05-02-2025 ರಂದು ಕಾರ್ಕಳ ತಾಲೂಕಿನ ಶಿವತಿಕೆರೆಯ ಹಿರಿಯಂಗಡಿಯಲ್ಲಿ ವಿದ್ಯಾಪೋಷಕ್ ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಂದರ್ಶಿನಿ ಇವಳಿಗೆ ಉಡುಪಿಯ ನಿವೃತ್ತ ಬ್ಯಾಂಕ್ ಉದ್ಯೋಗಿಗಳಾದ ಸದಾನಂದ ಪಿ.ಶೆಣೈ – ಸಹನಾ ಎಸ್. ಶೆಣೈ ಅವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ 64ನೇ ಮನೆ ” ಸಹನಾ ಸದನ”ವನ್ನು ಸದಾನಂದ ಪಿ .ಶೆಣೈ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಕಲಾರಂಗ ದಾನಿಗಳು ನೀಡಿದ ಒಂದು ರೂಪಾಯಿಯೂ ಪೋಲಾಗದಂತೆ ಫಲಾನುಭವಿಗಳಿಗೆ ತಲಪಿಸುತ್ತದೆ. ಈ ಸಂಸ್ಥೆಗೆ ದಾನ ನೀಡಿ ಆನಂದ ಅನುಭವಿಸಿದ್ದೇನೆ ಎಂದರು. ಅಧ್ಯಕ್ಷ ಸ್ಥಾನವಹಿಸಿದ ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಅವರು ಮಾತನಾಡಿ ಯಕ್ಷಗಾನ ಕಲಾರಂಗ ಸಮಾಜಪರ ಕಾಳಜಿಯಿಂದ ಮಾಡುವ ಕೆಲಸಗಳು ಸರಕಾರ ಅನುಸರಿಸಿ ಅನುಷ್ಠಾನಗೊಳಿಸಲು ಮಾದರಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಡಾ. ವಿರೂಪಾಕ್ಷ ದೇವರುಮನೆಯವರು ಯಕ್ಷಗಾನ ಕಲಾರಂಗದ ಸೇವಾನಾಯಕತ್ವವನ್ನು ಪ್ರಶಂಸಿಸಿದರು. ನಿವೃತ್ತ ಉಪನ್ಯಾಸಕ ಡಾ. ಸಿ. ಪಿ ಅತಿಕಾರಿ, ನಿವೃತ್ತ ಬ್ಯಾಂಕ್ ಅಧಿಕಾರಿ, ದಾನಿ,ಅಶೋಕ ನಾಯಕ್, ಸಾಮಾಜಿಕ ಕಾರ್ಯಕರ್ತ ವಿಠಲ ಕುಂದರ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಕೋಶಾಧಿಕಾರಿ ಕೆ. ಸದಾಶಿವ ರಾವ್ ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲಾಚಾರ್ಯ, ಭುವನಪ್ರಸಾದ್ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯ, ದಿನೇಶ್ ಪಿ. ಪೂಜಾರಿ, ಎ. ಅಜಿತ್ ಕುಮಾರ್, ಕೃಷ್ಣರಾಜ ತಂತ್ರಿ, ಕಿಶೋರ್, ಉಪಸ್ಥಿತರಿದ್ದರು.ಎಸ್.ವಿ.ಟಿ.ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯೋಗೇಂದ್ರ ನಾಯಕ್ ಹಾಗೂ ಶಿಕ್ಷಕಿ ಪದ್ಮಾವತಿ ಪಾಲುಗೊಂಡ ಆತ್ಮೀಯ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ ಧನ್ಯವಾದ ಸಮರ್ಪಿಸಿದರು. ಎಚ್.ಎನ್. ಶೃಂಗೇಶ್ವರ ಸಹಕರಿಸಿದರು