರ ಎರಡನೇ ದಿನದ ಪ್ರದರ್ಶನವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಕಳ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಕಾಲಜಂಘಾಸುರ ವಧೆ (ನಿ. ಸುಬ್ರಹ್ಮಣ್ಯಪ್ರಸಾದ್ ಮುದ್ರಾಡಿ) ಹಾಗೂ ಕ್ರಿಶ್ಚಿಯನ್ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಗಜೇಂದ್ರ ಮೋಕ್ಷ (ನಿ. ಜಯಕರ ಬೈಲೂರು) ಪ್ರದರ್ಶನಗೊಂಡಿತು.

ಕಿಶೋರ ಯಕ್ಷಗಾನ ಸಂಭ್ರಮ – 2022 ಉದ್ಘಾಟನಾ ಕಾರ್ಯಕ್ರಮ

ಯಕ್ಷಗಾನದಂತಹ ಕಲೆ ಕಲಿಕೆಗೆ ಪೂರಕ ಯಕ್ಷಗಾನ ಕಲೆ ಕಲಿಕೆಗೆ ಪೂರಕವಾಗಿದೆ. ಈ ಕಲೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ನುಡಿದರು. ಅವರು ಉಡುಪಿ ಯಕ್ಷಶಿಕ್ಷಣ ಟ್ರಸ್ಟ್‌ನ ಕಿಶೋರ ಯಕ್ಷಗಾನ ಸಂಭ್ರಮ-2022ನ್ನು ನವೆಂಬರ್ 27 ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅನುಗ್ರಹಿಸಿದರು. ಯಕ್ಷಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಮುಖ್ಯ …

ಕಿಶೋರ ಯಕ್ಷಗಾನ ಸಂಭ್ರಮ – 2022 ಉದ್ಘಾಟನಾ ಕಾರ್ಯಕ್ರಮ Read More »

ಫಲಾನುಭವಿ ವಿದ್ಯಾಪೋಷಕ್ ವಿದ್ಯಾರ್ಥಿನಿಯ ನೂತನ ಮನೆಗೆ ಉಡುಗೊರೆ

ಪ್ರಥಮ ಬಿ. ಕಾಂ. ಓದುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ ಭವ್ಯಶ್ರೀಯ ನೂತನ ಮನೆಯ ‘ಗೃಹ ಪ್ರವೇಶ’ವು ದಿನಾಂಕ 17-11-2022 ರಂದು ಕುಂದಾಪುರದ ನೇರಳಕಟ್ಟೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ವಿದ್ಯಾಪೋಷಕ್ ವತಿಯಿಂದ ರೂಪಾಯಿ 50,000/-ದ ಉಡುಗೊರೆ ನೀಡಿ ಪ್ರೋತ್ಸಾಹಿಸಿದರು. ಸಂಸ್ಥೆಯ  ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿಗಳಾದ ಪ್ರೊ. ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಉಪಸ್ಥಿತರಿದ್ದರು. ಕಳೆದ ವರ್ಷ ವಿದ್ಯಾಪೋಷಕ್ ‘ವಿನಮ್ರ ಸಹಾಯ ವಿತರಣಾ’ ಸಮಾರಂಭಕ್ಕೆ ಮಗಳನ್ನು ತಂದೆ(ವೆಂಕಟರಮಣ …

ಫಲಾನುಭವಿ ವಿದ್ಯಾಪೋಷಕ್ ವಿದ್ಯಾರ್ಥಿನಿಯ ನೂತನ ಮನೆಗೆ ಉಡುಗೊರೆ Read More »

ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 35 ಮತ್ತು 36ನೇ ಮನೆ ಹಸ್ತಾಂತರ – 2022

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಪ್ರವರ್ತಕರಾದ ಶ್ರೀ ಎಚ್. ಎಸ್. ಶೆಟ್ಟಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ವಿದ್ಯಾಪೋಷಕ್‍ನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರಾದ ಬೊಮ್ಮರಬೆಟ್ಟುವಿನ ಮಂಜುಶ್ರೀ ಹಾಗೂ ಅಲ್ತಾರಿನ ಪೂರ್ಣಿಮಾ ಇವರಿಗೆ ನಿರ್ಮಿಸಲಾದ ನೂತನ ಮನೆ ‘ರಾಜೀವ ಸದನ’ 16-11-2022ರಂದು ಉದ್ಘಾಟನೆಗೊಂಡಿತು. ಎರಡೂ ಮನೆಗಳನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಎಚ್.ಎಸ್ ಶೆಟ್ಟಿಯವರು ಸಂಸ್ಥೆಯ ಸಮಾಜಮುಖಿ ಕಾರ್ಯ ಹಾಗೂ ಪಾರದರ್ಶಕ ವ್ಯವಹಾರದಿಂದ ನಾನು ಆಕರ್ಷಿತನಾಗಿದ್ದೇನೆ.ನಿಮ್ಮ ಕಾರ್ಯಕ್ರಮಗಳಿಗೆ ನಮ್ಮ ಸೊಸೈಟಿ ಮುಂದೆಯೂ ನೆರವು ನೀಡುತ್ತದೆ ಎಂದು ಭರವಸೆ ನೀಡಿದರು. ಸೊಸೈಟಿಯ …

ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 35 ಮತ್ತು 36ನೇ ಮನೆ ಹಸ್ತಾಂತರ – 2022 Read More »

‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭ – 2022

ಉಡುಪಿಯ ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ನವಂಬರ್ 13ರಂದು ಜರಗಿತು. ದಿನಪೂರ್ತಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಎಂ. ಪ್ರಭಾಕರ ಜೋಶಿಯವರು ಕಲಾರಂಗ ತನ್ನ ಕಾರ್ಯಚಟುವಟಿಕೆಗಳಿಂದ ಸಾಂಸ್ಕೃತಿಕ ಸಾಮಾಜಿಕ ಸಂಘಟನೆಗೆ ಮಾದರಿಯಾಗಿದೆ ಎಂದರು. ಡಾ. ಪದ್ಮನಾಭ ಕಾಮತ್ ರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದಲ್ಲಿ ಪ್ರೊ. ಎಂ. ಎಲ್. ಸಾಮಗ, ಶ್ರೀ ಕೃಷ್ಣಪ್ರಸಾದ್ ಅಡ್ಯಂತಾಯ, ಶ್ರೀ ಕದ್ರಿ ನವನೀತ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಪೂರ್ವಾಹ್ನ ಮೊದಲ ಗೋಷ್ಠಿಯಾಗಿ ‘ಇತಿಹಾಸಕ್ಕೆ ಸಂದುಹೋದ ತೆಂಕುತಿಟ್ಟಿನ …

‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭ – 2022 Read More »

We're currently hard at work gathering information and crafting content to bring you the best experience. Stay tuned for exciting updates!