ಆದಿಉಡುಪಿ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಉದ್ಘಾಟನೆ ಆಗಸ್ಟ್ 10, 2023 ಗುರುವಾರ ಶಾಲಾ ಸಭಾಭವನದಲ್ಲಿ ನೆರವೇರಿತು. ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ ಈ ಬಾರಿ ಎಪ್ಪತ್ತು ಪ್ರೌಢಶಾಲೆಗಳಲ್ಲಿ ಯಕ್ಷಗಾನ ಕಲಿಕೆ ಆರಂಭಗೊಂಡಿದ್ದು, ಇನ್ನಷ್ಟು ಶಾಲೆಗಳಿಂದ ಬೇಡಿಕೆ ಬರುತ್ತಿದ್ದು, ಗುರುಗಳ ಕೊರತೆಯಿಂದಾಗಿ ಕೋರಿಕೆ ಈಡೇರಿಸಲಾಗುತ್ತಿಲ್ಲ.ಇದು ಯಕ್ಷಶಿಕ್ಷಣದ ಬಗೆಗಿರುವ ಆಸಕ್ತಿಯ ದ್ಯೋತಕವಾಗಿದೆ ಎಂಬುದಾಗಿ ನುಡಿದರು. ಮುಖ್ಯ ಶಿಕ್ಷಕ ರವೀಂದ್ರರು ಸ್ವಾಗತಿಸಿದರು. ಶಾಲಾ ಸಂಚಾಲಕ ಟಿ. ಕೆ. ಗಣೇಶ್ ರಾವ್, ಉಡುಪಿ ಮೆಸ್ಕಾಂ ಅಧಿಕಾರಿ ಎಸ್. ಗಣರಾಜ ಭಟ್, ಯಕ್ಷಗಾನ ಗುರು ಶಾಂತರಾಮಾ ಆಚಾರ್ಯ ಶುಭಾಶಂನಗೈದರು.ಶಿಕ್ಷಕರಾದ ಡೇವಿಡ್ ಅಲ್ಬರ್ಟ್. ಸುರೇಶ ನಾಯ್ಕ, ಅಶೋಕ್ ಹಾಗೂ ಸುಧಾಕರ ಉಪಸ್ಥಿತರಿದ್ದರು. ಶಿಕ್ಷಕ ಉಮೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಆಸಕ್ತ 40 ವಿದ್ಯಾರ್ಥಿಗಳು ಯಕ್ಷಗಾನ ಕಲಿಯುತ್ತಿದ್ದಾರೆ.