ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾದ,ನಿವೃತ್ತ ಬ್ಯಾಂಕ್ ಉದ್ಯೋಗಿ ಸದಾನಂದ ಶೆಣೈ ಪಿ. ತನ್ನ 70ರ ವರ್ಷಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿಕೊಂಡರು. ತನ್ನ ಪತ್ನಿ ಸಹನಾ ಎಸ್. ಶೆಣೈ ಅವರೊಂದಿಗೆ ಮೇ 12, 2024ರಂದು ವಿದ್ಯಾಪೋಷಕ್‍ನ 70 ವಿದ್ಯಾರ್ಥಿಗಳಿಗೆ ತಲಾ 5000/- ದಂತೆ ಒಟ್ಟು 3,50,000 ರೂ.ವಿದ್ಯಾರ್ಥಿವೇತನವನ್ನು ನೀಡಿ ಔದಾರ್ಯ ಮೆರೆದರು.ಅವರ ಈ ಉದಾರ ಕೊಡುಗೆಗೆ ಸಂಸ್ಥೆಯ ಹೃದಯ ಪೂರ್ವಕ ಕೃತಜ್ಞತೆಗಳು.