Yakshagana Kalaranga

Yakshagana Kalaranga

ಯು. ಎಸ್. ರಾಜಗೋಪಾಲ ಆಚಾರ್ಯರಿಗೆ ‘ಸೇವಾಭೂಷಣ’ ಪ್ರಶಸ್ತಿ

ಸಾತ್ವಿಕ ವ್ಯಕ್ತಿತ್ವದ ಮತ್ತು ಸಾಮಾಜಿಕ ಕಳಕಳಿಯ ಯು. ಎಸ್. ರಾಜಗೋಪಾಲ ಆಚಾರ್ಯರು ಸೇವಾಭೂಷಣ ಪ್ರಶಸ್ತಿಗೆ ಅತ್ಯಂತ ಅರ್ಹ ವ್ಯಕ್ತಿ ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಯಕ್ಷಗಾನ ಕಲಾರಂಗ ಸಾಮಾಜಿಕ ಬದ್ಧತೆಯ ಚಟುವಟಿಕೆಗಳನ್ನು ಶ್ರೀಪಾದರು ಶ್ಲಾಘಿಸಿದರು. ಅವರು ಮಾರ್ಚ್ 1, 2023ರಂದು ಉಡುಪಿ ಪೇಜಾವರ ಮಠದ ಶ್ರೀರಾಮವಿಠಲ ಸಭಾಭವನದಲ್ಲಿ ಯಕ್ಷಗಾನ ಕಲಾರಂಗದಲ್ಲಿ ದೀರ್ಘಕಾಲ ಕೋಶಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ಸಂಸ್ಥೆ ನೀಡುವ  ಸೇವಾಭೂಷಣ ಪ್ರಶಸ್ತಿಯನ್ನು ನಿವೃತ್ತ …

ಯು. ಎಸ್. ರಾಜಗೋಪಾಲ ಆಚಾರ್ಯರಿಗೆ ‘ಸೇವಾಭೂಷಣ’ ಪ್ರಶಸ್ತಿ Read More »

ಸಮಗ್ರ ಯಕ್ಷಗಾನ ಸಮ್ಮೇಳನ – 2023

ಕರ್ನಾಟಕ ಸರಕಾರವು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಮೂಲಕ ಪ್ರಥಮ ಯಕ್ಷಗಾನ ಸಮ್ಮೇಳನವನ್ನು ಆಯೋಜಿಸಿದ್ದು, ಫೆಬ್ರವರಿ 11 ಮತ್ತು 12, 2023 ರಂದು ಎಂ.ಜಿ.ಎಂ. ಕಾಲೇಜಿನ ಎ.ಎಲ್.ಎನ್.ರಾವ್ ಕ್ರೀಡಾಂಗದಲ್ಲಿ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ಜರಗಿತು. 3 ವೇದಿಕೆಗಳನ್ನು ಮಾಡಲಾಗಿತ್ತು. 3 ವೇದಿಕೆಗಳಿಗೆ ಹೆಸರಾಂತ ಕಲಾವಿದರಾದ ಮಲ್ಪೆ ಶಂಕರನಾರಾಯಣ ಸಾಮಗ, ಕೆರೆಮನೆ ಶಿವರಾಮ ಹೆಗಡೆ ಹಾಗೂ ಅಳಿಕೆ ರಾಮಯ್ಯ ರೈ ಎಂದು ಹೆಸರಿಡಲಾಗಿತ್ತು. 11, ಶನಿವಾರದಂದು ಪೂರ್ವಾಹ್ನ 9.00 ಗಂಟೆಗೆ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಿಂದ ಗಣಪತಿಯನ್ನಿಟ್ಟ ಪಲ್ಲಕ್ಕಿಯೊಂದಿಗೆ ಭವ್ಯ …

ಸಮಗ್ರ ಯಕ್ಷಗಾನ ಸಮ್ಮೇಳನ – 2023 Read More »

ಯಕ್ಷನಿಧಿ ಡೈರಿ – 2023 ಬಿಡುಗಡೆ ಮತ್ತು ಸಾಂತ್ವನನಿಧಿ ಹಸ್ತಾಂತರ

ಉಡುಪಿ : ಯಕ್ಷಗಾನ ಕಲಾರಂಗ (ರಿ.) ಉಡುಪಿ ಕಳೆದ ಎರಡು ದಶಕಗಳಿಂದ ವೃತ್ತಿ ಮೇಳದ ಕಲಾವಿದರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೊಳಗೊಂಡಿರುವ ಡೈರಿ ನೀಡುತ್ತಾ ಬಂದಿದ್ದು, ‘ಯಕ್ಷನಿಧಿ ಡೈರಿ – 2023’ರ ಬಿಡುಗಡೆ ಕಾರ್ಯಕ್ರಮವು ಇಂದು (30-12-2022) ಸಂಸ್ಥೆಯ ಕಚೇರಿಯಲ್ಲಿ ಜರಗಿತು. ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಜಿ. ಎಲ್. ಹೆಗಡೆಯವರು ಡೈರಿ ಬಿಡುಗಡೆ ಮಾಡಿ ಸಂಸ್ಥೆ ಕಲಾವಿದರ ಕ್ಷೇಮ ಚಿಂತನೆಗೆ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದರು. ಯಕ್ಷಗಾನ ಶ್ರೇಷ್ಠ ಕಲೆಯಾಗಿದ್ದು ಅದರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ …

ಯಕ್ಷನಿಧಿ ಡೈರಿ – 2023 ಬಿಡುಗಡೆ ಮತ್ತು ಸಾಂತ್ವನನಿಧಿ ಹಸ್ತಾಂತರ Read More »

70 ಸಾವಿರ ನಿಧಿ ಸಮರ್ಪಣೆಯೊಂದಿಗೆ 70ರ ಆಚರಣೆ

ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎ. ಅನಂತರಾಜ ಉಪಾಧ್ಯಾಯರು ತಮ್ಮ 70ರ ವರ್ಷಾಚರಣೆಯನ್ನು ಸರಳವಾಗಿ ಆಚರಿಸಿ ಯಕ್ಷಗಾನ ಕಲಾರಂಗಕ್ಕೆ ರೂಪಾಯಿ 70 ಸಾವಿರ ನಿಧಿ ಸಮರ್ಪಿಸುವುದರ ಮೂಲಕ ಜನ್ಮದಿನದ ಆಚರಣೆಯನ್ನು ಅರ್ಥಪೂರ್ಣವಾಗಿಸಿಕೊಂಡರು. ಕಳೆದ ಹತ್ತು ವರ್ಷಗಳಿಂದ ಪ್ರತಿನಿತ್ಯ ಸಂಸ್ಥೆಗೆ ಬಂದು ಕೋಶಾಧಿಕಾರಿ ಕೆ. ಮನೋಹರರಿಗೆ ಬ್ಯಾಂಕಿನ ವ್ಯವಹಾರ ಮತ್ತು ಲೆಕ್ಕಾಚಾರಕ್ಕೆ ಸಹಕರಿಸುತ್ತಿದ್ದಾರೆ. ಅವರ ನಿಸ್ಪ್ರಹ ಸೇವೆಯನ್ನು ಲಕ್ಷಿಸಿ ಎರಡು ವರ್ಷದ ಹಿಂದೆ ಅವರಿಗೆ ಸಂಸ್ಥೆ ಸೇವಾಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಂಬಂಧದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರರ …

70 ಸಾವಿರ ನಿಧಿ ಸಮರ್ಪಣೆಯೊಂದಿಗೆ 70ರ ಆಚರಣೆ Read More »

ಕಿಶೋರ ಯಕ್ಷಗಾನ ಸಂಭ್ರಮ – 2022

ಯಕ್ಷಶಿಕ್ಷಣ ಟ್ರಸ್ಟ್ನ ಕಿಶೋರ ಯಕ್ಷಗಾನ ಸಂಭ್ರಮ – 2022ನ್ನು 13-12-2022ರಂದು ಸಂಜೆ 6.00 ಗಂಟೆಗೆ ಬ್ರಹ್ಮಾವರದ ಬಂಟರ ಭವನದ ಬಳಿ ಟ್ರಸ್ಟ್ ನ ಅಧ್ಯಕ್ಷರೂ, ಶಾಸಕರೂ ಆದ ಶ್ರೀ ಕೆ. ರಘುಪತಿ ಭಟ್ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು. ಬ್ರಹ್ಮಾವರದಲ್ಲಿ ಮೊದಲ ದಿನದ ಪ್ರದರ್ಶನವಾಗಿ ಬ್ರಹ್ಮಾವರ ನಿರ್ಮಲಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಕಾಳಿಂದಿ ವಿವಾಹ (ನಿ: ಐರೋಡಿ ಮಂಜುನಾಥ ಕುಲಾಲ್) ಹಾಗೂ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಶ್ರೀಕೃಷ್ಣ ಪಾರಿಜಾತ (ನಿ: ಕೇಶವ ಆಚಾರ್) ಎರಡನೇ ದಿನದ ಪ್ರದರ್ಶನವಾಗಿ 14-12-2022 ರಂದು …

ಕಿಶೋರ ಯಕ್ಷಗಾನ ಸಂಭ್ರಮ – 2022 Read More »

ಯಕ್ಷಗಾನ ಕಲಾವಿದರಿಗೆ ಬಸ್‍ಪಾಸ್ ವಿತರಣೆ

ಕೆನರಾ ಬಸ್ ಮಾಲಕರ ಸಹಕಾರದಿಂದ ಯಕ್ಷಗಾನ ಕಲಾರಂಗ ಕಳೆದ ಹಲವು ವರ್ಷಗಳಿಂದ ವೃತ್ತಿ ಮೇಳದ ಕಲಾವಿದರಿಗೆ ಪ್ರತಿಶತ 50 ರಿಯಾಯಿತಿ ದರದಲ್ಲಿ ಪಾಸ್ ನೀಡುತ್ತಾ ಬಂದಿದ್ದು, ಈ ವರ್ಷದ ಆಗಸ್ಟ್ 31, 2023ರ ವರೆಗೆ ಅನ್ವಯವಾಗುವಂತೆ ಕೊಡಮಾಡಿದ ಬಸ್ ಪಾಸ್ ವಿತರಣಾ ಕಾರ್ಯಕ್ರಮ 18-12-2021ರಂದು ಸಂಸ್ಥೆಯ ಕಚೇರಿಯಲ್ಲಿ ಜರಗಿತು. ಕೆನರಾ ಬಸ್ಸು ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಮೇಳದ ಪ್ರತಿನಿಧಿಗಳಿಗೆ ವಿತರಿಸಿ ಮಾತನಾಡಿ, ಕಲಾವಿದರಿಗೆ ಅನುಕೂಲವಾಗುವಂತೆ ಮುಂದೆ ಅಕ್ಟೋಬರ್ 31ರವರೆಗೆ ವಿಸ್ತರಿಸುವುದಾಗಿ ಭರವಸೆ …

ಯಕ್ಷಗಾನ ಕಲಾವಿದರಿಗೆ ಬಸ್‍ಪಾಸ್ ವಿತರಣೆ Read More »

ಕಿಶೋರ ಯಕ್ಷಗಾನ ಸಂಭ್ರಮ – 2022ರ – 15ನೇ ದಿನದ ಪ್ರದರ್ಶನ

11-12-2022 ರಂದು ಕಿಶೋರ ಯಕ್ಷಗಾನ ಸಂಭ್ರಮ-2022ರ 15ನೇ ದಿನದ ಪ್ರದರ್ಶನವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಿಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಹಿಡಿಂಬಾ ವಿವಾಹ (ನಿ: ಕೃಷ್ಣಮೂರ್ತಿ ಭಟ್) ಹಾಗೂ ಪರ್ಕಳ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಗಣೇಶ ಮಹಾತ್ಮ್ಯೆ (ನಿ: ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ) ಯಕ್ಷಗಾನ ಪ್ರದರ್ಶನಗೊಂಡಿತು.

ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಮತ್ತು ಕಿಶೋರ ಯಕ್ಷಸಂಗಮ – 2022

11-12-2022 ರಂದು ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಮತ್ತು ಕಿಶೋರ ಯಕ್ಷಸಂಗಮವು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸಲ್ಪಟ್ಟಿತು. ಪೂರ್ವಾಹ್ನ ಬಾಲ ಕಲಾವಿದರಿಂದ ಗಜಮುಖ ಪ್ರಸ್ತುತಿ, ಹೂವಿನ ಕೋಲು, ಯಕ್ಷಗಾನ ಪ್ರಾತ್ಯಕ್ಷಿಕೆ, ಯಕ್ಷ ರಸಪ್ರಶ್ನೆ, ಚಿಕ್ಕಮೇಳ, ತೆಂಕುತಿಟ್ಟಿನ ಪೀಠಿಕಾ ಸ್ತ್ರೀವೇಷ ನೃತ್ಯ, ಬಡಗುತಿಟ್ಟಿನ ಪಾಂಡವ ಒಡ್ಡೋಲಗ ನೃತ್ಯ ವ್ಯವಸ್ಥಿತವಾಗಿ ಸಂಪನ್ನಗೊಂಡಿತು. ಬಳಿಕ ಪರ್ಯಾಯ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಸಚಿವರು, ಶಾಸಕರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಯಕ್ಷಗುರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾವಿರಕ್ಕೂ ಮೇಲ್ಪಟ್ಟು ಯಕ್ಷಶಿಕ್ಷಣ …

ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಮತ್ತು ಕಿಶೋರ ಯಕ್ಷಸಂಗಮ – 2022 Read More »

ಕಿಶೋರ ಯಕ್ಷಗಾನ ಸಂಭ್ರಮ – 2022ರ – 14ನೇ ದಿನದ ಪ್ರದರ್ಶನ

10-12-2022  ರಂದು ಕಿಶೋರ ಯಕ್ಷಗಾನ ಸಂಭ್ರಮ-2022ರ 14ನೇ ದಿನದ ಪ್ರದರ್ಶನವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಮಾಯಾಪುರಿ ಮಹಾತ್ಮ್ಯೆ (ನಿ: ಶಾಂತಾರಾಮ ಆಚಾರ್ಯ) ಹಾಗೂ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನಾಸಾಚ್ಛೇದ (ನಿ: ನರಸಿಂಹ ತುಂಗ) ಯಕ್ಷಗಾನ ಪ್ರದರ್ಶನಗೊಂಡಿತು.

We're currently hard at work gathering information and crafting content to bring you the best experience. Stay tuned for exciting updates!