











ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ದ್ವಿತೀಯ ವರ್ಷದಲ್ಲಿ ಅರಿವಳಿಕೆ ತರಬೇತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಚೇತನ್ ಜೋಗಿ (ಶ್ರೀಮತಿ ರತ್ನಾ ಜೋಗಿ ಮತ್ತು ಶ್ರೀ ಉದಯ ಜೋಗಿ ಇವರ ಪುತ್ರ) ಇವನಿಗೆ ಕಾಪು ತಾಲೂಕಿನ ಶಂಕರಪುರದಲ್ಲಿ ಮಹಾದಾನಿಗಳಾದ ಆದಿಉಡುಪಿಯ ಗುರುರಾಜ ಅಮೀನ್ ಇವರ ಪ್ರಾಯೋಜಕತ್ವದಲ್ಲಿ ನವೀಕರಿಸಿದ ‘ಜಯಲಕ್ಷ್ಮೀ ನಿಲಯ’ ಮನೆಯನ್ನು 26.01.2026ರಂದು ಕಾಪು ಶಾಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ನನಗೆ ಯಕ್ಷಗಾನ ಕಲಾರಂಗದ ಕಾರ್ಯಕ್ರಮಕ್ಕೆ ಬರುವುದೆಂದರೆ ಎಲ್ಲಿಲ್ಲದ ಉತ್ಸಾಹ. ಅವರಿಗಿರುವ ಸಾಮಾಜಿಕ ಬದ್ಧತೆ, ಕಳಕಳಿ ಅನನ್ಯ. ಇದು ಸಾಮಾಜಿಕವಾಗಿ ಕೆಲಸ ಮಾಡುವ ಎಲ್ಲ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು. ಆದರ್ಶ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ವಿಮಲಾ ಚಂದ್ರಶೇಖರ್ ಅವರು ಮಾತನಾಡಿ ಯಕ್ಷಗಾನ ಕಲಾರಂಗದ ಕಾರ್ಯಚಟುವಟಿಕೆಗಳ ಬಗ್ಗೆ ಕೇಳಿದ್ದೆ ಇವತ್ತು ಅದರ ಪ್ರತ್ಯಕ್ಷ ದರ್ಶನವಾಯಿತು. ಅರ್ಹರಿಗೆ ಮನೆ ನಿರ್ಮಿಸಿ ಯಾವ ಆಡಂಬರವಿಲ್ಲದೆ ಸರಳ ಸಮಾರಂಭದ ಮೂಲಕ ಹಸ್ತಾಂತರಿಸುವ ಕ್ರಮ ಬೇರೆಡೆ ಕಾಣಸಿಗದು ಎಂದರು. ಗುರುರಾಜ ಅಮೀನರು ತಾಯಿ – ತಂದೆಯರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ವಿದ್ಯಾರ್ಥಿಗೆ ಕಿವಿಮಾತು ಹೇಳಿದರು. ಶ್ರೀಮತಿ ಜಯಲಕ್ಷ್ಮೀ ಗುರುರಾಜ ಅಮೀನ್, ನಿವೃತ್ತ ಪ್ರಾಧ್ಯಾಪಕಿ ಶಾರದಾ ಮೇಡಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾದ ಯು. ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ ಮುದ್ರಾಡಿ, ಹಿರಿಯಣ್ಣ ಕಿದಿಯೂರ್, ಕಿಶೋರ್ ಸಿ. ಉದ್ಯಾವರ, ಗಣಪತಿ ಭಟ್, ಎಚ್. ಎನ್. ವೆಂಕಟೇಶ್, ಅಶೊಕ ಎಂ., ನಾಗರಾಜ ಹೆಗಡೆ, ಸುದರ್ಶನ ಬಾಯರಿ, ವಿಶ್ವನಾಥ, ಚಂದ್ರಕಾಂತ ಕೆ. ಎನ್. ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.