ಮನೋಹರ್ ಕೆ. ಶ್ರದ್ಧಾಂಜಲಿ ಸಭೆ
ಎಂಟು ವರ್ಷಗಳ ಕಾಲ ಕೋಶಾಧಿಕಾರಿಯಾಗಿ ತನ್ನ ಬದುಕಿನ ಅಮೂಲ್ಯ ಸಮಯ ಮತ್ತು ಅನುಭವವನ್ನು ನೀಡಿ ಸಂಸ್ಥೆಯ ಕಾರ್ಯನಿರ್ವಹಣೆ ಸುಗಮವಾಗಿ ಸಾಗಲು ಕಾರಣೀಕರ್ತರಾಗಿದ್ದ ಮನೋಹರ ಕೆ. ಜೂನ್ 18ರಂದು ನಮ್ಮನ್ನಗಲಿದ್ದು, ಇವರ ಬಗ್ಗೆ ನುಡಿನಮನ ಕಾರ್ಯಕ್ರಮ ಜೂನ್ 20, 2023 ಮಂಗಳವಾರ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಜರಗಿತು. ಮನೋಹರ್ ಅವರ ಒಡನಾಡಿಗಳಾಗಿದ್ದ ಶೇಖರ್ ಅಂಚನ್, ಅನಂತರಾಜ ಉಪಾಧ್ಯ, ಕೆ. ಸದಾಶಿವ ರಾವ್, ಸೂರ್ಯಪ್ರಕಾಶ್, ಗಣೇಶ್ ಬ್ರಹ್ಮಾವರ, ವಿ.ಜಿ. ಶೆಟ್ಟಿ ಭಾವಪೂರ್ಣ ನುಡಿನಮನ ಸಲ್ಲಿಸಿದರು. ನುಡಿನಮನದಲ್ಲಿ ಅವರ ಸ್ನೇಹ, ಕರ್ತವ್ಯನಿಷ್ಠೆ, …