Yakshagana Kalaranga

Yakshagana Kalaranga

ಯಕ್ಷಗಾನ ಸವ್ಯಸಾಚಿ ತೋನ್ಸೆ ಜಯಂತ್ ಕುಮಾರರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಜೂನ್ 26 ರಂದು ನಮ್ಮನ್ನಗಲಿದ ಯಕ್ಷಗಾನ ಗುರು, ಭಾಗವತ, ಯಕ್ಷಗಾನದ ಸರ್ವಾಂಗಗಳನ್ನು ಬಲ್ಲ ಕಲಾವಿದ ತೋನ್ಸೆ ಜಯಂತ್ ಕುಮಾರರ ಶ್ರದ್ಧಾಂಜಲಿ ಸಭೆ ಉಡುಪಿ ಬನ್ನಂಜೆಯ ನಾರಾಯಣ ಗುರು ಅಡಿಟೋರಿಯಂನಲ್ಲಿ ಜೂನ್ 29, 2023ರಂದು ಜರಗಿತು. ಉಡುಪಿಯ ಯಕ್ಷಗಾನ ಕಲಾರಂಗ, ಯಕ್ಷಶಿಕ್ಷಣ ಟ್ರಸ್ಟ್ ಹಾಗೂ ತೋನ್ಸೆಯವರ ಶಿಷ್ಯವೃಂದ ಸಂಯುಕ್ತವಾಗಿ ಆಯೋಜಿಸಿದ್ದವು. ಬನ್ನಂಜೆ ಬಿಲ್ಲವರ ಸೇವಾಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಜರಗಿತು. ಉಡುಪಿಯ ಶಾಸಕರೂ, ಯಕ್ಷಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರೂ ಆದ ಯಶಪಾಲ್ ಸುವರ್ಣ, ನಿಕಟಪೂರ್ವ ಶಾಸಕ, ಯಕ್ಷಶಿಕ್ಷಣ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಕೆ. …

ಯಕ್ಷಗಾನ ಸವ್ಯಸಾಚಿ ತೋನ್ಸೆ ಜಯಂತ್ ಕುಮಾರರಿಗೆ ಭಾವಪೂರ್ಣ ಶ್ರದ್ಧಾಂಜಲಿ Read More »

ತೆಂಕನಿಡಿಯೂರು ಪ್ರೌಢಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ.

ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ವಿಧಾನ ಸಭಾ ವ್ಯಾಪ್ತಿಯ 45 ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಿದ್ದು ಈ ವರ್ಷದ ತರಗತಿಗಳು ಆರಂಭವಾಗಿವೆ. ತೆಂಕನಿಡಿಯೂರು ಪ್ರೌಢಶಾಲೆಗಳಲ್ಲಿ ಜೂನ್ 28ರಂದು ಯಕ್ಷಶಿಕ್ಷಣ ಟ್ರಸ್ಟ್‍ನ ಟ್ರಸ್ಟಿ ನಾರಾಯಣ ಎಂ. ಹೆಗಡೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸುಚೇತಾ ಯು. ಆರ್. ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಗುರು ರತ್ನಾಕರ ಶೆಣೈ ಮತ್ತು ಶಾಲಾ ಶಿಕ್ಷಕವೃಂದದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಟ್ರಸ್ಟ್‍ನ ಆರಂಭದಿಂದಲೂ ಇಲ್ಲಿಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದ, ಮೊನ್ನೆ ನಮ್ಮನ್ನಗಲಿದ ಹಿರಿಯ …

ತೆಂಕನಿಡಿಯೂರು ಪ್ರೌಢಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ. Read More »

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಯಕ್ಷಗಾನ ಆರಂಭಿಸುವ ಕುರಿತು ಪೂರ್ವಭಾವಿ ಸಭೆ.

ಯಕ್ಷಶಿಕ್ಷಣ ಟ್ರಸ್ಟ್ ಕಳೆದ 17 ವರ್ಷಗಳಿಂದ ಉಡುಪಿ ವಿಧಾನಸಭಾ ಕ್ಷೇತ್ರದ 48 ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಾ ಬಂದಿದೆ. ನೂತನವಾಗಿ ಆಯ್ಕೆಯಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಇದರ ಧನಾತ್ಮಕ ಅಂಶವನ್ನು ಮನಗಂಡು ತಮ್ಮ ಕ್ಷೇತ್ರದಲ್ಲಿಯೂ ಇಂತಹ ಒಂದು ಅಭಿಯಾನವನ್ನು ಆರಂಭಿಸಲು ಯಕ್ಷಶಿಕ್ಷಣ ಟ್ರಸ್ಟ್ ಸಹಕಾರ ಕೇಳಿದ ಹಿನ್ನಲೆಯಲ್ಲಿ ಶಾಸಕರು ಮತ್ತು ಟ್ರಸ್ಟ್ ಪದಾಧಿಕಾರಿಗಳ ಸಭೆ ಕಾಪು ಶಾಸಕರ ಕಛೇರಿಯಲ್ಲಿ ಜರಗಿತು. ಇದರಲ್ಲಿ ಸುಮಾರು 15 ಪ್ರೌಢಶಾಲೆಗಳ ಶಿಕ್ಷಕ ಪ್ರತಿನಿಧಿಗಳು ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿ ಮುರಲಿ …

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಯಕ್ಷಗಾನ ಆರಂಭಿಸುವ ಕುರಿತು ಪೂರ್ವಭಾವಿ ಸಭೆ. Read More »

ಮಲ್ಪೆ ಯಕ್ಷಗಾನ ತರಗತಿ ಉದ್ಘಾಟನೆ.

ಯಕ್ಷಶಿಕ್ಷಣ ಟ್ರಸ್ಟ್ ಜೂನ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಉಡುಪಿ ವಿಧಾನಸಭಾ ವ್ಯಾಪ್ತಿಯ 45 ಪ್ರೌಢ ಶಾಲೆಗಳಲ್ಲಿ ಶಾಲಾ ಪಠ್ಯೇತರ ಚಟುವಟಿಕೆಯಾಗಿ ಯಕ್ಷಗಾನ ತರಬೇತಿ ನೀಡುತ್ತಿದ್ದು ಅದರ ಅಂಗವಾಗಿ ಮಲ್ಪೆ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಯಕ್ಷಗಾನ ತರಗತಿಯ ಉದ್ಘಾಟನೆ 19-06-2023ರಂದು ಶಾಲೆಯ ಸಭಾಂಗಣದಲ್ಲಿ ಜರಗಿತು. ತರಗತಿಯನ್ನು ಯಕ್ಷಶಿಕ್ಷಣ ಟ್ರಸ್ಟ್‍ನ ವಿಶ್ವಸ್ಥರಾದ ಪ್ರೊ. ನಾರಾಯಣ ಎಂ ಹೆಗಡೆಯವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಜಗದೀಶರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ …

ಮಲ್ಪೆ ಯಕ್ಷಗಾನ ತರಗತಿ ಉದ್ಘಾಟನೆ. Read More »

ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 41ನೇ ಮನೆ ಹಸ್ತಾಂತರ

ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ ನಯಂಪಳ್ಳಿಯ ಹರ್ಷಿತಾ ಶೆಟ್ಟಿ ಇವಳಿಗೆ ಸಂಸ್ಥೆಯ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ತನ್ನ ಗುರುಗಳಾದ 96 ವಯಸ್ಸಿನ ಪ್ರೊ. ಜಿ. ಆರ್. ರೈಯವರ ಗೌರವಾರ್ಥ ನಿರ್ಮಿಸಿದ ನೂತನ ಮನೆ ‘ಶ್ರೀರಘುನಾಥ’ವನ್ನು ಜೂನ್ 25, 2023ರಂದು ಮೈಟ್ ಇಂಜಿನಿಯರಿಂಗ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾದ ಪ್ರೊ. ಜಿ. ಆರ್. ರೈ ಉದ್ಘಾಟಿಸಿದರು. “ದೇವರು ಎಲ್ಲ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಜನರನ್ನು ಪ್ರೀತಿಸಿ ಅವರಿಗೆ ಸಹಾಯ ಮಾಡುವುದು ದೇವರ ಪೂಜೆ” ಎಂದು ಶ್ರೀ …

ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 41ನೇ ಮನೆ ಹಸ್ತಾಂತರ Read More »

ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 40ನೇ ಮನೆ ಹಸ್ತಾಂತರ

ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾದ ಅಮಾಸೆಬೈಲಿನ ಚೇತನ್ ಮತ್ತು ನಯನಾ ಇವರಿಗೆ ಪಂಚಮಿ ಟ್ರಸ್ಟ್ (ರಿ.), ಗಾಂಧಿ ಆಸ್ಪತ್ರೆ, ಉಡುಪಿ ಇದರ ಪ್ರಾಯೋಜಕತ್ವದಲ್ಲಿ ನವೀಕರಣಗೊಂಡ ಮನೆ ‘ನಂದಾದೀಪ’ ವನ್ನು ಗಾಂಧಿ ಆಸ್ಪತ್ರೆಯ ವರಿಷ್ಠರಾದ ಡಾ. ಹರಿಶ್ಚಂದ್ರ ಹಾಗೂ ಶ್ರೀಮತಿ ಲಕ್ಷ್ಮೀ ಹರಿಶ್ಚಂದ್ರರು ಜೂನ್ 22, 2023ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ. ಹರಿಶ್ಚಂದ್ರರು ಬಡ ವಿದ್ಯಾರ್ಥಿಗಳನ್ನು ಹುಡುಕಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಯಕ್ಷಗಾನ ಕಲಾರಂಗ ಸಂಸ್ಥೆ ದೇಶಕ್ಕೆ ಮಾದರಿಯಾಗಿದೆ. ಸೇವಾಮನೋಭಾವ ಹೊಂದಿರುವ …

ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವತಿಯಿಂದ 40ನೇ ಮನೆ ಹಸ್ತಾಂತರ Read More »

We're currently hard at work gathering information and crafting content to bring you the best experience. Stay tuned for exciting updates!