














ಸಂಸ್ಥೆಯು ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಕಮಲಶಿಲೆ ಮೇಳದ ಕಲಾವಿದರೂ ಹಾಗೂ ಯಕ್ಷಶಿಕ್ಷಣದ ಗುರುಗಳೂ ಆದ ವಿಘ್ನೇಶ್ ಪೈ ಇವರಿಗೆ ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ,ಉಡುಪಿ ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತ ಮುಕ್ತೇಸರರಾಗಿದ್ದ, ಪುತ್ರಾಯ ಕೃಷ್ಣ ಭಟ್ ಮತ್ತು ಅವರ ಧರ್ಮಪತ್ನಿ ಗಂಗಮ್ಮ ಇವರ ಸ್ಮರಣೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ಮನೆ ‘ಗಂಗಾಕೃಷ್ಣ’ವನ್ನು 29.10.2025 ರಂದು ಅವರ ಸುಪುತ್ರ ಪಿ. ದಾಮೋದರ ಭಟ್ ಉದ್ಘಾಟಿಸಿದರು.ಹಿರಿಯ ಯಕ್ಷಗಾನ ಕಲಾವಿದರಾದ ಆರ್ಗೋಡು ಮೋಹನದಾಸ್ ಶೆಣೈಯವರು ಶುಭಾಶಂಸನೆಯಲ್ಲಿ ಯಕ್ಷಗಾನ ಕಲಾರಂಗ ಕಲೆ, ಕಲಾವಿದರು ಮತ್ತು ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಉತ್ಕರ್ಷಕ್ಕೆ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದರು. ವಿಘ್ನೇಶನನ್ನುದ್ದೇಶಿಸಿ ಕಲಾವಿದನ ರಂಗ ನಿರ್ವಣೆಗೆ ಓದು,ಹಿರಿಯರ ಮಾರ್ಗದರ್ಶನ, ಸಾಮಾಜಿಕ ಮನ್ನಣೆಗೆ ಪರಿಶುದ್ಧ ವ್ಯಕ್ತಿತ್ವ ಬಹಳ ಮುಖ್ಯ ಎಂದು ಹೇಳಿದರು. ಅಭ್ಯಾಗತರಾಗಿ ಭಾಗವಹಿಸಿದ್ದ ಸಿದ್ದಾಪುರದ ಖ್ಯಾತ ವೈದ್ಯ, ಅರ್ಥಧಾರಿ ಡಾ.ಜಗದೀಶ್ ಶೆಟ್ಟಿಯವರು ಕಲಾರಂಗದ ಪಾರದರ್ಶಕತೆ ಈ ಎತ್ತರದ ಸಾಧನೆಗೆ ಕಾರಣವಾಗಿದ್ದು,ಸಂಸ್ಥೆಯೊಂದಿಗೆ ತಾನಿದ್ದೇನೆ ಎಂದರು. ಬೆಂಗಳೂರಿನ ನಿವೃತ್ತ ಇಂಜಿನೀಯರ್ ಪಿ. ಎಲ್. ರಾವ್ ಕಲಾರಂಗದ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಪುತ್ತೂರು ದೇವಳದ ಆಡಳಿತ ಮುಕ್ತೇಸರರಾದ ಪಿ. ಕೃಷ್ಣಮೂರ್ತಿ ಭಟ್ ಮನೆ ನಿರ್ಮಾಣದ ಹಿನ್ನೆಲೆಯನ್ನು ತಿಳಿಸಿದರು. ತನಗೆ ಯಾವುದೇ ಖರ್ಚಿಲ್ಲದೆ ಸುಂದರ ಮನೆಯನ್ನು ನಿರ್ಮಿಸಿಕೊಟ್ಟ ದಾನಿಗಳಿಗೆ ವಿಘ್ನೇಶ್ ಪೈ ಕೃತಜ್ಞತೆ ಸಲ್ಲಿಸಿದರು. ಕೃಷ್ಣಭಟ್ಟರ ಪುತ್ರಿಯರಾದ ಕರಂಬಳ್ಳಿ ಸರಸ್ವತಿ ಶ್ರೀನಿವಾಸ ಬಾರಿತ್ತಾಯ,ಸಾವಿತ್ರಿ ಲಕ್ಷ್ಮೀನಾರಾಯಣ ರಾವ್ ಸೊಸೆಯಂದಿರಾದ ಸರೋಜಾ ಪಿ.ಎಚ್. ಭಟ್, ಶಾಂತಾ ರಾಮ ಭಟ್ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ.ಭಟ್, ಕೋಶಾಧಿಕಾರಿ ಪ್ರೊ.ಕೆ.ಸದಾಶಿವ ರಾವ್, ಜತೆಕಾರ್ಯದರ್ಶಿ ವಿದ್ಯಾಪ್ರಸಾದ್, ಅನಂತರಾಜ ಉಪಾಧ್ಯಾಯ,ನಿರಂಜನ ಭಟ್,ಪ್ರಸಾದ್ ರಾವ್, ಸುದರ್ಶನ್ ಬಾಯಿರಿ ಭಾಗವಹಿಸಿದ್ದರು.ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಊರ ಪ್ರಮುಖರಾದ ಕೃಷ್ಣಮೂರ್ತಿ ಭಟ್, ಶಂಕರ ಐತಾಳ,ಗೋಪಾಲ್ ಕಾಂಚನ್, ನಾರಾಯಣ ಶೆಟ್ಟಿ ಹಾಗೂ ಕಮಲಶಿಲೆ ಮೇಳದ ಕಲಾವಿದರು ಭಾಗವಹಿಸಿದ್ದರು. ಆರಂಭದಲ್ಲಿ ಕಮಲಶಿಲೆ ಮೇಳದ ಗಜೇಂದ್ರ ಶೆಟ್ಟಿ ಮತ್ತು ನಾಗರಾಜ ನಾಯಕ್ ಪ್ರಾರ್ಥನೆಗೖದರು.