Yakshagana Kalaranga

ವಿದ್ಯಾಪೋಷಕ್‌ ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹರ್ಷಿತ್ (ಶ್ರೀಮತಿ ದೇವಕಿ ಮತ್ತು ಶ್ರೀ ಸುಂದರ ಪೂಜಾರಿ ಇವರ ಪುತ್ರ) ಇವನಿಗೆ ಬ್ರಹ್ಮಾವರ ತಾಲೂಕಿನ ಹಾರಾಡಿಯ ಮೂಡು ಕುಕ್ಕುಡೆಯಲ್ಲಿ, ಬೈಕಾಡಿ ಕೃಷ್ಣಯ್ಯ ಮತ್ತು ಯಶೋದಾದೇವಿ ಇವರ ಪುತ್ರ ಶ್ರೀ ಬಿ. ನರಹರಿ ಹಾಗೂ ಸಹೋದರರು ತಮ್ಮ ಮಾತೃಶ್ರೀಯವರ ಶತಾಬ್ದಿ ಸಂದರ್ಭದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಯಶೋದಾಕೃಷ್ಣ’
ಇಂದು (23.06.2026) ಉದ್ಘಾಟನೆಗೊಂಡಿತು. ಜ್ಯೋತಿ ಬೆಳಗಿಸಿದ ಮಣಿಪಾಲ ಟೆಕ್ನಾಲಜೀಸ್ ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಶ್ರೀ ಗೌತಮ್ ಪೈ ಅವರು ಯಕ್ಷಗಾನ ಕಲಾರಂಗ ಮಾಡುತ್ತಿರುವ ಯಕ್ಷಗಾನ ಕಲೆ ಕಲಾವಿದರ ಕ್ಷೇಮಚಿಂತನೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸಮಾಜಪರ ಕಾಳಜಿಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಹರ್ಷಿತನಿಗೆ ಚೆನ್ನಾಗಿ ಕಲಿತು ಬೇರೆಯವರಿಗೆ ಉದ್ಯೋಗ ನೀಡುವಷ್ಟು ಎತ್ತರಕ್ಕೆ ಬೆಳೆಯ ಬೇಕೆಂದು ಶುಭ ಹಾರೖಸಿದರು. ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಹರಿನಾರಾಯಣದಾಸ ಆಸ್ರಣ್ಣರು ಮಾತನಾಡಿ ಮನುಷ್ಯನಿಗೆ ಮನೆ ಕೇವಲ ಆಶ್ರಯ ತಾಣವಷ್ಟೇ ಅಲ್ಲ, ಅವನ ಎಲ್ಲಾ ಇಷ್ಟಾರ್ಥಗಳ ಈಡೇರಿಕೆಗೆ ಅದು ಅತ್ಯಂತ ಮುಖ್ಯ ಎಂಬುದನ್ನು ಸೊಗಸಾಗಿ ವಿವರಿಸಿ, ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಕಲಾರಂಗದ ಕೊಡುಗೆ ಅನನ್ಯ ಎಂದು ಹೇಳಿದರು. ಮಣಿಪಾಲ ಟೆಕ್ನಾಲಜೀಸ್ ಲಿ.ನ ಸೀನಿಯರ್ ಜನರಲ್ ಮ್ಯಾನೇಜರ್,ಮನೆಯ ಪ್ರಾಯೋಜಕರೂ ಆದ ಬಿ. ನರಹರಿ ಯಕ್ಷಗಾನ ಕಲಾರಂಗ ಬಡ ವಿದ್ಯಾರ್ಥಿಗೆ ತಮ್ಮ ಮಾತಾಪಿತರ ನೆನಪಿನಲ್ಲಿ ಮನೆ ನಿರ್ಮಿಸಿ ಕೊಡುವ ಅವಕಾಶ ಕಲ್ಪಿಸಿ ನಮ್ಮ ಕುಟುಂಬವನ್ನು ಧನ್ಯರನ್ನಾಗಿಸಿದೆ ಎಂದರು. ಮಣಿಪಾಲ ಮೀಡಿಯ ಲಿ. ನ ನಿವೃತ್ತ ಅಧಿಕಾರಿ ನಾರಾಯಣ ಬಿ.ಕೆ. ತಮ್ಮ ತೀರ್ಥರೂಪರ ಶ್ರದ್ಧೆಯ ದುಡಿಮೆಗೆ ಪೈ ಬಂಧುಗಳು ತೋರಿದ ಔದಾರ್ಯ, ತಮ್ಮ ತಾಯಿಯ ಪರಿಶ್ರಮದ ದುಡಿಮೆಯನ್ನು ಸ್ಮರಿಸಿ ಕೊಂಡರು. ವೇದಿಕೆಯಲ್ಲಿ ಮಣಿಪಾಲ್ ಟೆಕ್ನಾಲಾಜಿಸ್ ನ ಸಿ.ಇ.ಓ. ಅಭಯ್ ಗುಪ್ತೆ, ಗ್ರೂಪ್ ಸಿ.ಎಚ್.ಆರ್.ಒ.ಪ್ರಮೋದ್ ಫೆರ್ನಾಂಡಿಸ್ ಹಾಗು ಜ್ಯೋತಿ ನರಹರಿ, ಲೋಲಾಕ್ಷಿ ರತ್ನಾಕರ, ಭಾರತಿ ನಾರಾಯಣ, ಉಪೇಂದ್ರ ಸೋಮಯಾಜಿ,
ಮನೋಜ ಬೈಕಾಡಿ, ಡಾ. ಅನನ್ಯಾ ಬೈಕಾಡಿ, ಶ್ರೀಪತಿ ಆಚಾರ್ಯ.ಪ್ರಸನ್ನ ಕುಮಾರ್, ಮಣಿಪಾಲ್ ಗ್ರೂಪ್ ನ ರಾಜೇಶ್ ಶೇಟ್,ಮಧು ಬಿ.ಎಸ್., ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು. ಡಾ.ವಿರೂಪಾಕ್ಷ ದೇವರ ಮನೆ, ವಿಷ್ಣುಮೂರ್ತಿ ಭಟ್, ರಾಮಚಂದ್ರ ಉಪಾಧ್ಯ, ಗುರುರಾಜ ಭಟ್,ಮಹಾಲಕ್ಷೀ ಸೋಮಯಾಜಿ, ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್,ಕೋಶಾಧಿಕಾರಿ ಕೆ. ಸದಾಶಿವ ರಾವ್, ಜತೆಕಾರ್ಯದರ್ಶಿ ವಿದ್ಯಾಪ್ರಸಾದ್, ಸದಸ್ಯರುಗಳಾದ ಯು.ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ಯು.ಅನಂತರಾಜ ಉಪಾಧ್ಯ, ಹಿರಿಯಣ್ಣ ಕಿದಿಯೂರ್, ಡಾ.ರಾಜೇಶ ನಾವುಡ, ಎಚ್. ಎನ್.ವೆಂಕಟೇಶ್, ನಟರಾಜ ಉಪಾಧ್ಯ, ಕಿಶೋರ್ ಸಿ. ಉದ್ಯಾವರ, ಗಣೇಶ ಬ್ರಹ್ಮಾವರ, ಸುಜಯೀಂದ್ರ ಹಂದೆ, ಅಜಿತ್ ಕುಮಾರ್,ಪ್ರಭಾಕರ ಭಂಡಿ, ನಾಗರಾಜ ಹೆಗಡೆ,ಜಯರಾಮ ಪಡಿಯಾರ್, ರಘುರಾಮ್ ಬೈಕಾಡಿ ಭಾಗವಹಿಸಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು.ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!