




ವಿದ್ಯಾಪೋಷಕ್‍ನ ಇಂಜಿನೀಯರ್, ಮೆಡಿಕಲ್ ಹಾಗು ಸ್ನಾತಕೋತ್ತರದ ವಿವಿಧ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಸಮಾವೇಶವು ಸಂಸ್ಥೆಯ ಐವೈಸಿ ಸಭಾಭವನದಲ್ಲಿ 24.08.2025 ರಂದು ಜರಗಿತು.ಇದೇ ಸಂದರ್ಭದಲ್ಲಿ ಸಂಸ್ಥೆಯ 50ನೇ ವರ್ಷದ ವಾರ್ಷಿಕ ಸಂಚಿಕೆಯನ್ನು ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರೂ ಹಾಗೂ ಕೋಟೇಶ್ವರದ ಸಹನಾ ಕನ್ವೆನ್ಶನ್‍ನ ಮಾಲಕರಾದ ಸುರೇಂದ್ರ ಶೆಟ್ಟಿಯವರು ಉದ್ಘಾಟನೆಗೊಳಿಸಿ ಸಂಸ್ಥಗೆ ಶುಭ ಹಾರೈಸಿದರು. ಸಮಾರಂಭದಲ್ಲಿ ಸಂಸ್ಥೆಯ ದಾನಿಗಳಾದ ಡಾ. ಸುದರ್ಶನಮೂರ್ತಿ, ಲಕ್ಷ್ಮೀ ಎಸ್. ಮೂರ್ತಿ, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಆರ್.ಹೆಗಡೆ, ಡಾ. ಎಂ.ಎಸ್. ರಾವ್, ಡಾ. ಯು.ಸಿ.ನಿರಂಜನ್, ಕೃಷ್ಣಪ್ರಸಾದ್ ಅಡ್ಯಂತಾಯ, ಜಯರಾಮ್ ಪಡಿಯಾರ್ ಸಂಸ್ಥೆಯ ಉಪಾಧ್ಯಕ್ಷರಾದ ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ.ಸದಾಶಿವ ರಾವ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾಪೋಷಕ್‍ಗೆ ಆಯ್ಕೆಯಾದ ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ ನಾಲ್ಕೂರಿನ ಅಂಕಿತಾಳಿಗೆ ಮೊಬೈಲನ್ನು ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಹುಬ್ಬಳ್ಳಿಯ ಮೈಲೈಫ್ ಸಂಸ್ಥೆಯ ಸಂಸ್ಥಾಪಕ ಪ್ರವೀಣ್ ಗುಡಿ, ಮಾಹೆಯ ಉಪನ್ಯಾಸಕರಾದ ಶಣ್ಮುಖರಾಜ್, ರಮ್ಯಾ ಲೋಕೇಶ್, ಅಶ್ಮಿತಾ, ಕಾರ್ಮಿಕದ ಸಂದೇಶ್ ಕುಮಾರ್, ಸುಜಯ್ ಕುಮಾರ್ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ.ಹೆಗಡೆ ಧನ್ಯವಾದ ಸಲ್ಲಿಸಿದರು. ಸದಸ್ಯರಾದ ವಿಜಯ ಕುಮಾರ್ ಮುದ್ರಾಡಿ, ವಿದ್ಯಾಪ್ರಸಾದ್, ಸಂತೋಷಕುಮಾರ್ ಶೆಟ್ಟಿ, ಅನಂತರಾಜ್ ಉಪಾಧ್ಯ, ಕಿಶೋರ್ ಸಿ.ಉದ್ಯಾವರ, ಮಂಜುನಾಥ ಕಾರ್ಯಕ್ರಮದಲ್ಲಿ ಸಹಕರಿಸಿದರು.280 ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಿದರು