ಯಕ್ಷಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಆಶಯದಂತೆ ಮೂಡುಬೆಳ್ಳೆಯ ಸೈಂಟ್ ಲಾರೆನ್ಸ್ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿಯನ್ನು ಶಾಲಾ ಮುಖ್ಯಸ್ಥರಾದ ವಂದನೀಯ ಪ್ರದೀಪ್ ಕಾರ್ಡೋಝಾ 18-07-2023ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಕಾಮತ್ ಸ್ವಾಗತಿಸಿದರು. ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ವಿ.ಜಿ ಶೆಟ್ಟಿ, ವಿದ್ಯಾಪ್ರಸಾದ್, ನಿವ್ರತ್ತ ಶಿಕ್ಷಕ ಪದ್ಮನಾಭ ನಾಯಕ್ ಶುಭಾಶಂನೆಗೈದರು. ಯಕ್ಷಗಾನ ಗುರುಗಳಾದ ಶಾಂತಾರಾಮ ಆಚಾರ್ಯ ಉಪಸ್ಥಿತರಿದ್ದರು.ಶಿಕ್ಷಕರಾದ ಸುಧೀರ್ ನಾಯಕ್ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಜಾನ್ ಕ್ಯಾಸ್ಟಲೀನೋ ವಂದನಾರ್ಪಣೆಗೈದರು.