Yakshagana Kalaranga

Yakshagana Kalaranga

ಕಲಾವಿದರ ಕುಟುಂಬಕ್ಕೆ ಯಕ್ಷಗಾನ ಕಲಾರಂಗದಿಂದ ಸಾಂತ್ವನ ನಿಧಿ.

ಡಿಸೆಂಬರ್ 22, 2022ರಂದು ಕಟೀಲಿನ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷದ ಶಿಶುಪಾಲನ ವೇಷದಲ್ಲಿರುವಾಗಲೇ ಇಹಲೋಕ ಯಾತ್ರೆ ಮುಗಿಸಿದ ಕಲಾವಿದ, ಪ್ರಸಂಗಕರ್ತ ಗುರುವಪ್ಪ ಬಾಯಾರು ಹಾಗೂ ಇತ್ತೀಚೆಗೆ ಅಗಲಿದ ಸಸಿಹಿತ್ಲು ಮೇಳದ ಯುವ ಕಲಾವಿದ ಜಗದೀಶ ನಲ್ಕ ಇವರ ಕುಟುಂಬಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದಿಂದ ಸಾಂತ್ವನ ನಿಧಿಯಾಗಿ ಅನುಕ್ರಮವಾಗಿ ರೂ. 50,000 ಮತ್ತು ರೂ. 75,000 ನೀಡಲಾಯಿತು. ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕರ್ಣಾಟಕ ಬ್ಯಾಂಕಿನ ನಿವೃತ್ತ ಆಡಳಿತಾಧಿಕಾರಿ ಮಹಾಬಲೇಶ್ವರ ಎಂ. ಎಸ್. ಮತ್ತು ಮಾಹೆಯ …

ಕಲಾವಿದರ ಕುಟುಂಬಕ್ಕೆ ಯಕ್ಷಗಾನ ಕಲಾರಂಗದಿಂದ ಸಾಂತ್ವನ ನಿಧಿ. Read More »

ಮಹಾಬಲೇಶ್ವರ ಎಂ. ಎಸ್. ಅವರಿಗೆ ಅಭಿನಂದನೆ.

‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಹಾಗೆಯೇ ಕರ್ಣಾಟಕ ಬ್ಯಾಂಕ್ ಕರಾವಳಿ ಭಾಗದ ನಮಗೆ ಅತ್ಯಂತ ಹೆಮ್ಮೆಯ ವಿತ್ತೀಯ ಸಂಸ್ಥೆಯಾಗಿದೆ. ಮಹಾಬಲೇಶ್ವರ ಎಂ. ಎಸ್. ಕರ್ಣಾಟಕ ಬ್ಯಾಂಕ್‍ಗೆ ದೊಡ್ಡ ಶಕ್ತಿಯಾಗಿದ್ದರು. ಬ್ಯಾಂಕಿನಿಂದ ನಿವೃತ್ತರಾದ ಮೇಲೆ ಅವರನ್ನು ಅಭಿನಂದಿಸುತ್ತಿರುವುದು ಅವರು ಬ್ಯಾಂಕಿನ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗೆ ನಿದರ್ಶನ. ಕರ್ಣಾಟಕ ಬ್ಯಾಂಕ್ ಸಮಾಜಸ್ನೇಹಿ, ಗ್ರಾಹಕಸ್ನೇಹಿಯಾಗಿ ವ್ಯವಹರಿಸುತ್ತಾ ಬಂದಿದೆ ಎಂದು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಯಕ್ಷಗಾನ ಕಲಾರಂಗವು 25-04-2023ರಂದು ಉಡುಪಿಯ ಪೇಜಾವರ ಮಠದ ರಾಮವಿಠಲ ಸಭಾಭವನದಲ್ಲಿ ಆಯೋಜಿಸಿದ್ದ …

ಮಹಾಬಲೇಶ್ವರ ಎಂ. ಎಸ್. ಅವರಿಗೆ ಅಭಿನಂದನೆ. Read More »

ಎಂ. ಎಸ್. ಮಹಾಬಲೇಶ್ವರ ಅವರಿಗೆ ಅಭಿನಂದನಾ ಕಾರ್ಯಕ್ರಮ.

ಇತ್ತೀಚೆಗೆ ನಿವೃತ್ತರಾದ ಕರ್ನಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕರಾದ ಎಂ. ಎಸ್. ಮಹಾಬಲೇಶ್ವರ ಇವರಿಗೆ ಯಕ್ಷಗಾನ ಕಲಾರಂಗದ ವತಿಯಿಂದ ಇಂದು (25-04-2023) ಸಂಜೆ 6.00 ಗಂಟೆಗೆ ಪೇಜಾವರ ಮಠದ ಶ್ರೀ ರಾಮವಿಠಲ ಸಭಾಭವನದಲ್ಲಿ ಅಭಿನಂದನಾ ಸಮಾರಂಭ ಜರಗಲಿದೆ. ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವದಿಸಲಿದ್ದಾರೆ. ಡಾ. ಎಚ್. ಎಸ್ ಬಲ್ಲಾಳರ ಅಧ್ಯಕ್ಷತೆಯಲ್ಲಿ ಡಾ. ಜಿ. ಶಂಕರ್ ಶುಭಾಶಂಸನೆಗೈಯಲಿದ್ದಾರೆ. ಅಭ್ಯಾಗತರಾಗಿ ಹರಿಯಪ್ಪ ಕೋಟ್ಯಾನ್, ಬಿ. ರಾಜಗೋಪಾಲ್ ಹಾಗೂ ಅನ್ನಪೂರ್ಣಾ ಮಹಾಬಲೇಶ್ವರ ಎಂ. ಎಸ್. ಉಪಸ್ಥಿತರಿರುವರೆಂದು ಸಂಸ್ಥೆಯ ಅಧ್ಯಕ್ಷ …

ಎಂ. ಎಸ್. ಮಹಾಬಲೇಶ್ವರ ಅವರಿಗೆ ಅಭಿನಂದನಾ ಕಾರ್ಯಕ್ರಮ. Read More »

ಶ್ರೀ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರಿಗೆ ಯಕ್ಷಗಾನ ಕಲಾರಂಗ ವತಿಯಿಂದ ಫಲ-ಕಾಣಿಕೆ ಸಮರ್ಪಣೆ.

ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪೀಠಾರೋಹಣದ “ವಿಶ್ವ ಸುವರ್ಣೋತ್ಸವ”ವನ್ನು ರಾಯಚೂರಿನ ಭಕ್ತರು ಒಂದು ವಾರ ಪರ್ಯಂತ ಸಾವಿರಾರು ಮಂದಿಯ ಸಮಕ್ಷ ಶ್ರದ್ಧಾ ಭಕ್ತಿಯಿಂದ ಏರ್ಪಡಿಸಿದರು. 19-4-2023ರಂದು ನಡೆದ ಮಂಗಲ ಮಹೋತ್ಸವ ಸಮಾರಂಭದಲ್ಲಿ ಯಕ್ಷಗಾನ ಕಲಾರಂಗದ ಪ್ರತಿನಿಧಿಗಳಾಗಿ ಮುರಲಿ ಕಡೆಕಾರ್, ನಾರಾಯಣ ಎಂ.ಹೆಗಡೆ, ಎಚ್.ಎನ್.ಶ್ರಂಗೇಶ್ವರ ಭಾಗವಹಿಸಿ ಶ್ರೀಗಳಿಗೆ ಭಕ್ತಿಪೂರ್ವಕ ಫಲ ಪುಷ್ಪ ಕಾಣಿಕೆ ಸಮರ್ಪಿಸಿ ಅನುಗ್ರಹ ಪಡೆದರು. ವಿಶ್ವಪ್ರಿಯತೀರ್ಥ ಶ್ರೀಪಾದರು ಸಂಸ್ಥೆಯನ್ನು ವಿಶೇಷವಾಗಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅವರ ಎರಡನೇ ಪರ್ಯಾಯದಲ್ಲಿ ಅವರೇ ಉದ್ಘಾಟಿಸಿದ ವಿದ್ಯಾಪೋಷಕನ್ನು ಪ್ರತೀವರ್ಷ …

ಶ್ರೀ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರಿಗೆ ಯಕ್ಷಗಾನ ಕಲಾರಂಗ ವತಿಯಿಂದ ಫಲ-ಕಾಣಿಕೆ ಸಮರ್ಪಣೆ. Read More »

ಅಂಬಲಪಾಡಿ ಶೈಕ್ಷಣಿಕ ಶಿಬಿರ ಸಮಾರೋಪ.

ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಅಂಬಲಪಾಡಿ ಶೈಕ್ಷಣಿಕ ಸನಿವಾಸ ಶಿಬಿರವು 23-03-2023ರಂದು ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳರು ಕಳೆದ 11 ವರ್ಷಗಳಿಂದ ಯಕ್ಷಗಾನ ಕಲಾರಂಗ ಶ್ರದ್ಧಾಪೂರ್ವಕವಾಗಿ ಶಿಬಿರವನ್ನು ನಡೆಸುತ್ತಾ ಬಂದಿದ್ದು, ಇದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆ ಸಾಧ್ಯವಾಗಿದೆ. ಇಂತಹ ಔಚಿತ್ಯಪೂರ್ಣ, ಅರ್ಥಪೂರ್ಣ ಕಾರ್ಯಕ್ರಮಗಳಿಗೆ ದೇವಳ ಸದಾ ಆಶ್ರಯ ನೀಡುತ್ತಾ ಬಂದಿದೆ ಎಂದು ಹರ್ಷವ್ಯಕ್ತಪಡಿಸಿದರು. ಹುಬ್ಬಳ್ಳಿಯ ಮೈಲೈಫ್ ಸಂಸ್ಥಾಪಕರೂ, ಶಿಬಿರದ ನಿರ್ದೇಶಕರೂ ಆದ ಶ್ರೀ ಪ್ರವೀಣ್ ವಿ. …

ಅಂಬಲಪಾಡಿ ಶೈಕ್ಷಣಿಕ ಶಿಬಿರ ಸಮಾರೋಪ. Read More »

ವಿದ್ಯಾಪೋಷಕ್ ಸನಿವಾಸ ಶಿಬಿರ ಉದ್ಘಾಟನೆ.

ಯಕ್ಷಗಾನ ಕಲಾರಂಗ ಪ್ರಥಮ ಪಿ.ಯು.ಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಕಳೆದ 11 ವರ್ಷಗಳಿಂದ ಶ್ರೀ ಅಂಬಲಪಾಡಿ ದೇವಳದ ಆಶ್ರಯದಲ್ಲಿ ನಡೆಸಿಕೊಂಡು ಬಂದಿರುವ ಐದು ದಿನಗಳ ಸನಿವಾಸ ಶಿಬಿರ ಮಾರ್ಚ್ 19, 2023ರಂದು ದೇವಳದ ಭವಾನಿ ಮಂಟಪದಲ್ಲಿ ಆರಂಭಗೊಂಡಿತು. ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಜ್ಯೋತಿ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಡಾ. ಎನ್. ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಅಭ್ಯಾಗತರಾಗಿ ಪ್ರೊ. ರಾಜಮೋಹನ್, ಶ್ರೀಮತಿ ಶ್ರೀದೇವಿ ಅರುಣ್ ಕುಮಾರ್, ಶ್ರೀ ಹಿರಿಯಣ್ಣ ಕಿದಿಯೂರು, …

ವಿದ್ಯಾಪೋಷಕ್ ಸನಿವಾಸ ಶಿಬಿರ ಉದ್ಘಾಟನೆ. Read More »

ಯಕ್ಷ ಶಿಕ್ಷಣ ಗುರುಗಳಾದ ಕೇಶವ ಆಚಾರ್ಯ ಇವರಿಗೆ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ವೈದ್ಯಕೀಯ ನೆರವು

ಕಳೆದ ಒಂದು ದಶಕದಿಂದ ಯಕ್ಷ ಶಿಕ್ಷಣ ಟ್ರಸ್ಟ್ ನ ಅಭಿಯಾನದಲ್ಲಿ ಗುರುಗಳಾಗಿ, ಭಾಗವತರಾಗಿ ಸೇವೆ ಸಲ್ಲಿಸುತ್ತಾ ಬಂದ ಕೇಶವ ಆಚಾರ್ಯ ಇವರಿಗೆ ಎರಡು ತಿಂಗಳ ಹಿಂದೆ ವಾಹನ ಅಪಘಾತವಾಗಿ ಕುತ್ತಿಗೆಯ ಭಾಗದ ನರಕ್ಕೆ ತೀವ್ರವಾದ ಆಘಾತವಾಗಿ, ತೀರಾ ಅಸೌಖ್ಯದಲ್ಲಿದ್ದಾರೆ. ಇವರಿಗೆ ಶಾಸಕರೂ,ಯಕ್ಷ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ ಆದ ಕೆ.ರಘುಪತಿ ಭಟ್(15-3-2023) ಇಂದು ಹೇರಂಜೆಯಲ್ಲಿರುವ ಅವರ ಮನೆಗೆ ತೆರಳಿ ಟ್ರಸ್ಟ್ ವತಿಯಿಂದ ಒಂದು ಲಕ್ಷ ರೂಪಾಯಿ ವೈದ್ಯಕೀಯ ನೆರವನ್ನು ನೀಡಿದರು. ಮುಂದೆಯೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ …

ಯಕ್ಷ ಶಿಕ್ಷಣ ಗುರುಗಳಾದ ಕೇಶವ ಆಚಾರ್ಯ ಇವರಿಗೆ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ವೈದ್ಯಕೀಯ ನೆರವು Read More »

ಮನೆ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ.

ಉಡುಪಿಯ ಹಿರಿಯ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯಾದ ಯಕ್ಷಗಾನ ಕಲಾರಂಗವು ಇಲ್ಲಿಯ ತನಕ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗಾಗಿ 37 ಮನೆಗಳನ್ನು ನಿರ್ಮಿಸಿದ್ದು, ಇದೀಗ ಮೇ ಕೊನೆಯ ಒಳಗೆ ಮತ್ತೆ ಹದಿಮೂರು ಮನೆಗಳ ನಿರ್ಮಾಣಕಾರ್ಯ 12-03-2023ರಂದು ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಆರಂಭಗೊಂಡಿತು. ಇಂದು ಪೇಜಾವರ ಶ್ರೀಗಳ ಷಷ್ಠ್ಯಬ್ಧದ ಪ್ರಥಮ ದಿನವಾಗಿದ್ದು(ಜನ್ಮ ನಕ್ಷತ್ರ ) ಈ ಹಿನ್ನೆಲೆಯಲ್ಲಿ ಮನೆ ನಿರ್ಮಾಣದ ಅಭಿಯಾನಕ್ಕೆ ಶ್ರೀಗಳೆ ಚಾಲನೆ ನೀಡಿದ್ದು ವಿಶೇಷವಾಗಿದೆ. ಉಡುಪಿ ಸಂತೆಕಟ್ಟೆಯಲ್ಲಿ ವಿದ್ಯಾಪೋಷಕ್‍ನ ದ್ವಿತೀಯ ಪಿ.ಯು.ಸಿ …

ಮನೆ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ. Read More »

We're currently hard at work gathering information and crafting content to bring you the best experience. Stay tuned for exciting updates!